ನ್ಯೂಟ್ರಿಷನ್ ಮತ್ತು ಡಯಟಿಕ್ಸ್ (ಪೋಷಣೆ ಮತ್ತು ಆಹಾರ ಪದ್ಧತಿ)


ಮಣಿಪಾಲ್ ಆಸ್ಪತ್ರೆಯ ನ್ಯೂಟ್ರಿಷನ್ ಮತ್ತು ಡಯಟಿಕ್ಸ್ (ಪೋಷಣೆ ಮತ್ತು ಆಹಾರ ಪದ್ಧತಿ) ವಿಭಾಗವು ದೇಶದಲ್ಲಿಯೇ ಅತ್ಯುತ್ತಮವಾಗಿದೆ. ವಿಭಾಗವು ರೋಗಿಗಳ ಆರೋಗ್ಯಕ್ಷೇಮವನ್ನು ಸುಧಾರಿಸಲು, ಅವರ ಕ್ಲಿನಿಕಲ್ ನಿರ್ವಹಣೆಯನ್ನು ಉತ್ತಮಗೊಳಿಸಲು ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ಪೌಷ್ಟಿಕತಜ್ಞರು ಒಳರೋಗಿ ಮತ್ತು ಹೊರರೋಗಿ ವಿಭಾಗಗಳಲ್ಲೆರೆಡರಲ್ಲೂ ಲಭ್ಯರಿರುತ್ತಾರೆ.

OUR STORY

Know About Us

Why Manipal?

ಮಣಿಪಾಲ್ ನಲ್ಲಿ ನಮ್ಮ ಪೋಷಣೆ ಮತ್ತು ಡಯಟಿಕ್ಸ್ (ಪೋಷಣೆ ಮತ್ತು ಆಹಾರ ಪದ್ಧತಿ)

 ಯೋಜನೆಗಳು ಹೊರರೋಗಿಗಳು ಮತ್ತು ಒಳರೋಗಿಗಳ ಶಿಕ್ಷಣ, ನಿರ್ವಹಣೆ ಮತ್ತು ಮೌಲ್ಯಮಾಪನದಲ್ಲಿ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುವ ಪುರಾವೆ ಆಧಾರಿತ ಶಿಫಾರಸ್ಸುಗಳನ್ನು ಅನುಸರಿಸುತ್ತವೆ. ಮಣಿಪಾಲ್ ನಲ್ಲಿರುವ ಪೌಷ್ಟಿಕತಜ್ಞರು ಪೌಷ್ಟಿಕ ತಿಳಿವಳಿಕೆ, ಮಧ್ಯಸ್ಥಿಕೆ ಮತ್ತು ಸಲಹೆ ಅಗತ್ಯವಿರುವ ರೋಗಿಗಳಿಗೆ ಉತ್ತಮ ಆರೈಕೆಯನ್ನು ಒದಗಿಸುವುದಕ್ಕಾಗಿ ಬಹುಶಿಸ್ತಿನ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಾರೆ.

ನಮ್ಮ ನ್ಯೂಟ್ರಿಷನ್ ಮತ್ತು ಡಯಟಿಕ್ಸ್ (ಪೋಷಣೆ ಮತ್ತು ಆಹಾರ ಪದ್ಧತಿ) ವಿಭಾಗವು ಒಳರೋಗಿ ವಿಭಾಗದಿಂದ ಡಿಸ್ಚಾರ್ಜ್ ಮಾಡಿಕೊಂಡ ನಂತರದ ಎಲ್ಲ ರೋಗಿಗಳಿಗೆ ಸೇವೆಯನ್ನು ಒದಗಿಸುತ್ತದೆ. ಹೊರರೋಗಿ ವಿಭಾಗದ ರೋಗಿಗಳಿಗೆ ಪ್ರತ್ಯೇಕ ತಂಡವೊಂದು ನೋಡಿಕೊಳ್ಳುತ್ತದೆ. ನಮ್ಮ ಪೌಷ್ಟಿಕ ತಜ್ಞರು ರೋಗಿಗಳ ನಿರ್ದಿಷ್ಟ ಆರೋಗ್ಯ ಸ್ಥಿತಿಗಳನ್ನು ಆಧರಿಸಿ ಅವರ ಊಟದ ಯೋಜನೆಯನ್ನು ರೂಪಿಸಲು ಕೇಟರಿಂಗ್ ವಿಭಾಗದೊಂದಿಗೆ ನೇರ ಸಂಪರ್ಕದಲ್ಲಿರುತ್ತದೆ. ಮಣಿಪಾಲ್ ಆಸ್ಪತ್ರೆಯ ನ್ಯೂಟ್ರಿಷನ್ ಮತ್ತು ಡಯಟಿಕ್ಸ್ (ಪೋಷಣೆ ಮತ್ತು ಆಹಾರ ಪದ್ಧತಿ)

