ರುಮಾಟಾಲಜಿ


ರುಮಾಟಾಲಾಜಿಕಲ್ ಕಾಯಿಲೆಗಳು ಸಮುದಾಯದಲ್ಲಿರುವ ಅತಿ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದ್ದು ಇದು ಒಂದನೇ ಮೂರರಷ್ಟು ಜನಸಂಖ್ಯೆಯಲ್ಲಿ ಕಂಡುಬರುತ್ತದೆ. ಇದರಲ್ಲಿ ಮೃದು ಅಂಗಾಂಶದ ಸಂಧಿವಾತದಿಂದ ಹಿಡಿದು ಕೀಲುಗಳು, ಸ್ನಾಯುಗಳು ಮತ್ತು ಮೂಳೆಗಳ ಮೇಲೆ ಪರಿಣಾಮ ಬೀರುವ ಸಂಧಿವಾತದವರೆಗಿನ ಪ್ರಕಾರಗಳು ಇವೆ. ಮಣಿಪಾಲ್ ಆಸ್ಪತ್ರೆಯ ರುಮಾಟಾಲಜಿ ವಿಭಾಗವು ಸಂಧಿವಾತ ಸಮಸ್ಯೆಗಳ ಸಂಪೂರ್ಣ ಮೌಲ್ಯಮಾಪನ ಮತ್ತು ನಿರ್ವಹಣೆಯನ್ನು ನೀಡುತ್ತದೆ. ಜಗತ್ಪ್ರಸಿದ್ಧ ರುಮಾಟಾಲಾಜಿಸ್ಟ್ ಗಳ ತಂಡವು ಹಲವಾರು ಮಸ್ಕುಲೋಸ್ಕೆಲಿಟಲ್ ಕಾಯಿಲೆಗಳನ್ನು ಮತ್ತು ಸಾಮಾನ್ಯವಾಗಿ ಸಂಧಿವಾತ ಎಂದು ಕರೆಸಿಕೊಳ್ಳುವ ಸಿಸ್ಟೆಮಿಕ್ ಆಟೋಇಮ್ಮ್ಯೂನ್ ಪರಿಸ್ಥಿತಿಗಳನ್ನು ಗುಣಪಡಿಸುವಲ್ಲಿ ಅಪಾರ ಅನುಭವವನ್ನು ಹೊಂದಿದೆ.

OUR STORY

Know About Us

Why Manipal?

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳನ್ನು ರಾಷ್ಟ್ರದ ಉನ್ನತ ಆಸ್ಪತ್ರೆಗಳಲ್ಲಿ ಒಂದಾಗಿ ಶ್ರೇಣಿ ಮಾಡಲಾಗಿದೆ ಮತ್ತು ಇದರ ರುಮಟಾಲಾಜಿ ಚಿಕಿತ್ಸೆಯು ದೇಶದಲ್ಲಿಯೇ ಅತ್ಯಂತ ಸಮಗ್ರವಾಗಿದೆ. ಮಣಿಪಾಲ್ ಆಸ್ಪತ್ರೆಯ ಸಂಧಿವಾತ ತಜ್ಞರು ಸಂಧಿವಾತದ ಸಮಸ್ಯೆಗಳಿರುವ ರೋಗಿಗಳಲ್ಲಿ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಸುಧಾರಿಸಲು ಹೊಸ ನವೀನ ವಿಧಾನಗಳಲ್ಲಿನ ತಮ್ಮ ಸಂಶೋಧನೆ ಮೂಲಕ ಮತ್ತು ಜಗತ್ತಿನಾದ್ಯಂತದ ಸಂಶೋಧಕರ ಸಹಯೋಗದೊಂದಿಗೆ ತಮ್ಮ ಮಿತಿಗಳ ಗೋಡೆಗಳನ್ನು ನಿರಂತರವಾಗಿ ವಿಸ್ತರಿಸುತ್ತಿದ್ದಾರೆ. ರೋಗನಿರ್ಣಯ, ಚಿಕಿತ್ಸೆ ಮತ್ತು ಆರೈಕೆಗಾಗಿ ಬಹುಶಿಸ್ತೀಯ ವಿಧಾನ, ನಾವಿನ್ಯತೆ ಮತ್ತು ಸುಧಾರಿತ ಸಾಧನಗಳು ಮತ್ತು ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟಿರುವ ಮಣಿಪಾಲ್ ಆಸ್ಪತ್ರೆ ರುಮಾಟಾಲಾಜಿ ವಿಭಾಗವು ದೇಶದಲ್ಲಿ ಮುಂಚೂಣಿಯಲ್ಲಿದೆ.

