ಮಕ್ಕಳ ಎಂಡೋಕ್ರೈನೊಲಾಜಿ


ಮಕ್ಕಳ ಎಂಡೋಕ್ರೈನೊಲಾಜಿಯು ಮಕ್ಕಳ ಎಂಡೋಕ್ರೈನ್ ವ್ಯವಸ್ಥೆಯ ಮೇಲೆ ಗಮನ ಹರಿಸುವ ವೈದ್ಯಕೀಯ ವಿಭಾಗವಾಗಿದೆ. ಎಂಡೋಕ್ರೈನ್ ವ್ಯವಸ್ಥೆಯು ದೇಹದ ತಾಪಮಾನದಿಂದ ಹಿಡಿದು ಅವರ ಮಾನಸಿಕ ಸ್ಥಿತಿ, ಬೆಳವಣಿಗೆ ಮತ್ತು ಅಭಿವೃದ್ಧಿ ಎಲ್ಲವನ್ನೂ ನಿಯಂತ್ರಿಸುವ ಮಕ್ಕಳ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ನಿಯಂತ್ರಿಸುತ್ತದೆ. ಪಿಟ್ಯುಟರಿ ಗ್ರಂಥಿ, ಥೈರಾಯಿಡ್ ಗ್ರಂಥಿ, ಅಡ್ರಿನಲ್ ಗ್ರಂಥಿ ರೀತಿಯ ಎಂಡೋಕ್ರೈನ್ ಗ್ರಂಥಿಗಳು ಹಾರ್ಮೋನುಗಳನ್ನು ಬಿಡುಗಡೆಗೊಳಿಸುತ್ತದೆ. ಮಗುವಿನ ಹಾರ್ಮೋನುಗಳಲ್ಲಿನ ಯಾವುದೇ ಅಸಮತೋಲನವು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಮೇದೋಜೀರಕ ಗ್ರಂಥಿ ಅಥವಾ ಪಿಟ್ಯುಟರಿ ಗ್ರಂಥಿ, ಥೈರಾಯಿಡ್ ಅಥವಾ ಅಡ್ರಿನಲ್ ಗ್ರಂಥಿಗಳಿಗೆ ಸಂಬಂಧಿಸಿದ ಗಂಭೀರ ಅಸ್ವಸ್ಥತೆಗಳಲ್ಲಿ ಮಧುಮೇಹ, ಥೈರಾಯಿಡ್ ಸಮಸ್ಯೆಗಳು, ಅತಿ ಬೇಗ ಅಥವಾ ಅತಿ ತಡವಾಗಿ ಪ್ರೌಡಾವಸ್ಥೆ ಬರುವುದು, ಬೆಳವಣಿಗೆ ಹಾರ್ಮೋನಿನ ಕೊರತೆ, ಟರ್ನರ್ ಸಿಂಡ್ರೋಮ್, ಗೆಡ್ಡೆಗಳು ಒಳಗೊಂಡಿರುತ್ತದೆ.

OUR STORY

Know About Us

Why Manipal?

ಬೆಂಗಳೂರಿನ ಹಳೆಯ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದಲ್ಲಿ ಮತ್ತು ಮಕ್ಕಳ ಎಂಡೋಕ್ರೈನೊಲಾಜಿ ಮತ್ತು ಚಯಾಪಚಯ  ವಿಭಾಗದಲ್ಲಿ ವಿಶ್ವವಿದ್ಯಾಲಯ ಪ್ರಮಾಣಿತ ವೈದ್ಯರುಗಳಿದ್ದಾರೆ ಮತ್ತು ಅವರು ಕಳೆದ ಕೆಲವು ವರ್ಷಗಳಿಂದ ಮಕ್ಕಳು ಮತ್ತು ಹದಿಹರೆಯದವರಲ್ಲಿನ ಎಂಡೋಕ್ರೈನ್ ರೋಗಗಳನ್ನು ಚಿಕಿತ್ಸೆ ನೀಡುವುದರಲ್ಲಿ ಪರಿಣಿತಿ ಹೊಂದಿದ್ದಾರೆ. ಹಳೆಯ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಮಕ್ಕಳ ತಜ್ಞರು ಪ್ರತಿ ಮಗುವಿನ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ತಂಡ ವಿಧಾನವನ್ನು ಅನುಸರಿಸುತ್ತಾರೆ ಮತ್ತು ವಯಸ್ಕ ಎಂಡೋಕ್ರೈನೊಲಾಜಿಯ ವಿಭಾಗವನ್ನೂ ಒಳಗೊಂಡಂತೆ ರೇಡಿಯೋಲಾಜಿ, ಕ್ಯಾನ್ಸರ್ ಆರೈಕೆ, ನೇತ್ರ ಶಾಸ್ತ್ರ, ಮೂಳೆರೋಗ ಶಾಸ್ತ್ರ, ಶಸ್ತ್ರಚಿಕಿತ್ಸೆ ಮತ್ತು ಇತರ ವಿಶೇಷ ವಿಭಾಗಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಾರೆ. 

