ಮನೋವಿಜ್ಞಾನ


ಮಣಿಪಾಲ್ ಆಸ್ಪತ್ರೆಯ ಮನೋವಿಜ್ಞಾನ ವಿಭಾಗವು ತನ್ನ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವ ತನ್ನ ಬದ್ಧತೆಗಾಗಿ ಹೆಸರುವಾಸಿಯಾಗಿದೆ. ಆಸ್ಪತ್ರೆಯು ಎಲ್ಲ ವಯೋಮಾನದ ರೋಗಿಗಳು ಕ್ಷೇಮವಾಗಿರಲು ಸಮಗ್ರ ವಿಧಾನವನ್ನು ಅನುಸರಿಸುವ ಬಹುಶಿಸ್ತಿನ ತಂಡವನ್ನು ಒಳಗೊಂಡಿದ್ದು, ಇವರು ವಿಭಿನ್ನ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮರ್ಥರಾಗಿದ್ದಾರೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ಮನೋವಿಜ್ಞಾನ ವಿಭಾಗವು ಮನೋವೈಜ್ಞಾನಿಕ ಸಂಶೋಧನೆಯ ಕ್ಷೇತ್ರದಲ್ಲಿ ಭದ್ರ ಬುನಾದಿಯನ್ನು ಹೊಂದಿದೆ. ಇದು ನಮ್ಮ ರೋಗಿಗಳಿಗೆ ಅತ್ಯುತ್ತಮ ಆರೈಕೆಯನ್ನು ಒದಗಿಸಲು ಸಹಾಯಮಾಡುತ್ತದೆ. ನಾವು ನಮ್ಮ ನರ್ಸ್ಗಳು, ಮನಶಾಸ್ತ್ರಜ್ಞರು, ಮನೋವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರ ಅಪಾರ ಅನುಭವದೊಂದಿಗೆ ಚಿಕಿತ್ಸೆ ಮತ್ತು ಸಂಪೂರ್ಣ ಮಾನಸಿಕ ಮೌಲ್ಯಮಾಪನಗಳನ್ನು ನಡೆಸುತ್ತೇವೆ. ಉತ್ತಮ ಯಶಸ್ಸಿಗಾಗಿ ಪ್ರತಿಯೊಬ್ಬ ರೋಗಿಯು ವೈಯಕ್ತಿಕಗೊಳಿಸಿದ ಚಿಕಿತ್ಸಾ ಯೋಜನೆಯನ್ನು ಪಡೆಯುತ್ತಾರೆ.

Treatment & Procedures

ಅರಿವಳಿಕೆ ನಡವಳಿಕೆ ಚಿಕಿತ್ಸೆ (ಕಾಗ್ನಿಟಿವ್…

ಸಿಬಿಟಿ ಒಂದು ರೀತಿಯ ಮಾತು ಚಿಕಿತ್ಸೆಯಾಗಿದ್ದು ಇದರಲ್ಲಿ ರೋಗಿಗಳು ಚಿಕಿತ್ಸಕರೊಂದಿಗೆ ನೇರವಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಅದಕ್ಕೆ ಪರಿಹಾರಗಳನ್ನು ಪಡೆಯುತ್ತಾರೆ. ಸಿಬಿಟಿ ಚಿಕಿತ್ಸೆಯ ಉದ್ದೇಶವು ರೋಗಿಗಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಮತ್ತು ಅವುಗಳನ್ನು ನಿರ್ವಹಿಸಲು ಮನೋವಿಜ್ಞಾನದ ಸಾಧನಗಳನ್ನು ಒದಗಿಸುವುದಾಗಿದೆ. ಈ ರೀತಿಯ ಚಿಕಿತ್ಸೆಯು ಮೂಲ ಸಮಸ್ಯೆಗಳನ್ನು ಗುರುತಿಸುವತ್ತ ಮತ್ತು ರೋಗಿಯು…

Read More

ಹಿಪ್ನೋಸಿಸ್ (ಸಂಮೋಹನ)

ಈ ರೀತಿಯ ಚಿಕಿತ್ಸಾ ವಿಧಾನವನ್ನು ಮನೋವಿಜ್ಞಾನ ಮತ್ತು ಮೆಡಿಸಿನ್ ನಲ್ಲಿ ಬಳಸಲಾಗುತ್ತಿದ್ದು ಇದರಿಂದ ರೋಗಿಯ ದೇಹ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ ಬದಲಾವಣೆಗಳನ್ನು ತರುವಲ್ಲಿ ಸಹಾಯಕವಾಗಿದೆ. ಈ ಪ್ರಕ್ರಿಯೆಯನ್ನು ಸ್ವಯಂ ಸಂಮೋಹನದಿಂದ ಮಾಡಲಾಗುತ್ತಿದ್ದರೂ ಇದನ್ನು ಚಿಕಿತ್ಸಕರ ಸೂಚನೆಗಳ ಪ್ರಕಾರ ನಡೆಸಲಾಗುತ್ತದೆ. ಒಂದು ರೀತಿಯ ಶಾಂತತೆಯ ಭಾವನೆ ಮತ್ತು ಹೆಚ್ಚಿನ ಆಂತರಿಕ ಕೇಂದ್ರೀಕರಿಸಿದ ಗಮನವು ಇದಕ್ಕೆ ಬಹಳ ಮುಖ್ಯವಾಗಿದೆ. ಇದನ್ನು…

