ಮನೋವೈದ್ಯಶಾಸ್ತ್ರ


ಮಣಿಪಾಲ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರದ ವಿಭಾಗವು ದೇಹ ಮತ್ತು ಮನಸ್ಸಿನಲ್ಲಿನ ವಿಸ್ತಾರ ಶ್ರೇಣಿಯ ಸಮಸ್ಯೆಗಳಿಂದ ಅನುಭವಿಸುತ್ತಿರುವ ರೋಗಿಗಳಿಗೆ ಗುಣಪಡಿಸಲು ಅತ್ಯಂತ ಸೂಕ್ತವಾಗಿದೆ. ನಮ್ಮ ಮನೋವೈದ್ಯಶಾಸ್ತ್ರದ ವಿಭಾಗವು ದೇಶದೊಳಗಿನ ಯಶಸ್ವಿ ಪ್ರಮಾಣಕ್ಕೆ ಹೆಸರುವಾಸಿಯಾಗಿದೆ. ನಾವು ಎಲ್ಲ ಹೊರರೋಗಿಗಳು ಮತ್ತು ಒಳರೋಗಿಗಳಿಗೆ ಸಮಗ್ರ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತೇವೆ.

OUR STORY

Know About Us

Why Manipal?

ನಮ್ಮ ಬಹುಶಿಸ್ತಿನ ತಂಡವು ಲೈಂಗಿಕ ಅಸ್ವಸ್ಥತೆಗಳು, ಖಿನ್ನತೆ, ಸ್ಕಿಜೋಫ್ರೇನಿಯಾ, ಉದ್ವೇಗ, ಮಾದಕವಸ್ತುಗಳ ವ್ಯಸನ, ಬುದ್ಧಿಮಾಂದ್ಯತೆ, ಎಡಿಎಚ್‌ಡಿ, ಆಟಿಸಂ, ಕಲಿಕಾ ಸಮಸ್ಯೆಗಳು, ನಿದ್ರೆಯ ಅಸ್ವಸ್ಥತೆಗಳು, ನಡವಳಿಕೆಯ ಸಮಸ್ಯೆಗಳು ಅಥವಾ ಮನಸ್ಸಿನ ಯಾವುದೇ ರೀತಿಯ ಅನಾರೋಗ್ಯಗಳ ಚಿಕಿತ್ಸೆಗಾಗಿ ವಿಸ್ತಾರ ಶ್ರೇಣಿಯ ಸೇವೆಗಳನ್ನು ಒದಗಿಸಲು ಸಮರ್ಥಾವಾಗಿದೆ. ನಾವು ಪ್ರತ್ಯೇಕ ವಾರ್ಡ್ ಗಳೊಂದಿಗೆ ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಹೊರರೋಗಿ ಮತ್ತು ಒಳರೋಗಿಯ ಎರಡೂ ವಿಭಾಗಗಳಿಗೆ ಸೇವೆಗಳನ್ನು ಒದಗಿಸುತ್ತೇವೆ.

ವಿಶ್ವದ ಪ್ರತಿ ಐದರಲ್ಲಿ ಒಂದು ಮಗು ಮತ್ತು ಹದಿಹರೆಯದ ಹುಡುಗ/ಹುಡುಗಿ ಇಂದು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದೆ. ಮಣಿಪಾಲ್ ಆಸ್ಪತ್ರೆಯು ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರಿಗಾಗಿ, ಗುಂಪು ಚಿಕಿತ್ಸೆ, ಸಮಾಲೋಚನೆ ಇತ್ಯಾದಿ ರೀತಿಯ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಮಣಿಪಾಲ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರದ ವಿಭಾಗವು ತನ್ನ ಮನೋಅಸ್ವಸ್ಥ ರೋಗಿಗಳಿಗೆ ಅತ್ಯಂತ ಕಾಳಜಿಯುಳ್ಳ ಆರೈಕೆಯನ್ನು ಒದಗಿಸುತ್ತದೆ. ಒಳರೋಗಿಗಳಿಗೆ ದೈನಂದಿನ ತಪಾಸಣೆ ಮತ್ತು ಮೌಲ್ಯಮಾಪನಗಳೊಂದಿಗೆ ಸರಿಯಾದ ವಸತಿ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ. ಮಣಿಪಾಲ್ ಆಸ್ಪತ್ರೆಯು ನಾರ್ಕೊಥೆರಪಿ, ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ, ಮಾನಸಿಕ ಪರೀಕ್ಷೆ, ಸಮಾಲೋಚನೆ, ಇಸಿಜಿ, ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐಗಳಂತಹ ಸಮಗ್ರ ಮಟ್ಟದ ಚಿಕಿತ್ಸಕ ಮತ್ತು ರೋಗನಿರ್ಣಯ ವಿಧಾನಗಳನ್ನು ನಡೆಸಲು ಸಂಪೂರ್ಣವಾಗಿ ಸಜ್ಜಾಗಿದೆ.

