ರೊಬೋಟಿಕ್ ಅಸಿಸ್ಟಡ್ ಶಸ್ತ್ರಚಿಕಿತ್ಸೆ


ರೊಬೋಟಿಕ್ ಅಸಿಸ್ಟಡ್ ಶಸ್ತ್ರಚಿಕಿತ್ಸೆಯು ಜಾಗತಿಕವಾಗಿ ಬಹಳ ಪ್ರಸಿದ್ಧಿ ಪಡೆದಿದ್ದು, ಇದನ್ನು ಅತ್ಯಂತ ಸರಳ ಶಸ್ತ್ರಚಿಕಿತ್ಸಾ ವಿಧಾನವೆಂದು ಪರಿಗಣಿಸಲಾಗಿದೆ. ನಾವು ಇಲ್ಲಿ ಮೈಕ್ರೋಸ್ಕೋಪಿಕ್ ಕ್ಯಾಮೆರಾಗಳನ್ನು ಮತ್ತು ಸೂಕ್ಷ್ಮಸಾಧನಗಳನ್ನು ಬಳಸಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಒಂದು ಸಣ್ಣ ಇನ್ಸಿಷನ್ ಮಾಡುವ ಮೂಲಕ ಸಂಕೀರ್ಣ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತೇವೆ.

OUR STORY

Know About Us

Why Manipal?

ನಾವು ಮಣಿಪಾಲ್ ಆಸ್ಪತ್ರೆಯಲ್ಲಿರುವ ನಮ್ಮ ವೈದ್ಯರನ್ನು ನಂಬುತ್ತೇವೆ ಏಕೆಂದರೆ ಇವರು ರೋಗಿಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಕನಿಷ್ಠ ಅನಾನುಕೂಲತೆಯೊಂದಿಗೆ  ಅತ್ಯದ್ಭುತ ಚಿಕಿತ್ಸಾ ಪ್ರಕ್ರಿಯೆಗಳನ್ನು ಬಳಸಿಕೊಳ್ಳುತ್ತಾರೆ.  ವೈದ್ಯಕೀಯ ಕ್ಷೇತ್ರದಲ್ಲಿ ಮಣಿಪಾಲ್ ಆಸ್ಪತ್ರೆಗಳು ಒಂದು ಸ್ಥಿರವಾಗಿ ಬೆಳೆಯುತ್ತಿರುವ ಆರೋಗ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದು ಚಿಕಿತ್ಸಾ ಪ್ರಕ್ರಿಯೆಗಳಲ್ಲಿ ರೊಬೋಟಿಕ್ ಅಸಿಸ್ಟೆನ್ಸ್ ನೊಂದಿಗೆ ಪರಿಣಿತಿ ಹೊಂದುವ ಮೂಲಕ ತನ್ನ ಮುಡಿಗೆ ಮತ್ತೊಂದು ಗರಿಯನ್ನು ಏರಿಸಿಕೊಂಡಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ಯಾವುದೇ ನವೀನ ತಂತ್ರಜ್ಞಾನವನ್ನು ರೋಗಿಯ ಸುರಕ್ಷಿತ ಮತ್ತು ಸಹಜ ಗುಣಪಡಿಸುವಿಕೆಗಾಗಿ ಬಳಸಲಾಗುತ್ತದೆ. ಸುಧಾರಿತ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ಮತ್ತು ಕನಿಷ್ಠ ಇನ್ವೇಸಿವ್ ತಂತ್ರಜ್ಞಾನವನ್ನು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಬಳಸಲಾಗುತ್ತದೆ. ನಮ್ಮ ರೊಬೋಟಿಕ್ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳು ಮತ್ತು ಚಿಕಿತ್ಸಾ ಆಯ್ಕೆಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದೆ. ನಮ್ಮ ತಂಡದ ಕಾರ್ಯವಿಧಾನ, ಸೇವೆ, ಅನುಭವ, ಅತ್ಯುತ್ತಮ ತಂತ್ರಜ್ಞಾನ, ಚಿಕಿತ್ಸೆಯ ಅನುಭವ ಮತ್ತು ರೋಗಿಯ ಆರೈಕೆಯನ್ನು ಎಲ್ಲರೂ ಶ್ಲಾಘಿಸುತ್ತಾರೆ.

