ನ್ಯೂಕ್ಲಿಯರ್ ಮೆಡಿಸಿನ್


ಹಲವು ವಿಧದ ರೋಗಗಳನ್ನು ಪತ್ತೆ ಮಾಡಲು ಅಥವಾ ಚಿಕಿತ್ಸೆ ನೀಡಲು ಸ್ವಲ್ಪ ಪ್ರಮಾಣದ ವಿಕಿರಣಶೀಲ ವಸ್ತುಗಳನ್ನು (ಅಥವಾ ಟ್ರೇಸರ್ಗಳು) ಬಳಸುವುದನ್ನು ನ್ಯೂಕ್ಲಿಯರ್ ಮೆಡಿಸಿನ್ ಒಳಗೊಂಡಿರುತ್ತದೆ. ಇದು ಅಂಗಾಂಗ, ಅಂಗಾಂಶ ಅಥವಾ ಮೂಳೆಯ ಕಾರ್ಯಾಚರಣೆಯನ್ನು ಆಧರಿಸಿ ವೈದ್ಯಕೀಯ ಸಮಸ್ಯೆಯನ್ನು ನಿರ್ಧರಿಸುತ್ತದೆ. ಹೀಗೆ ಇದು ರಚನೆಯನ್ನು ಆಧರಿಸಿ ರೋಗದ ಇರುವಿಕೆಯನ್ನು ನಿರ್ಧರಿಸುವ ಕ್ಷ-ಕಿರಣ, ಅಲ್ಟ್ರಾಸೌಂಡ್ ಅಥವಾ ಇತರ ಯಾವುದೇ ರೋಗನಿರ್ಣಾಯಕ ಪರೀಕ್ಷೆಯಿಂದ ಭಿನ್ನವಾಗಿದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯಲ್ಲಿನ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗವು ತನ್ನದೇ ಆದ ರೀತಿಯಲ್ಲಿ ಅತ್ಯದ್ಭುತ ವಿಭಾಗವಾಗಿದ್ದು ಇದು ಇತ್ತೀಚಿನ ಚಲನೆರಹಿತ ತಂತ್ರಜ್ಞಾನದ ಡಿಸ್ಕವರಿ ಐಕ್ಯು ‘ಜೆನ್ 2’ ಹೊಂದಿದೆ. ಐಕ್ಯು ‘ಜೆನ್ 2’ ಸಾಧ್ಯವಾದಷ್ಟು ಕಡಿಮೆ ಪ್ರಮಾಣದ ಡೋಸ್ ಅನ್ನು ಬಳಸುತ್ತದೆ ಮತ್ತು ಯಾವುದೇ ಪೆಟ್/ಸಿಟಿ ವ್ಯವಸ್ಥೆಯಂತೆ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಸ್ಪಷ್ಟ ಚಿತ್ರಗಳನ್ನು ತೆಗೆಯುತ್ತದೆ, ಈ ಡಿಐಕ್ಯು ಪೆಟ್ ಸಿಟಿ ಅತ್ಯುತ್ತಮ ರೋಗಿಗಳ ಸೌಕರ್ಯ ಮತ್ತು ನಿಖರವಾದ ರೋಗನಿರ್ಣಯವನ್ನು ಒದಗಿಸುತ್ತದೆ. ಈ ಇಲಾಖೆಯು ಇತ್ತೀಚಿನ ಸಿಟಿ (ಎಸ್ಪಿಇಸಿಟಿ/ಸಿಟಿ) ಯೊಂದಿಗೆ ಸಂಯೋಜಿಸಿರುವ ಗಾಮಾ ಕ್ಯಾಮೆರಾವನ್ನು ಹೊಂದಿದ್ದು, ಇದು ಪ್ರತಿಯೊಬ್ಬ ರೋಗಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ವೈಯಕ್ತೀಕರಿಸಲು ಸಹಾಯ ಮಾಡುತ್ತದೆ.