ಜಗತ್ಪ್ರಸಿದ್ಧ ಪರಿಣಿತಿ, ಅತ್ಯಾಧುನಿಕ ತಂತ್ರಜ್ಞಾನ, ಗುಣಮಟ್ಟ, ಸಂಪರ್ಕದಲ್ಲಿ ಸರಳತೆ, ವಿಜ್ಞಾನ ಆಧಾರಿತ ಚಿಕಿತ್ಸಾ ವಿಧಾನಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳೆಲ್ಲವೂ ಮಣಿಪಾಲ್ ಆಸ್ಪತ್ರೆಯನ್ನು ಶಿಶುಗಳು, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯವನ್ನು ಸುಧಾರಿಸಲು ಅತ್ಯುತ್ತಮ ಮಕ್ಕಳ ಆರೈಕೆ ಮಾದರಿಯನ್ನು ಅಭ್ಯಸಿಸಲು ಮತ್ತು ರೂಢಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. 

 

ಮಕ್ಕಳ ಪರಿಣಿತರೊಂದಿಗೆ ಮಣಿಪಾಲ್ ಆಸ್ಪತ್ರೆಯ ಕುಟುಂಬ-ಸ್ನೇಹಮಯ ಪರಿಸರವು ತಮ್ಮ ಶುಶ್ರೂಷಾ ಶ್ರೇಷ್ಠತೆಗಾಗಿ ಗುರುತಿಸಲ್ಪಟ್ಟ ಮಕ್ಕಳನ್ನು ನೋಡಿಕೊಳ್ಳುವ ಸಮರ್ಪಿತ ಪೀಡಿಯಾಟ್ರಿಕ್ ನರ್ಸ್‌ಗಳನ್ನು ಹೊಂದಿದೆ. 

 

ವಿಶ್ವ ದರ್ಜೆಯ ವೈದ್ಯಕೀಯ ಜ್ಞಾನಕ್ಕಿಂತ ಮಿಗಿಲಾಗಿ, ಇಲ್ಲಿರುವ ವೈದ್ಯರುಗಳು, ನರ್ಸ್ ಗಳು ಮತ್ತು ಇತರರ ಸಹಾನುಭೂತಿಯು ಇದನ್ನು ದೇಶ ಮತ್ತು ವಿಶ್ವಾದ್ಯಂತ ಮಕ್ಕಳಿಗಾಗಿ ತೃತೀಯ ಆರೈಕೆ ರೆಫರಲ್ ಕೇಂದ್ರವಾಗಲು ಪ್ರಮುಖ ಕೀಲಿಯಾಗಿದೆ. ಅಸಂಖ್ಯಾತ ಕುಟುಂಬಗಳ ಸಂತೋಷ ಮತ್ತು ಕೃತಜ್ಞತೆಯು ಮಣಿಪಾಲ್ ಆಸ್ಪತ್ರೆಯಲ್ಲಿ ಒದಗಿಸಲಾದ ಆರೈಕೆಯ ನಿಜವಾದ ಮಾಪನವಾಗಿದೆ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