ರೊಬೋಟಿಕ್ ಅಸಿಸ್ಟಡ್ ಶಸ್ತ್ರಚಿಕಿತ್ಸೆಗಳ 

 ಅತ್ಯಧಿಕ ನಿಖರತೆಯಂತಹ ಅಪಾರ ಪ್ರಯೋಜನವನ್ನು ಹೊರತುಪಡಿಸಿ ರೋಗಿಗಳಿಗೆ ಬಹಳ ಕಡಿಮೆ ಪ್ರಮಾಣದ ಒತ್ತಡ, ಕಡಿಮೆ ಆಘಾತ ಮತ್ತು ಕಡಿಮೆ ನೋವು, ಕನಿಷ್ಠ ಇನ್ವೆಸಿವ್ ವಿಧಾನದಿಂದ ಕಡಿಮೆ ಸೋಂಕಿನ ಪ್ರಮಾಣ, ಕಡಿಮೆ ಅಡ್ಡಪರಿಣಾಮಗಳೊಂದಿಗೆ ಅಧಿಕ ಚೇತರಿಕೆಯ ಪ್ರಮಾಣ, ರಕ್ತ ವರ್ಗಾವಣೆಯ ಕಡಿಮೆ ಅಗತ್ಯತೆ ಮತ್ತು ಕಡಿಮೆ ರಕ್ತ ಸ್ರಾವ ಪ್ರಮಾಣ, ಚೇತರಿಕೆ ಪ್ರಮಾಣದಲ್ಲಿ ಹೆಚ್ಚಳ, ಕಡಿಮೆ ಆಸ್ಪತ್ರೆ ವಾಸ, ಸಣ್ಣ ಇನ್ಸಿಷನ್ ಮಾಡುವ ಕಾರಣದಿಂದ ಕಲೆಯ ಕಡಿಮೆ ಸಾಧ್ಯತೆ, ಅಧಿಕ ಮಟ್ಟದ ಸುರಕ್ಷತೆ ಮತ್ತು ರೋಗಿಯ ಅನುಕೂಲ, ಶಸ್ತ್ರಚಿಕಿತ್ಸೆಯಲ್ಲಿ ಅಧಿಕ ಮಟ್ಟದ ನಿಯಂತ್ರಣ ಮತ್ತು ಹತೋಟಿ ಇವೆಲ್ಲಾ ಇರುತ್ತವೆ. 

ಅಂತರರಾಷ್ಟ್ರೀಯ ರೋಗಿ ಆರೈಕೆಯಲ್ಲಿ ವಿಶೇಷಜ್ಞರು - ನಾವು ಮಣಿಪಾಲ್ ಆಸತ್ರೆಯಲ್ಲಿ ಅತ್ಯುತ್ತಮ ರೊಬೋಟಿಕ್ ಅಸಿಸ್ಟಡ್ ಶಸ್ತ್ರಚಿಕಿತ್ಸೆಯನ್ನು ನಮ್ಮ ರೋಗಿಗಳಿಗಾಗಿ ಒದಗಿಸುತ್ತೇವೆ. ಜಗತ್ತಿನ ಮೂಲೆಗಳಿಂದ ಭಾರತಕ್ಕೆ ಬಂದು ನಮ್ಮ ಸಹಾಯವನ್ನು ಬಯಸುವವರಿಗೆ ಗುಣಮಟ್ಟದ ರೊಬೋಟಿಕ್ ಅಸಿಸ್ಟಡ್ ಚಿಕಿತ್ಸಾ ವಿಧಾನಗಳನ್ನು ಕಡಿಮೆ ದರಗಳಲ್ಲಿ ಒದಗಿಸುವ ಖಾತರಿಯನ್ನು ನೀಡುತ್ತೇವೆ. ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿಪರರಿಂದ ಉತ್ಕೃಷ್ಟ ಮಟ್ಟದ ಕಾರ್ಯವನ್ನು ನಡೆಸಲು ರೊಬೋಟಿಕ್ ಅಸಿಸ್ಟಡ್ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡಲು ತಾಂತ್ರಿಕ ಪರಿಣಿತಿಯಲ್ಲಿ ಸುಧಾರಣೆ ಮತ್ತು ಸಾಮರ್ಥ್ಯದಲ್ಲಿ ವೃದ್ಧಿಯು ನಮ್ಮ ಶಕ್ತಿಯಾಗಿದೆ. ತಂತ್ರಜ್ಞಾನದಲ್ಲಿನ ಬೆಳವಣಿಗೆಯೊಂದಿಗೆ, ರೋಗಿಗಳು ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸೆಗಳಿಗೆ ಆದ್ಯತೆ ನೀಡುತ್ತಾರೆ. ಇವೆಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾ, ಮಣಿಪಾಲ್ ಆಸ್ಪತ್ರೆಯು ಅತ್ಯುತ್ತಮ ರೊಬೋಟಿಕ್ ಶಸ್ತ್ರಚಿಕಿತ್ಸೆ ಸೇವೆಯನ್ನು ಒದಗಿಸುತ್ತದೆ