ವಿಭಾಗದಲ್ಲಿ ಡಯಟಿಷಿಯನ್ಗಳು, ಪೌಷ್ಠಿಕ ನರ್ಸ್ ಗಳು, ಪೌಷ್ಠಿಕ ನಿರ್ವಾಹಕ ಮತ್ತು ಪೌಷ್ಟಿಕ ಸಹಾಯಕರನ್ನು ಒಳಗೊಂಡಿರುತ್ತದೆ. ನವಜಾತ ಶಿಶುಗಳು, ಪೀಡಿಯಾಟ್ರಿಕ್ಸ್, ಗ್ಯಾಸ್ಟ್ರೋಎಂಟರಾಲಜಿ, ಮಧುಮೇಹ, ಕ್ರಿಟಿಕಲ್ ಕೇರ್, ಜೀರಿಯಾಟ್ರಿಕ್ಸ್, ಬೇರಿಯಾಟ್ರಿಕ್ಸ್ ಮತ್ತು ಇತರ ಕ್ಷೇತ್ರಗಳನ್ನು ಒಳಗೊಂಡಂತೆ ನಮ್ಮ ಆಹಾರ ತಜ್ಞರು ಕ್ರಿಯಾತ್ಮಕ ಶ್ರೇಣಿಯ ವೈದ್ಯಕೀಯ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ.

Facilities & Services

ಮಣಿಪಾಲ್ ಆಸ್ಪತ್ರೆಯ ಪೌಷ್ಟಿಕಾಂಶ ನರ್ಸ್ ಗಳು ಕೃತಕ ಪೌಷ್ಟಿಕಾಂಶದ ಮೇಲಿರುವ ವಯಸ್ಕ ಒಳರೋಗಿಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ನಿಖರವಾದ ಸಲಹೆಯನ್ನು ನೀಡುತ್ತಾರೆ. ಟ್ಯೂಬ್ ಫೀಡಿಂಗ್ ಸಮಸ್ಯೆಗಳನ್ನು ಹೊಂದಿರುವ ರೋಗಿಗಳ ಕುರಿತು ಪ್ರಾಥಮಿಕ ಆರೋಗ್ಯ ಆರೈಕೆ ತಂಡಗಳಿಗೆ ಸಲಹೆಯನ್ನು ನೀಡಲಾಗಿರುತ್ತದೆ. ಮಣಿಪಾಲ್ ಆಸ್ಪತ್ರೆಯಲ್ಲಿ, ವ್ಯಕ್ತಿಯು ಯಾವುದೇ ವೈದ್ಯಕೀಯ ಪರಿಸ್ಥಿತಿಯಲ್ಲಿದ್ದರೂ ಸಹ ಆಹಾರ ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಈ ಕೆಳಗಿನ ಸೇವೆಗಳನ್ನು ಒದಗಿಸುವ ಮೂಲಕ ಅತ್ಯುತ್ತಮ ಪೋಷಣೆ ಮತ್ತು ಆಹಾರ ಸೇವೆಗಳನ್ನು ನೀಡುತ್ತೇವೆ: - ಆಹಾರ ಸೇವೆ ನಿರ್ವಹಣೆ - ಕ್ಲಿನಿಕಲ್ ಪೌಷ್ಟಿಕಾಂಶ - ಸಂಶೋಧನೆ ಮತ್ತು ಶಿಕ್ಷಣ

FAQ's

Eggs are a high-quality source of protein. They are soft and can be prepared in many ways. There is cholesterol in eggs, but this cholesterol is not going to affect a person’s overall cholesterol as much as saturated fats and trans fats. Nuts are another good source of protein, but if a person has a chewing problem, you can incorporate nut butter into recipes instead. Fish, chicken, and meat are excellent protein sources, and soy protein can sometimes be helpful for people who are willing to try it. Visit our nutrition and dietetics hospital in Bangalore to consult with the nutritionist.

ಮಣಿಪಾಲ್ ಆಸ್ಪತ್ರೆಗಳು ತನ್ನ ಎಲ್ಲ ರೋಗಿಗಳಿಗೆ ಅತ್ಯುತ್ತಮ ಆರೈಕೆಯನ್ನು ಒದಗಿಸಲು ಮತ್ತು ಒಂದು ಆರೋಗ್ಯಕರ ಹಾಗೂ ಬಲಶಾಲಿ ಸಮುದಾಯದ ನಿರ್ಮಾಣಕ್ಕೆ ಸಹಾಯವಾಗಲು ದೀರ್ಘಾವಧಿಯ ಸಂಬಂಧಗಳನ್ನು ಬೆಳೆಸಲು ಬದ್ಧವಾಗಿದೆ. ನ್ಯೂಟ್ರಿಷನ್ ವಿಭಾಗದದಿಂದ ಪ್ರಯೋಜನವನ್ನು ಪಡೆದಿರುವ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಪೋಷಣೆ ಮತ್ತು ಆಹಾರ ಪಥ್ಯದ ಕುರಿತು ಮತ್ತಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಮತ್ತು ಇಂದೇ ನಮ್ಮ ಪೌಷ್ಟಿಕತಜ್ಞರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Blogs

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