Treatment & Procedures

ಇಂಟ್ರಾ ಆರ್ಟಿಕುಲಾರ್ ಇಂಜೆಕ್ಷನ್

ಅವಲೋಕನ: ಇಂಟ್ರಾ ಆರ್ಟಿಕುಲಾರ್ ಚುಚ್ಚುಮದ್ದು ಒಂದು ರೀತಿಯ ಚಿಕಿತ್ಸಾ ವಿಧಾನವಾಗಿದ್ದು ಇದರಲ್ಲಿ ದ್ರವ ಔಷಧಿಗಳನ್ನು ಹೈಪೋಡರ್ಮಿಕ್ ಸೂಜಿಯ ಮೂಲಕ ಬಾಧಿತ ಕೀಲುಗಳಿಗೆ ನೀಡಲಾಗುತ್ತದೆ. ಈ ಚಿಕಿತ್ಸೆಯನ್ನು ಗೌಟ್, ಟೆಂಡಿನೈಟಿಸ್, ಬರ್ಸೈಟಿಸ್, ರುಮಟಾಯ್ಡ್ ಆರ್ಥರೈಟಿಸ್, ಕಾರ್ಪಲ್ ಟನಲ್ ಸಿಂಡ್ರೋಮ್, ಸೋರಿಯಾಟಿಕ್ ಆರ್ಥರೈಟಿಸ್ ಮತ್ತು ಕೆಲವೊಮ್ಮೆ ಆಸ್ಟಿಯೋ ಆರ್ಥರೈಟಿಸ್ ರೀತಿಯ ಸಮಸ್ಯೆಗಳನ್ನು ಗುಣಪಡಿಸಲು ನೀಡಲಾಗುತ್ತದೆ. ಈ ಚಿಕಿತ್ಸಾ…