Facilities & Services

ಮಣಿಪಾಲ್ ಆಸ್ಪತ್ರೆಯಲ್ಲಿ ನಡೆಸುವ ರೊಬೋಟಿಕ್ ಶಸ್ತ್ರಚಿಕಿತ್ಸೆಗಳೆಂದರೆ ಸರ್ಜಿಕಲ್ ಆಂಕೋಲಾಜಿ - ಸ್ತ್ರೀರೋಗ ಕ್ಯಾನ್ಸರ್ ಗಳಿಗಾಗಿ(ಗರ್ಭಕೋಶದ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್) ರೊಬೋಟಿಕ್ ಶಸ್ತ್ರಚಿಕಿತ್ಸೆ, ಪ್ಯಾರಾ ಅಯೋಟಿಕ್ ಮತ್ತು ಪೆಲ್ವಿಕ್ ಲಿಂಫಾಡೆನೆಕ್ಟಮಿಯೊಂದಿಗೆ ರಾಡಿಕಲ್ ಹಿಸ್ಟರೆಕ್ಟಮಿ, ಪೆಲ್ವಿಕ್ ಎಕ್ಸೆನ್ಟ್ರಾಕ್ಷನ್ಸ್, ರೊಬೋಟಿಕ್ ಗ್ಯಾಸ್ಟ್ರೋ ಇಂಟೆಸ್ಟಿನಲ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು(ಕೋಲನ್, ಗುದದ್ವಾರ) ರೊಬೋಟಿಕ್ ಅನ್ನನಾಳದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು (ವಿಎಟಿಎಸ್), ಕಲೆರಹಿತ ರೊಬೋಟಿಕ್ ಥೈರಾಯಿಡೆಕ್ಟಮಿ, ಬಾಯಿಯೊಳಗೆ ಟಿಓಎರ್ಸ್ -ಟ್ರಾನ್ಸ್ ಓರಲ್ ರೊಬೋಟಿಕ್ ಶಸ್ತ್ರಚಿಕಿತ್ಸೆಗಳು,  ಗಳನಾಳ, ಧ್ವನಿಪೆಟ್ಟಿಗೆಯ ಕ್ಯಾನ್ಸರ್, ಪುಪ್ಪಸ ಮತ್ತು ಮಿಡಿಯಾಸ್ಟಿನಮ್ ಮತ್ತು ಎದೆಯಲ್ಲಿನ ಗೆಡ್ಡೆಗಳಿಗಾಗಿ(ವಿಎಟಿಎಸ್) ರೊಬೋಟಿಕ್ ಶಸ್ತ್ರಚಿಕಿತ್ಸೆ, ರೊಬೋಟಿಕ್ ಯೂರೋಲಾಜಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು, 