 

ಇತ್ತೀಚಿನ ಉಪಕರಣಗಳು ಮತ್ತು ಸಾಫ್ಟ್‌ವೇರ್ ಕಾರ್ಯಕ್ರಮಗಳೊಂದಿಗೆ ವಿಭಾಗವು ಮಯೋಕಾರ್ಡಿಯಲ್ ಪರ್ಫ್ಯೂಷನ್, ಮೂಳೆಯ ಸ್ಕ್ಯಾನ್‌ಗಳು, ರೇಡಿಯೊಐಸೋಟೋಪ್ ರೀನಲ್ ಇಮೇಜಿಂಗ್, ಮತ್ತು ಥೈರಾಯ್ಡ್ ಸ್ಕ್ಯಾನ್‌ಗಳಂತಹ ವಿವಿಧ ಕಾಯಿಲೆಗಳ ರೋಗನಿರ್ಣಯ ಮತ್ತು ರೋಗದ ಚೇತರಿಕೆಯ ಬಗ್ಗೆ ಅರ್ಥಮಾಡಿಕೊಳ್ಳಲು  ಸಮರ್ಥವಾಗಿದೆ ಮತ್ತು ಕ್ಯಾನ್ಸರ್ ಮತ್ತು ಇತರ ವೈದ್ಯಕೀಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಐಸೊಟೋಪ್ ಚಿಕಿತ್ಸೆಗಳನ್ನು ಹೊಂದಿಸುತ್ತದೆ.  ಪೆಟ್-ಸಿಟಿ ಅನ್ನು ಟೈಮ್ಸ್ ನಿಯತಕಾಲಿಕ ಪತ್ರಿಕೆಯು 2000 ರಲ್ಲಿ "ವರ್ಷದ ವೈದ್ಯಕೀಯ ವಿಜ್ಞಾನದ ಆವಿಷ್ಕಾರ" ಎಂದು ಹೆಸರಿಸಿದೆ, ಇದು ಕ್ಯಾನ್ಸರ್ ನ ವಿವಿಧ ವಿಧಗಳ ಚಿಕಿತ್ಸಾ ಹಂತಗಳಲ್ಲಿ ಮತ್ತು  ಚಿಕಿತ್ಸಾ ಪ್ರಕ್ರಿಯೆಯ ಹಂತ, ಮರುಸ್ಥಾಪನೆ, ಮೌಲ್ಯಮಾಪನದಲ್ಲಿ ಇತ್ತೀಚಿಗೆ ಬಳಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಒಂದಾಗಿದೆ.  

Treatment & Procedures

ಲುಟೆಟಿಯಮ್ 177 ಪಿಎಸ್ಎ ಮತ್ತು ಡೋಟಾ…

ಪೆಪ್ಟೈಡ್ ರಿಸೆಪ್ಟರ್ ರೇಡಿಯೊನ್ಯೂಕ್ಲೈಡ್ ಥೆರಪಿ (ಪಿ ಆರ್ ಆರ್ ಟಿ) ಪೆಪ್ಟೈಡ್ ರಿಸೆಪ್ಟರ್ ರೇಡಿಯೋನ್ಯೂಕ್ಲೈಡ್ ಥೆರಪಿ (PRRT) ಒಂದು ಆಣ್ವಿಕ ಚಿಕಿತ್ಸೆಯಾಗಿದ್ದು (ಇದನ್ನು ರೇಡಿಯೊಐಸೋಟೋಪ್ ಚಿಕಿತ್ಸೆ ಎಂದೂ ಕರೆಯುತ್ತಾರೆ) ಇದನ್ನು ನ್ಯೂರೋಎಂಡೋಕ್ರೈನ್ ಟ್ಯೂಮರ್‌ಗಳು ಅಥವಾ ಎನ್ಇಟಿಗಳು ಎಂಬ ನಿರ್ದಿಷ್ಟ ರೀತಿಯ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಪಿ ಆರ್ ಆರ್ ಟಿ ಅನ್ನು ಹೇಗೆ ನಿರ್ವಹಿಸಲಾಗುತ್ತದೆ? ಎಫ್ಡಿಎ ಮತ್ತು…