Read More

ಆಟೋಜೆನಿಕ್ ತರಬೇತಿ

ಸಮಾನ್ಯವಾಗಿ ಎಟಿ ಎಂದು ಕರೆಯಲ್ಪಡುವ ಆಟೋಜೆನಿಕ್ ತರಬೇತಿಯು ಒಂದು ಧ್ಯಾನ ಸಾಧನವಾಗಿದ್ದು ಇದು ಹಲವಾರು ಸರಳ ಮಾನಸಿಕ ವ್ಯಾಯಾಮಗಳ ಅನುಕ್ರಮವನ್ನು ಒಳಗೊಂಡಿದೆ. ಇದು ಮಾನಸಿಕ ಮತ್ತು ದೈಹಿಕ ಶಾಂತತೆಯನ್ನು ತಂದುಕೊಂಡುತ್ತದೆ ಮತ್ತು ಅಭ್ಯಾಸದ ಮೂಲಕ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಡುತ್ತದೆ. ತೀವ್ರ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಆಟೋಜೆನಿಕ್ ತರಬೇತಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ರೋಗಿಗಳು…

Read More

ಸಾವಧಾನತೆ

ಸಾವಧಾನತೆಯು ಒಂದು ವ್ಯಕ್ತಿಯನ್ನು ಯಾವಾಗಲೂ ತನ್ನ ದೈನಂದಿನ ಅನುಭವಗಳು, ಆಲೋಚನೆಗಳು ಮತ್ತು ದೈಹಿಕ ಸಂವೇದನೆಗಳ ಅರಿವನ್ನು ಮೂಡಿಸಲು ಉತ್ತೇಜಿಸುತ್ತದೆ. ಜೀವನದ ಪ್ರತಿಯೊಂದು ಘಳಿಗೆಯಲ್ಲಿಯೂ ಸಹ ಈ ಅರಿವನ್ನು ಕಾಪಾಡಿಕೊಳ್ಳಬೇಕು. ಇದು ಯಾವುದೇ ಪೂರ್ವಗ್ರಹಿಕೆಯಿಲ್ಲದೆ ಜಾಗೃತಿಯನ್ನು ಉತ್ತೇಜಿಸುವ ಅಭ್ಯಾಸವಾಗಿದೆ ಮತ್ತು ಬದಲಿಗೆ ಸ್ವೀಕಾರ ಮತ್ತು ದಯಾ ಭಾವನೆಯನ್ನು ಬೆಳೆಸಿಕೊಳ್ಳುತ್ತದೆ. ಈ ನಿರಂತರ ಅರಿವು ಮನಸ್ಸಿನ ಒಳನೋಟ ಮತ್ತು ಆಳವಾದ…

Read More

ವಾರ್ಷಿಕವಾಗಿ 8 ಲಕ್ಷಕ್ಕೂ ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತವೆ. ಜಾಗತಿಕ ಮಟ್ಟದಲ್ಲಿ ಆತ್ಮಹತ್ಯೆಯು ಸಾವಿನ ಎರಡನೆಯ ಅತಿದೊಡ್ಡ ಕಾರಣ ಮತ್ತು ಇದು ಹೆಚ್ಚಾಗಿ 15 ರಿಂದ 29 ವಯಸ್ಸಿನವರಲ್ಲಿ ಕಾಣಬಹುದು. ಮಣಿಪಾಲ್ ಆಸ್ಪತ್ರೆಯಲ್ಲಿರುವ ಕ್ಲಿನಿಕಲ್ ಮನೋಶಾಸ್ತ್ರಜ್ಞರು ಮಾನಸಿಕ ಮತ್ತು ನರಮಾನಸಿಕ ಪರೀಕ್ಷೆಗಳನ್ನು ಮಾಡುವಾಗ ಕೂಲಂಕುಷವಾದ ಮೌಲ್ಯಮಾಪನಗಳನ್ನು ನಡೆಸುತ್ತಾರೆ. ಮೊದಲ ಸಂದರ್ಶನದಲ್ಲಿ, ರೋಗಿಗಾಗಿ ಒಬ್ಬ ನಿರ್ದಿಷ್ಟ ಮನೋಶಾಸ್ತ್ರಜ್ಞರನ್ನು ನಿಯೋಜಿಸಲಾಗುತ್ತದೆ, ಇವರು ಗೌಪ್ಯ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡುತ್ತಾರೆ. ಉತ್ತಮ ಗುಣಮಟ್ಟ ಸೇವೆಗಳನ್ನು ಖಾತ್ರಿಪಡಿಸಲು ವಿಶಿಷ್ಟವಾದ ಚಿಕಿತ್ಸಾ