Read More

ಮಾನಸಿಕ ಕಾಯಿಲೆಗಳು ಮತ್ತು ಮಾದಕದ್ರವ್ಯ ಸೇವನೆಯ ನಂತರ ಎರಡನೆಯ ಅತ್ಯಂತ ಸಾಮಾನ್ಯ ವೈಎಲ್ಡಿಗಳೆಂದರೆ(ಅಸಮರ್ಥತೆಯೊಂದಿಗೆ ಬದುಕುವುದು) ಸಂಧಿವಾತದ ಸಮಸ್ಯೆಗಳು. ಇಂದು ಭಾರತದಲ್ಲಿ ಅಂದಾಜು 5 ಮಿಲಿಯನ್ ಜನರು ಸಂಧಿವಾತದಿಂದ ಬಳಲುತ್ತಿದ್ದು ಅದರಲ್ಲಿ ಹೆಚ್ಚಿನವರಿಗೆ  ರುಮಟಾಯ್ಡ್ ಆರ್ಥರೈಟಿಸ್ ಇದೆ. ಮಣಿಪಾಲ್ ಆಸ್ಪತ್ರೆಯ ಸಂಧಿವಾತ ತಜ್ಞರು ವಯಸ್ಕರ ಸಂಧಿವಾತದ ಸ್ಥಿತಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಅವರು ಪ್ರತಿಯೊಂದು ರೋಗಿಗೆ ಪರಿಣತ ಮತ್ತು ವೈಯಕ್ತಿಕಗೊಳಿಸಿದ ಆರೈಕೆಯನ್ನು ನೀಡುತ್ತಾರೆ. ನಮ್ಮ ಸಂಧಿವಾತ ತಜ್ಞರು ಆರ್ಥರೈಟಿಸ್, ಆಟೋಇಮ್ಮ್ಯೂನ್ ಕಾಯಿಲೆಗಳು, ಡಿಜನರೇಟಿವ್ ಕೀಲು ಕಾಯಿಲೆಗಳು, ಕ್ರಿಸ್ಟಲ್ ಆರ್ಥರೈಟಿಸ್ ಮತ್ತು ಮೃದು ಅಂಗಾಂಶದ ರುಮಾಟಿಸಂ ನ ಹಲವಾರು ವಿಧಗಳನ್ನೂ ಒಳಗೊಂಡಂತೆ ಸಂಧಿವಾತದ ಸಮಸ್ಯೆಗಳನ್ನು ಮೌಲ್ಯಮಾಪನ ಮಾಡುವಲ್ಲಿ ಮತ್ತು ಗುಣಪಡಿಸುವಲ್ಲಿ ಪರಿಪೂರ್ಣರಾಗಿದ್ದಾರೆ. ಸಂಧಿವಾತ ವಿಭಾಗವು ಇಂಟರ್ನಲ್ ಮೆಡಿಸಿನ್, ಮೂಳೆಚಿಕಿತ್ಸೆ, ಚರ್ಮರೋಗ, ನೆಫ್ರಾಲಜಿ, ಗ್ಯಾಸ್ಟ್ರೋ-ಎಂಟರಾಲಜಿ, ನರವಿಜ್ಞಾನದ ಫಿಸಿಕಲ್ ಮೆಡಿಸಿನ್ ಮತ್ತು ಪುನರ್ವಸತಿ ಮುಂತಾದ ಇತರ ವಿಶೇಷತೆಗಳ ಜೊತೆಯಲ್ಲಿ ಕೆಲಸ ಮಾಡುವ ಅಂತರಶಿಸ್ತೀಯ ಆರೈಕೆಯನ್ನು ಒದಗಿಸುತ್ತದೆ ಮತ್ತು ಈ ಪರಿಸ್ಥಿತಿಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

Facilities & Services

ಮಣಿಪಾಲ್ ಆಸ್ಪತ್ರೆಯಲ್ಲಿನ ರುಮಟಾಲಜಿ ವಿಭಾಗವು ನೋಡಿಕೊಳ್ಳುವ ಮತ್ತು ನಿರ್ವಹಿಸುವ ಸಮಸ್ಯೆಗಳೆಂದರೆ: 

ರುಮಾಟಾಯ್ಡ್ ಆರ್ಥರೈಟಿಸ್, ಆಸ್ಟಿಯೋಆರ್ಥರೈಟಿಸ್, ಸಿರೋನೆಗಟಿವ್ ಆರ್ಥರೈಟಿಸ್, ಆಂಕೈಲೋಸಿಂಗ್ ಸ್ಪಾಂಡಿಲೋಟಿಸ್, ಸೋರಿಯಾಟಿಕ್ ಆರ್ಥರೈಟಿಸ್, ಸ್ಪಾಂಡೈಲೋಆರ್ಥರೈಟಿಸ್, ಗೌಟ್ ರೀತಿಯ ಕ್ರಿಸ್ಟಲ್ ಆರ್ಥರೈಟಿಸ್, ಟೆನ್ನಿಸ್ ಎಲ್ಬೋ, ಪ್ಲಾಂಟರ್ ಫ್ಯಾಸಿಟಿಸ್, ಫೈಬ್ರೊಮಯಾಲ್ಜಿಯಾ, ಲೂಪಸ್, ಜೋಗ್ರನ್ಸ್  ಸಿಂಡ್ರೋಮ್, ಸ್ಕ್ಲೀರೋಡರ್ಮಾ, ಮಯೋಸೈಟಿಸ್, ವ್ಯಾಸ್ಕುಲೈಟಿಸ್, ಎಎನ್‌ಸಿಎ ವ್ಯಾಸ್ಕುಲೈಟಿಸ್, ಕ್ಯುಟೇನಿಯಸ್ ವ್ಯಾಸ್ಕುಲೈಟಿಸ್, ಅಂಗಾಂಗ ಸಮಸ್ಯೆಗಳೊಂದಿಗೆ ಸಂಬಂಧವಿರುವ ಆರ್ಥರೈಟಿಸ್,  ಸಂಯೋಜಕ ಅಂಗಾಂಶ ರೋಗ. 