Read More

ದೋಟನಾಕ್ ಪೆಟ್ ಸಿಟಿ ಸ್ಕ್ಯಾನ್

ಅವಲೋಕನ: ದೋಟನಾಕ್ ಪೆಟ್ ಸಿಟಿ ಸ್ಕ್ಯಾನ್ ಅತ್ಯಧಿಕ ಸೂಕ್ಶ್ಮ ಸ್ಕ್ಯಾನ್ ಆಗಿದ್ದು ಇದನ್ನು ನಿರ್ದಿಷ್ಟವಾಗಿ ನ್ಯೂರೋಎಂಡೋಕ್ರೈನ್ ಗೆಡ್ಡೆಗಳ ರೋಗನಿರ್ಣಯಕ್ಕಾಗಿ ಮತ್ತು ಚಿಕಿತ್ಸೆಯ ಹಂತಗಳಲ್ಲಿ ಬಳಸಲಾಗುತ್ತದೆ. ವಿಧಾನದ ಮುನ್ನ: ಸ್ಕ್ಯಾನ್ ಮಾಡುವ ಮುನ್ನ 2 ಗಂಟೆಗಳ ಉಪವಾಸ ಇರುವುದು ಕಡ್ಡಾಯ. ಒಂದುವೇಳೆ ವೈದ್ಯರು ನಿಮಗೆ ಕಾಂಟ್ರಾಸ್ಟ್ ಸಿಟಿ ಸಲಹೆ ನೀಡಿದ್ದರೆ ಸ್ಕ್ಯಾನ್ ಮಾಡಿಸುವ ಮುನ್ನ ಸೀರಂ ಕ್ರಿಯಾಟಿನಿನ್ ರಕ್ತಪರೀಕ್ಷೆ ಕಡ್ಡಾಯವಾಗಿದೆ(2…

Read More

ಥೈರಾಯಿಡ್ ಸ್ಕ್ಯಾನ್

ಅವಲೋಕನ: ಥೈರಾಯಿಡ್ ಸ್ಕ್ಯಾನ್ ಚಯಾಪಚನ ಕ್ರಿಯೆಯನ್ನು ನಿಯಂತ್ರಿಸುವ ಥೈರಾಯಿಡ್ ಗ್ರಂಥಿಯನ್ನು ತಪಾಸಣೆ ಮಾಡುವುದಕ್ಕಾಗಿ ವಿಶೇಷ ಇಮೇಜಿಂಗ್ ಕಾರ್ಯವಿಧಾನವಾಗಿದೆ. ಈ ಸ್ಕ್ಯಾನ್ ಮಾಡುವ ಸಮಯದಲ್ಲಿ ರೇಡಿಯೋಆಕ್ಟಿವ್ ಅಯೋಡೀನ್ ಅಥವಾ 99mTc ಟ್ರೇಸರ್ ಬಳಸಿ ಥೈರಾಯಿಡ್ ಗ್ರಂಥಿಯ ರಚನೆ ಮತ್ತು ಕಾರ್ಯಾಚರಣೆಯನ್ನು ಪರಿಶೀಲಿಸುತ್ತದೆ. ವಿಧಾನದ ಮುನ್ನ: ನಿಮಗೆ ಅಲರ್ಜಿ ಅಥವಾ ದಮ್ಮ ಸಮಸ್ಯೆಯಿದ್ದರೆ ಅದರ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಬೇಕು.…

Read More

ಇಡೀ ದೇಹದ ಪೆಟ್ ಸ್ಕ್ಯಾನ್ - ಸೂಚನೆಗಳು

ಪೆಟ್ ಸಿಟಿ ಸ್ಕ್ಯಾನ್ ಇಡೀ ದೇಹ ಕನಿಷ್ಠ 5 ಗಂಟೆಗಳ ಕಾಲ ಉಪವಾಸ ಇರಬೇಕು ಬೆಳಗ್ಗೆ ಇನ್ಸುಲಿನ್ ಅಥವಾ ಸಕ್ಕರೆ ಕಾಯಿಲೆಯ ಔಷಧಿಗಳನ್ನು ತೆಗೆದುಕೊಳ್ಳಬಾರದು ಆದರೆ ಉಳಿದ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಹೆಚ್ಚು ನೀರು ಕುಡಿಯಬೇಕು. ಸಣ್ಣ ಪ್ರಮಾಣದ ರೇಡಿಯೋಆಕ್ಟಿವ್ ಔಷಧದ ಚುಚ್ಚುಮದ್ದನ್ನು ಐವಿ ಮೂಲಕ ನೀಡಲಾಗುತ್ತದೆ ಮತ್ತು ಇಡೀ ದೇಹದ ಸ್ಕ್ಯಾನ್ ಅನ್ನು ಒಂದು ಗಂಟೆಯ ನಂತರ ಮಾಡಲಾಗುತ್ತದೆ. ಒಂದುವೇಳೆ ನಿಮಗೆ ಈ ಹಿಂದೆ ಕಾಂಟ್ರಾಸ್ಟ್…

Read More

ಬೋನ್ ಸ್ಕ್ಯಾನ್ (ಮೂಳೆ ಸ್ಕ್ಯಾನ್)