Facilities & Services

ನಾವು ಗುಣಪಡಿಸುವ ಕೆಲವು ಮಾನಸಿಕ ಸಮಸ್ಯೆಗಳು ಈ ಕೆಳಗಿನಂತಿವೆ: ಮಾದಕವಸ್ತುಗಳ ವ್ಯಸನ, ಸ್ವಯಂ-ಹಾನಿ, ಭ್ರಮೆಗಳು, ಸ್ಕಿಜೋಫ್ರೇನಿಯಾ , ದೈಹಿಕವಾಗಿ ಹಿಂಸಾತ್ಮಕ ಅಥವಾ ನಿಂದನೀಯ ಪ್ರವೃತ್ತಿ, ಉದ್ವೇಗ ನಿಯಂತ್ರಣದ ಕೊರತೆ, ಆತ್ಮಹತ್ಯಾ ಪ್ರವೃತ್ತಿಗಳು , ಆಘಾತದ ನಂತರದ ಒತ್ತಡ ಸಮಸ್ಯೆಗಳು, ಚಿತ್ತ ಬದಲಾವಣೆ ಸಮಸ್ಯೆಗಳು, ಉದ್ವೇಗ ಸಮಸ್ಯೆಗಳು, ಔಷಧಿಗಳ ಸ್ಥಿರತೆ ಅಥವಾ ಹೊಂದಾಣಿಕೆ ಸಮಸ್ಯೆ. ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುವ ಹೊರರೋಗಿಗಳಿಗೆ ಮೊದಲು ನಿಯೋಜಿತ ಕೇಸ್ ವ್ಯವಸ್ಥಾಪಕರು ಮತ್ತು ಅವರ ಸಮಾಲೋಚಕ ಮನೋವೈದ್ಯರೊಂದಿಗೆ ಸಂಪೂರ್ಣ ದೈಹಿಕ ಮತ್ತು ಮಾನಸಿಕ ಮೌಲ್ಯಮಾಪನವನ್ನು ಮುಗಿಸಬೇಕು. ಈ ಮೌಲ್ಯಮಾಪನದ ನಂತರವೇ ಮುಂದಿನ ಚಿಕಿತ್ಸೆಯನ್ನು ನೀಡಲಾಗುವುದು. ಮಾನಸಿಕ ಅಸ್ವಸ್ಥ ರೋಗಿಗಳಿಗೆ ಮಣಿಪಾಲ್ ಆಸ್ಪತ್ರೆಯ ಒಳರೋಗಿಗಳ ಕಾರ್ಯಕ್ರಮಗಳು ಸಮಗ್ರ ಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಕೇಂದ್ರೀಕರಿಸುವ ವಿಶಿಷ್ಟವಾದ ಗುರಿಯನ್ನು ಒದಗಿಸುತ್ತವೆ. ಕೆಲವೊಮ್ಮೆ ಕೆಲವರಿಗೆ ದೈನಂದಿನ ಒತ್ತಡಗಳನ್ನು ನಿಭಾಯಿಸುವುದು ಬಹಳ ಕಷ್ಟವಾಗುತ್ತದೆ, ಇದರಿಂದ ಅವರಲ್ಲಿ ಉದ್ವೇಗ ಹೆಚ್ಚಾಗಿ, ಮನೋವ್ಯಾಧಿಗಳ ಲಕ್ಷಣಗಳೂ ಸಹ ತೀವ್ರವಾಗುತ್ತವೆ. ಈ ಕೇಂದ್ರದಲ್ಲಿರುವ ಸಿಬ್ಬಂದಿಯು ಅಧಿಕ ಒತ್ತಡವನ್ನು ನಿಭಾಯಿಸುತ್ತಿರುವ ಮನೋರೋಗಿಗಳ ನಿರ್ವಹಣೆ ಮಾಡುವುದರಲ್ಲಿ ಉತ್ತಮ ಅನುಭವ ಹೊಂದಿದ್ದು ಅವರು ತಮ್ಮ ಕೆಲಸದಲ್ಲಿ ಯಾವಾಗಲೂ ಕಾಳಜಿ ಮತ್ತು ಆರೈಕೆಯನ್ನು ತೋರಿಸಬೇಕು ಎನ್ನುವುದನ್ನು ಅರ್ಥಮಾಡಿಕೊಂಡಿದ್ದಾರೆ. ನಮ್ಮ ಒಳರೋಗಿಯ ಕ್ಷೇಮಾಭಿವೃದ್ಧಿ ಕೇಂದ್ರಗಳು ಶಾಂತ ಮತ್ತು ಸುಭದ್ರತೆಯ ಭಾವನೆಯನ್ನು ಮೂಡುವ ವಾತಾವರಣ  ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಮಣಿಪಾಲ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗವು ಮಾನಸಿಕ ಆರೋಗ್ಯ ಅರಿವಿನ ಜಾಗೃತಿಗಾಗಿ ಹಲವಾರು ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇದರ ಹೊರತಾಗಿ, ಮನೋರೋಗಿಗಳಲ್ಲಿ ವೃತ್ತಿಪರ ಕೌಶಲ್ಯಗಳನ್ನು ಸುಧಾರಿಸಲು ದಿನ ಆರೈಕೆ ಕೇಂದ್ರಗಳು ಸಹ ಲಭ್ಯವಿದೆ. 