ಯೋಜನೆಯನ್ನು ವಿನ್ಯಾಸಗೊಳಿಸಲಾಗುತ್ತದೆ. ನಾವು ಚಿಕಿತ್ಸೆ ನೀಡುವ ಕೆಲವು ವೈದ್ಯಕೀಯ ಸಮಸ್ಯೆಗಳೆಂದರೆ: 

 •  ಒತ್ತಡ ನಿರ್ವಹಣೆ

 • ಆತಂಕ/ಉದ್ವೇಗ 

 • ಖಿನ್ನತೆ

 • ತಿನ್ನುವ ಅಸ್ವಸ್ಥತೆಗಳು

 • ತೂಕ ನಿರ್ವಹಣೆ

 • ನೋವಿನ ಅಸ್ವಸ್ಥತೆಗಳು

 • ಜ್ಞಾಪಕ ಶಕ್ತಿ ಸಮಸ್ಯೆ 

 • ಕುಟುಂಬ ಅಥವಾ ಸಾಮಾಜಿಕ ಬೆಂಬಲ ಸಮಸ್ಯೆಗಳು 

 • ಕೋಪ ನಿರ್ವಹಣೆ

 • ಆಘಾತ ನಂತರದ ಒತ್ತಡದ ಸಮಸ್ಯೆಗಳು 

 • ದುಃಖ ಮತ್ತು ಸಾವು 

 • ಚಿತ್ತ ಬದಲಾವಣೆ ಸಮಸ್ಯೆಗಳು 

 • ಮಾದಕ ದ್ರವ್ಯ ವ್ಯಸನದ ಸಮಸ್ಯೆಗಳು 

 • ಎಡಿಎಚ್ಡಿ

Facilities & Services

ಮಾನಸಿಕ ಅಸ್ವಸ್ಥತೆಗಳಿಗಾಗಿ ನಾವು ಒದಗಿಸುವ ಸೇವೆಗಳು ಹೀಗಿವೆ: 

ರೋಗನಿರ್ಣಯ ಮತ್ತು ಚಿಕಿತ್ಸೆ, ಮಾನಸಿಕ ಸ್ವಾಸ್ಥ್ಯದ ಸ್ಥಿರತೆ ಒದಗಿಸುವುದು, ಚರ್ಚೆ ಆಧಾರಿತ ಚಿಕಿತ್ಸೆ, ಆರಂಭಿಕ ಮಧ್ಯಸ್ಥಿಕೆ, ತಿಳಿವಳಿಕೆ ಮತ್ತು ಸಲಹೆ ನೀಡುವುದು, ವೈಯಕ್ತಿಕ ಮತ್ತು ದಂಪತಿಗಳ ಚಿಕಿತ್ಸೆ, ಕೌಶಲ್ಯಗಳ ಕಲಿಕಾ ಅಭಿವೃದ್ಧಿ, ಕಾಗ್ನಿಟಿವ್ ಬಿಹೇವಿಯರಲ್ ಚಿಕಿತ್ಸೆ, ಮನಸ್ಸನ್ನು ಶಾಂತಗೊಳಿಸುವ ವಿಧಾನಗಳು

FAQ's

The mental health specialist will first gather general information about the patient's mental health, review the patient's medical history, and conduct a physical examination. Based on the doctor’s findings, further treatment or diagnostic procedures are recommended.

Depression, anxiety, dementia, bipolar disorder, and schizophrenia are some of the most common mental health disorders. Visit our psychology hospital in Bangalore to have treatment for disorders.

ಮಣಿಪಾಲ್ ಆಸತ್ರೆಯು ರೋಗಿಗಳೊಂದಿಗೆ ದೀರ್ಘಾವಧಿಯ ಬಾಂಧವ್ಯವನ್ನು ಬೆಳೆಸಲು ಮತ್ತು ಅತ್ಯುನ್ನತ ಗುಣಮಟ್ಟದ ವೈಯಕ್ತಿಕಗೊಳಿಸಿದ ಆರೈಕೆಯನ್ನು ನೀಡುವಲ್ಲಿ ಬದ್ಧವಾಗಿದೆ. ನಮ್ಮ ಮನಃಶಾಸ್ತ್ರ ವಿಭಾಗವು ಮತ್ತು ಅದರ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಮನೋವ್ಯಾಧಿಗಳ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಮತ್ತು ನಮ್ಮ ಮನೋಶಾಸ್ತ್ರಜ್ಞರೊಂದಿಗೆ ಇಂದೇ ನಿಮ್ಮ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