ಅವಲೋಕನ: ಬೋನ್ ಸ್ಕ್ಯಾನ್ ಅಥವಾ ಮೂಳೆ ಸ್ಕ್ಯಾನ್ ಎಂದರೆ ಒಂದು ನ್ಯೂಕ್ಲಿಯರ್ ಇಮೇಜಿಂಗ್ ಪರೀಕ್ಷೆಯಾಗಿದೆ, ಇದು ಮೂಲೆಗಳಲ್ಲಿರುವ ಸಮಸ್ಯೆಗಳನ್ನು ಪತ್ತೆ ಮಾಡಲು ಸಹಾಯಕವಾಗಿದೆ. ಇದರಲ್ಲಿ ರೇಡಿಯೋಫಾರ್ಮಾಸೆಟಿಕಲ್ ಎಂದು ಕರೆಯಲಾಗುವ ಔಷಧವನ್ನು ಸುರಕ್ಷಿತವಾಗಿ ಬಳಸಲಾಗುತ್ತದೆ. ವಿವರಿಸಲಾಗದ ಮೂಳೆ ನೋವು, ಮೂಳೆಗಳ ಸೋಂಕು, ಕ್ಯಾನ್ಸರ್ ಗೆಡ್ಡೆಯು ಮೂಳೆಗಳಿಗೆ ಹರಡಿದ್ದರೆ ಅಥವಾ ಸಾಮಾನ್ಯ ಕ್ಷ-ಕಿರಣಗಳಿಂದ ಗುರುತಿಸಲಾಗದ ಮೂಳೆಯ ಪೆಟ್ಟನ್ನು…

Read More

ಪಿಎಸ್ಎಂಎ ಪೆಟ್ -ಸಿಟಿ ಸ್ಕ್ಯಾನ್

ಪಿಎಸ್ಎಂಎ ಪೆಟ್ -ಸಿಟಿ ಸ್ಕ್ಯಾನ್ ಕನಿಷ್ಠ 2 ಗಂಟೆಕಾಲಗಳ ಉಪವಾಸ ಇರಬೇಕು ಸಣ್ಣ ಪ್ರಮಾಣದ ರೇಡಿಯೋಆಕ್ಟಿವ್ ಔಷಧದ ಚುಚ್ಚುಮದ್ದನ್ನು ಐವಿ ಮೂಲಕ ನೀಡಲಾಗುತ್ತದೆ ಮತ್ತು ಇಡೀ ದೇಹದ ಸ್ಕ್ಯಾನ್ ಅನ್ನು ಒಂದು ಗಂಟೆಯ ನಂತರ ಮಾಡಲಾಗುತ್ತದೆ. ಒಂದುವೇಳೆ ನಿಮಗೆ ಈ ಹಿಂದೆ ಕಾಂಟ್ರಾಸ್ಟ್ ಅಲರ್ಜಿ ಆಗಿದ್ದರೆ, ದಯವಿಟ್ಟು ನಿಮ್ಮ ವೈದ್ಯರು/ನರ್ಸ್/ಟೆಕ್ನಿಷಿಯನ್ ಗೆ ತಿಳಿಸಿ. ಸ್ಕ್ಯಾನ್ ನ ಆರಂಭಿಕ ಭಾಗವು ರೋಗನಿರ್ಣಾಯಕ ಸಿಟಿ ಇದರಲ್ಲಿ ಕಾಂಟ್ರಾಸ್ಟ್…

Read More

ಥೈರಾಯಿಡ್ ಕ್ಯಾನ್ಸರ್ ಗಾಗಿ ಅಯೋಡೀನ್…

ಅವಲೋಕನ : ರೇಡಿಯೋಅಯೋಡೀನ್ ಅಥವಾ ಅಯೋಡೀನ್ 131 ಚಿಕಿತ್ಸೆಯು ಹೈಪರ್ ಥೈರಾಯಿಡಿಸಂ ಎಂದು ಕರೆಯಲಾಗುವ ಒಂದು ಅಧಿಕ ಚಟುವಟಿಕೆಯುಳ್ಳ ಥೈರಾಯಿಡ್ ಗ್ರಂಥಿಗಾಗಿ ಮಾಡುವ ನ್ಯೂಕ್ಲಿಯರ್ ಮೆಡಿಸಿನ್ ಚಿಕಿತ್ಸೆಯಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಥೈರಾಯಿಡ್ ಕ್ಯಾನ್ಸರ್ ಗುಣಪಡಿಸಲು ಮಾಡಲಾಗುತ್ತದೆ. ವಿಧಾನದ ಮುನ್ನ: ಒಂದುವೇಳೆ ನಿಮಗೆ ದಮ್ಮ ಅಥವಾ ಇತರ ಅಲರ್ಜಿ ಅಥವಾ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಅದನ್ನು ಮೊದಲು ನಿಮ್ಮ ವೈದ್ಯರಿಗೆ…