FAQ's

The mental health specialist will first gather general information about the patient's mental health, review the patient's medical history, and conduct a physical examination. Based on the doctor’s findings, further treatment or diagnostic procedures are recommended.

Depression, anxiety, dementia, bipolar disorder, and schizophrenia are some of the most common mental health disorders.

Some of the causes of mental health disorders are childhood abuse, neglect and trauma, loneliness or social isolation, poverty or debt, long-term stress, bereavement, discrimination or genetic dispositions.

Some of the causes of mental health disorders are childhood abuse, neglect and trauma, loneliness or social isolation, poverty or debt, long-term stress, bereavement, discrimination or genetic dispositions. Manipal is the psychiatry hospital in Old Airport Bangalore, visit today for consultation.

Over time, with proper coordination among patients and psychotherapists, mental health disorders can be greatly subdued or eradicated. Some are harder to treat than others but improvement is almost always imminent if time and effort are put in.

Over time, with proper coordination among patients and psychotherapists, mental health disorders can be greatly subdued or eradicated. Some are harder to treat than others but improvement is almost always imminent if time and effort are put in. Looking for cure, visit Manipal Hospitals, the best psychiatry hospital in Bangalore.

Most people who are stressed don’t realize it until it starts manifesting physically in their bodies as other illnesses. Yearly health checkups or even discussions with a therapist can help prevent major illnesses in the future.

Most people who are stressed don’t realize it until it starts manifesting physically in their bodies as other illnesses. Yearly health checkups or even discussions with a therapist can help prevent major illnesses in the future

ಮಾನಸಿಕ ಅಸ್ವಸ್ಥೆತಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಮತ್ತು ಇಂದೇ ನಮ್ಮ ತಜ್ಞರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