ಯೂರೋಲಾಜಿ- ರೋಬೋಟ್ ಅಸಿಸ್ಟಡ್ ಪಾರ್ಷಿಯಲ್ ನೆಫ್ರೆಕ್ಟೊಮಿ, ರೋಬೋಟ್ ಅಸಿಸ್ಟಡ್ ಸ್ಯಾಕ್ರೊಕಾಲ್ಪೊಪೆಕ್ಸಿ, ರೋಬೋಟ್ ಅಸಿಸ್ಟೆಡ್ ರಾಡಿಕಲ್ ಸಿಸ್ಟೆಕ್ಟಮಿ, ರೋಬೋಟ್ ಅಸಿಸ್ಟೆಡ್ ಪೈಲೋಪ್ಲಾಸ್ಟಿ, 

ಒಬಿಜಿ - ಮೈಯೋಮೆಕ್ಟಮಿ, ಬಿನೈನ್ ಕ್ಯಾನ್ಸರ್‌ಗಳಿಗೆ ಹಿಸ್ಟರೆಕ್ಟಮಿ, ಗರ್ಭಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್, ಪ್ರೋಲ್ಯಾಪ್ಸ್ ಸರ್ಜರಿ, ಗರ್ಭಾಶಯದ ಅನಾಮಲಿಗಾಗಿ ಶಸ್ತ್ರಚಿಕಿತ್ಸೆ, 

ಸರ್ಜರಿ - ಟ್ಯುಬೋಪ್ಲಾಸ್ಟಿ ಸರ್ಜಿಕಲ್ ಗ್ಯಾಸ್ಟ್ರೋಎಂಟರೋಲಾಜಿ- ಗ್ಯಾಸ್ಟ್ರೋಇಂಟೆಸ್ಟಿನಲ್ ಕ್ಯಾನ್ಸರ್ ಗಳಿಗಾಗಿ ಶಸ್ತ್ರಚಿಕಿತ್ಸೆ, ಬಿನೈನ್ ಅನ್ನನಾಳದ ಗ್ಯಾಸ್ಟ್ರಿಕ್ ಅಸ್ವಸ್ಥತೆಗಳು, ಹೆಪಟೊಬಿಲಿಯರಿ ಮತ್ತು ಪ್ಯಾಂಕ್ರಿಯಾಟಿಕ್ ಸರ್ಜರಿ, ಕೊಲೊರೆಕ್ಟಲ್ ಸರ್ಜರಿ, ಸಾಮಾನ್ಯ ಶಸ್ತ್ರಚಿಕಿತ್ಸೆ - ಲೋ ಆಂಟಿರಿಯರ್ ರಿಸೆಕ್ಷನ್, ರೆಕ್ಟೊಪೆಕ್ಸಿ, ಫಂಡೊಪ್ಲಿಕೇಶನ್, ಕೊಲೊನಿಕ್ ಸರ್ಜರಿ, ಗುದನಾಳದ ಕ್ಯಾನ್ಸರ್, 

 ಮಕ್ಕಳ ಶಸ್ತ್ರಚಿಕಿತ್ಸೆ - ಪೀಡಿಯಾಟ್ರಿಕ್ ಕಿಬ್ಬೊಟ್ಟೆಯ ಮತ್ತು ಥೊರಾಸಿಕ್ ಸರ್ಜರಿ, ಪೀಡಿಯಾಟ್ರಿಕ್ ಯೂರೋಲಾಜಿಕಲ್ ಶಸ್ತ್ರಚಿಕಿತ್ಸೆಗಳಲ್ಲಿ ಪೈಲೋಪ್ಲಾಸ್ಟಿ, ಯುರೇಟೆರಿಕ್ ರಿಇಂಪ್ಲಾಂಟೇಶನ್, ನೆಫ್ರೆಕ್ಟಮಿ 

FAQ's

Surgeons who use the robotic system find that for many procedures it enhances precision, flexibility, and control during the operation and allows them to better see the site, compared with traditional techniques. It has fewer complications, such as surgical site infection, less pain, and less blood loss. To know more about robotic surgery treatment in Bangalore, visit Manipal hospitals.

ಹೃದಯ ಸಮಸ್ಯೆಗಳ ಕುರಿತು ಮತ್ತಷ್ಟು ಹೆಚ್ಚು ತಿಳಿದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಮತ್ತು ಇಂದೇ ನಮ್ಮ ವಿಶೇಷಜ್ಞರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