Read More

F18 ಬೋನ್ ಸ್ಕ್ಯಾನ್

ಅವಲೋಕನ: F18 ಬೋನ್ ಸ್ಕ್ಯಾನ್ ಒಂದು ನ್ಯೂಕ್ಲಿಯರ್ ಇಮೇಜಿಂಗ್ ಪರೀಕ್ಷೆಯಾಗಿದ್ದು ಇದನ್ನು ಮೂಳೆಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಮಾಡಲಾಗುತ್ತದೆ. ರೇಡಿಯೋಫಾರ್ಮಾಸೆಟಿಕಲ್ ಎಂದು ಕರೆಯಲಾಗುವ ರೇಡಿಯೋಆಕ್ಟಿವ್ ನ ಸಣ್ಣ ಪ್ರಮಾಣವನ್ನು ಇಲ್ಲಿ ಸುರಕ್ಷಿತವಾಗಿ ಬಳಸಲಾಗುತ್ತದೆ. ವಿವರಿಸಲಾಗದ ಮೂಳೆ ನೋವು, ಮೂಳೆಗಳ ಸೋಂಕು, ಕ್ಯಾನ್ಸರ್ ಗೆಡ್ಡೆಯು ಮೂಳೆಗಳಿಗೆ ಹರಡಿದ್ದರೆ ಅಥವಾ ಸಾಮಾನ್ಯ ಕ್ಷ-ಕಿರಣಗಳಿಂದ ಗುರುತಿಸಲಾಗದ ಮೂಳೆಯ ಪೆಟ್ಟನ್ನು…

Read More

ಮಯೋಕಾರ್ಡಿಯಲ್ ಇನ್ಫ್ಯೂಷನ್ ಸ್ಕ್ಯಾನ್…

ಈ ಪರೀಕ್ಷೆಯನ್ನು ಮುಖ್ಯವಾಗಿ ವ್ಯಾಯಾಮದ ಸಮಯದಲ್ಲಿ ಮತ್ತು ವಿಶ್ರಾಂತಿ ತೆಗೆದುಕೊಳುತ್ತಿದ್ದಾಗ ಹೃದಯದ ರಕ್ತ ಪೂರೈಕೆಯನ್ನು ನೋಡಲು ಮಾಡಲಾಗುತ್ತದೆ. ಕೆಲವು ರೋಗಿಗಳಲ್ಲಿ, ಸ್ಕ್ಯಾನ್ ನ ಒತ್ತಡ ಭಾಗವು ಸಹಜವಾಗಿದ್ದಂತೆ ಕಂಡರೆ, ವಿಶ್ರಾಂತಿ ಸ್ಕ್ಯಾನ್ ಅನ್ನು ಮಾಡುವುದಿಲ್ಲ. ಬೆಳಗ್ಗೆ 6:30ರವರೆಗೆ ಲಘುವಾದ ಬೆಳಗಿನ ತಿಂಡಿಯನ್ನು(2 ಇಡ್ಲಿ/ಸ್ಯಾಂಡ್ವಿಚ್) ತಿನ್ನಬಹುದು ಆದರೆ 12-24 ಗಂಟೆಗಳ ವರೆಗೆ ಕಾಫಿ/ಚಹಾ/ಚಾಕಲೇಟ್/ಕೆಫೀನ್ ಒಳಗೊಂಡಿರುವ…