 

ನೇತ್ರಶಾಸ್ತ್ರ ಸಮಸ್ಯೆಗಳಾದಂತಹ ಯೂವಿಐಟಿಸ್ ಮತ್ತು ಸ್ಕ್ಲೀರೈಟಿಸ್. ಹಲವು ಹೊರರೋಗಿ ಚಿಕಿತ್ಸಾ ಕಾರ್ಯವಿಧಾನಗಳಾದ ಇಂಟ್ರಾ ಆರ್ಟಿಕುಲಾರ್ ಮತ್ತು ಮೃದು ಅಂಗಾಂಶ ಚುಚ್ಚುಮದ್ದುಗಳು, ಚಿಕ್ಕ ಲಾಲಾರಸ ಗ್ರಂಥಿಯ ಬಯಾಪ್ಸಿ, ಸ್ಕಿರ್ಮರ್ ಪರೀಕ್ಷೆ ಮತ್ತು ಉಗುರು ಅಂಚಿನ ಕ್ಯಾಪಿಲ್ಲರೊಸ್ಕೋಪಿ ಚಿಕಿತ್ಸೆಗಳನ್ನು ಇಲ್ಲಿ ಮಾಡಲಾಗುತ್ತದೆ.

FAQ's

Rheumatology represents a subspecialty in internal medicine and pediatrics, which is devoted to the diagnosis and therapy of rheumatic and musculoskeletal diseases. Rheumatic and musculoskeletal diseases (RMDs) are a diverse group of diseases that commonly affect the joints, but can also affect the muscles, other tissues, and internal organs. There are more than 200 different RMDs, affecting both children and adults. Visit Manipal Hospitals for the best rheumatology treatment in Bangalore.

A rheumatologist is a physician, who has received further training in the diagnosis and treatment of musculoskeletal disease and systemic autoimmune conditions. Apart from common arthritis like rheumatoid arthritis, osteoarthritis, gout, Rheumatologists are involved in treating complicated multisystem diseases like Vasculitis / SLE etc.

People with Prolonged/ recurrent joint pain and/or swelling or Pain in the soft tissue region or Back/ neck pain or Persistent Dry eyes and/or mouth or Prolonged unexplained fever or Unexplained skin rash or Ophthalmology conditions such as Uveitis and scleritis where the infection is ruled out. Consult with the rheumatologist in Old Airport Road Bangalore.

ರುಮಟಾಯ್ಡ್ ಆರ್ಥರೈಟಿಸ್, ಸ್ಪಾಂಡೈಲೋಆರ್ಥರೈಟಿಸ್ ಅಥವಾ ಲ್ಯೂಪಸ್ ರೀತಿಯ ಆಟೋಇಮ್ಮ್ಯೂನ್ ಕಾಯಿಲೆಗಳಿದ್ದಾಗ ಜೀವನವಿಡೀ ನಿಮಗೆ ಸಮಸ್ಯೆಯಾಗಬಹುದು. ಮಣಿಪಾಲ್ ಆಸತ್ರೆಯು ತನ್ನ ರೋಗಿಗಳೊಂದಿಗೆ ಉತ್ತಮ ದೀರ್ಘಸಮಯದ ಬಾಂಧವ್ಯ ಬೆಳೆಸಲು ಮತ್ತು ಉನ್ನತ ಮಟ್ಟದ ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸುವಲ್ಲಿ ಬದ್ಧವಾಗಿದೆ. ರುಮ್ಯಾಟಿಕ್ ಸ್ಥಿತಿಗಳ ಹೆಚ್ಚಿನದನ್ನು ತಿಳಿದುಕೊಳ್ಳಲು ಮತ್ತು ಇಂದೇ ತಜ್ಞರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Blogs

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