Read More

ಮಯೋಕಾರ್ಡಿಯಲ್ ಇನ್ಫ್ಯೂಷನ್ ಸ್ಕ್ಯಾನ್…

ಈ ಪರೀಕ್ಷೆಯನ್ನು ಮುಖ್ಯವಾಗಿ ವ್ಯಾಯಾಮದ ಸಮಯದಲ್ಲಿ ಮತ್ತು ವಿಶ್ರಾಂತಿ ತೆಗೆದುಕೊಳುತ್ತಿದ್ದಾಗ ಹೃದಯದ ರಕ್ತ ಪೂರೈಕೆಯನ್ನು ನೋಡಲು ಮಾಡಲಾಗುತ್ತದೆ. ಕೆಲವು ರೋಗಿಗಳಲ್ಲಿ, ಸ್ಕ್ಯಾನ್ ನ ಒತ್ತಡ ಭಾಗವು ಸಹಜವಾಗಿದ್ದಂತೆ ಕಂಡರೆ, ವಿಶ್ರಾಂತಿ ಸ್ಕ್ಯಾನ್ ಅನ್ನು ಮಾಡುವುದಿಲ್ಲ. 3 ಗಂಟೆಗಳ ಉಪವಾಸ ಬೆಳಗ್ಗೆ 6:30ರವರೆಗೆ ಲಘುವಾದ ಬೆಳಗಿನ ತಿಂಡಿಯನ್ನು(2 ಇಡ್ಲಿ/ಸ್ಯಾಂಡ್ವಿಚ್) ತಿನ್ನಬಹುದು ಆದರೆ ಕಾಫಿ ಅಥವಾ ಚಹಾ ನಿಷಿದ್ಧ. ಸ್ಟಾಟಿನ್ಸ್…

Read More

ರೀನಲ್ ಸ್ಕ್ಯಾನ್ -ಡಿಟಿಪಿಎ ಮತ್ತು…

ಉಪವಾಸದ ಅಗತ್ಯವಿಲ್ಲ ಸ್ಕ್ಯಾನ್ ಕ್ಕಿಂತ ಮೊದಲು ಮತ್ತು ನಂತರ ಸಾಕಷ್ಟು ಪ್ರಮಾಣದ ಪಾನೀಯಗಳನ್ನು ಕುಡಿಯಲು ಹೇಳಲಾಗುತ್ತದೆ. ಮಕ್ಕಳು ರೋಗಿಗಳಿದ್ದಲ್ಲಿ, ಅವರನ್ನು ಐವಿ ಕ್ಯಾನುಲಾ ಹಾಕುವುದಕ್ಕಾಗಿ ಪೀಡಿಯಾಟ್ರಿಕ್ ತುರ್ತು ವಿಭಾಗಕ್ಕೆ ಕಳುಹಿಸಲಾಗುತ್ತದೆ. ಐವಿ ಮೂಲಕ ಸಣ್ಣ ಪ್ರಮಾಣದ ರೇಡಿಯೊಆಕ್ಟಿವ್ ಚುಚ್ಚುಮದ್ದನ್ನು ನೀಡಲಾಗುತ್ತದೆ ಮತ್ತು ಆರಂಭಿಕ ಚಿತ್ರಗಳನ್ನು 30 ನಿಮಿಷಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಅನೇಕ ರೋಗಿಗಳು 2 ಗಂಟೆಗಳ…

Read More

ರೀನಲ್ ಸ್ಕ್ಯಾನ್ - ಡಿಎಂಎಸ್ಎ

ರೀನಲ್ - ಡಿಎಂಎಸ್ಎ ಸ್ಕ್ಯಾನ್ ಉಪವಾಸದ ಅಗತ್ಯವಿಲ್ಲ ಮಕ್ಕಳು ರೋಗಿಗಳಿದ್ದಲ್ಲಿ, ಅವರನ್ನು ಐವಿ ಕ್ಯಾನುಲಾ ಹಾಕುವುದಕ್ಕಾಗಿ ಪೀಡಿಯಾಟ್ರಿಕ್ ತುರ್ತು ವಿಭಾಗಕ್ಕೆ ಕಳುಹಿಸಲಾಗುತ್ತದೆ. ಐವಿ ಮೂಲಕ ಸಣ್ಣ ಪ್ರಮಾಣದ ರೇಡಿಯೊಆಕ್ಟಿವ್ ಚುಚ್ಚುಮದ್ದನ್ನು ನೀಡಲಾಗುತ್ತದೆ ಮತ್ತು 2-3 ಗಂಟೆಗಳ ನಂತರ ಸ್ಕ್ಯಾನ್ ಮಾಡಲಾಗುತ್ತದೆ. ಸ್ಕ್ಯಾನ್ ಮಾಡಲು ಅಂದಾಜು 20 ನಿಮಿಷಗಳಾಗುತ್ತವೆ. ಒಂದುವೇಳೆ ನೀವು ಗರ್ಭಿಣಿ ಇದ್ದಲ್ಲಿ ದಯವಿಟ್ಟು ಸಿಬ್ಬಂದಿ ವರ್ಗದವರಿಗೆ…

Read More

ಮಣಿಪಾಲ್ ನ್ಯೂಕ್ಲಿಯರ್ ಮೆಡಿಸಿನ್ ವೈಶಿಷ್ಟ್ಯಗಳು ನಮ್ಮ ತಂಡ 

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯು ಅತ್ಯುತ್ತಮ ಸೌಲಭ್ಯಗಳನ್ನು ಮತ್ತು ಆರೈಕೆಯನ್ನು ಯಾವಾಗಲೂ ಅಸಾಧಾರಣ ನಿಖರತೆಯೊಂದಿಗೆ ಒದಗಿಸುವುದನ್ನು ಖಚಿತಪಡಿಸುತ್ತದೆ. ನಮ್ಮ ಪ್ರತಿಯೊಂದು ಕ್ಷೇತ್ರದಲ್ಲಿಯೂ, ನಾವು ಅತ್ಯುತ್ತಮ ವೈದ್ಯರನ್ನು ಹೊಂದಿದ್ದು ಅವರು ತಮ್ಮದೇ ಆದ ಕ್ಷೇತ್ರದಲ್ಲಿನ ಪರಿಣಿತ ಜ್ಞಾನದ ಮೂಲಕ ಉನ್ನತ ಆರೈಕೆಯೊಂದಿಗೆ ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳುವತ್ತ ಗಮನಹರಿಸಿದ್ದೇವೆ.

ಚಿಕಿತ್ಸೆ ಮತ್ತು ವಿಧಾನಗಳು 

ನ್ಯೂಕ್ಲಿಯರ್ ಮೆಡಿಸಿನ್ ವಿಭಾಗವು ಅಗತ್ಯವಿರುವ ಎಲ್ಲಾ ಉಪಕರಣಗಳೊಂದಿಗೆ ಸುಸಜ್ಜಿತವಾಗಿದೆ. ಇದು GE 16-ಸ್ಲೈಸ್ ಪೆಟ್-ಸಿಟಿ ಸ್ಕ್ಯಾನರ್ ಘಟಕವನ್ನು ಹೊಂದಿದ್ದು (ಡಿಸ್ಕವರಿ IQ 5 ರಿಂಗ್ ಸಿಸ್ಟಮ್) ಇದು ಸಂಪೂರ್ಣ ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ರೋಗಿಗಳಿಗೆ ಉಸಿರಾಟದ ಚಲನೆಯ ಹೊರತಾಗಿಯೂ ನಿಖರವಾದ ಕ್ಲಿನಿಕಲ್ ಚಿತ್ರಗಳನ್ನು ಡಿಜಿಟಲ್‌ನಲ್ಲಿ ಸೆರೆಹಿಡಿಯುವ ಚಲನೆ ರಹಿತ ತಂತ್ರಜ್ಞಾನವು ಅತ್ಯಂತ ಪ್ರಮುಖ ಲಕ್ಷಣಗಳಲ್ಲಿ ಒಂದು. ಮಯೋಕಾರ್ಡಿಯಲ್ ಪರ್ಫ್ಯೂಷನ್ ಸ್ಕ್ಯಾನ್, ರೇಡಿಯೊಐಸೋಟೋಪ್ ಬೋನ್ ಸ್ಕ್ಯಾನ್, ಥೈರಾಯ್ಡ್ ಸ್ಕ್ಯಾನ್ ಮತ್ತು ಅಯೋಡಿನ್-131 ಸ್ಕ್ಯಾನ್‌ಗಳಂತಹ ವಿವಿಧ ನ್ಯೂಕ್ಲಿಯರ್ ಮೆಡಿಸಿನ್ ತನಿಖೆಗಳು ನಮ್ಮ ವಿಭಾಗದಲ್ಲಿ ಲಭ್ಯವಿದೆ.

ನಮ್ಮ ವಿಭಾಗದಲ್ಲಿ ಒದಗಿಸಲಾಗುವ ಸೇವೆಗಳ ವಿಧಗಳೆಂದರೆ: 

 • ಸಂಪೂರ್ಣ ದೇಹ - ಪಿಇಟಿ ಸಿಟಿ 

 • ಇಡೀ ದೇಹ (ಗ್ಯಾಲಿಯಂ 68)-ಪಿಇಟಿ ಸಿಟಿ

 • ಪಿಇಟಿ ಸಿಟಿ-ಬೋನ್ ಸ್ಕ್ಯಾನ್

 • ಪಿಇಟಿ ಸಿಟಿ-ಕಾರ್ಡಿಯಾಕ್ ವಯಬಿಲಿಟಿ 

 • ಪಿಇಟಿ ಸಿಟಿ-ಎಫ್‌ಡಿಜಿ ಮೆದುಳು

 • ಬೋನ್ ಸ್ಕ್ಯಾನ್

 • ಶ್ವಾಸಕೋಶದ ಪರ್ಫ್ಯೂಷನ್ ಸ್ಕ್ಯಾನ್

 • ಮಯೋಕಾರ್ಡಿಯಲ್ ಪರ್ಫ್ಯೂಷನ್ ಸ್ಕ್ಯಾನ್

 • ಮೂತ್ರಪಿಂಡದ ಸ್ಕ್ಯಾನ್ - ಡಿಎಂಎಸ್ಎ 

 • ಥೈರಾಯ್ಡ್ ಸ್ಕ್ಯಾನ್

 • ಇಡೀ ದೇಹದ ಅಯೋಡಿನ್ ಸ್ಕ್ಯಾನ್

 • ಬೋನ್ ಮೆಟ್ಸ್‌ಗಾಗಿ ಸಮರಿಯಮ್-153 ಥೆರಪಿ

 • I-131 ಬಳಸಿ ಥೈರಾಯ್ಡ್ ಕ್ಯಾನ್ಸರ್ ಚಿಕಿತ್ಸೆ

 • ಅಯೋಡಿನ್-131 ಬಳಸಿ ಹೈಪರ್ ಥೈರಾಯ್ಡಿಸಮ್ ಚಿಕಿತ್ಸೆ

Facilities & Services

ಮಣಿಪಾಲ್ ಆಸ್ಪತ್ರೆಯು ಶಿಶುವಿನ ತಾಯಂದರಿಗಾಗಿ ಮತ್ತು ಮಕ್ಕಳಿಗಾಗಿ ಸಮಗ್ರ ವೈದ್ಯಕೀಯ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ. ವಿಶ್ವದರ್ಜೆಯ ಗುಣಮಟ್ಟದ ನಮ್ಮ ವೈದ್ಯಕೀಯ ಉಪಕರಣಗಳು ಮತ್ತು ಸೌಲಭ್ಯಗಳು ನೀವು ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮ ಮಟ್ಟದ ಚಿಕಿತ್ಸೆಯನ್ನು ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ.  ಮಣಿಪಾಲ್ ನಲ್ಲಿ, ನಾವು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಆತಿಥ್ಯದ ಸಾಂಪ್ರದಾಯಿಕ ಮೌಲ್ಯಗಳನ್ನು ಸಂಯೋಜಿಸುತ್ತೇವೆ ಮತ್ತು ನೀವು ಸಾಧ್ಯವಾದ ಅತ್ಯುತ್ತಮ ಆರೈಕೆಯನ್ನು ಪಡೆಯುವುದನ್ನು ನೋಡಲು ಬಯಸುತ್ತೇವೆ. ನಮ್ಮ ವೈದ್ಯರೊಂದಿಗೆ ಸಮಾಲೋಚನೆಯು ಒಂದು ಫೋನ್ ಕರೆ ಮೂಲಕ ಅಥವಾ ವ್ಯಕ್ತಿಗತವಾಗಿ ನಮ್ಮ ಆಸ್ಪತ್ರೆಗೆ ಬಂದು ಭೇಟಿ ಮಾಡುವ ಮೂಲಕ ಸಂದರ್ಶನ ಸಮಯವನ್ನು ನಿಗದಿಪಡಿಸುವ ಮೂಲಕ ಆರಂಭವಾಗುತ್ತದೆ. ಇದರ ನಂತರ ನಿಮಗೆ ಮಣಿಪಾಲ್ ರೆಕಾರ್ಡ್ ಫೈಲ್ ಮತ್ತು ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ, ಇದನ್ನು ನೀವು ಮುಂದಿನ ಭೇಟಿಗಳಲ್ಲಿ ಬಳಸಬಹುದು. ಮಣಿಪಾಲ್ ಆಸ್ಪತ್ರೆಯಲ್ಲಿರುವ ಸೌಲಭ್ಯಗಳು ಭಾರತದಲ್ಲಿಯೇ ಅತ್ಯುತ್ತಮವಾದುದ್ದು. ನಮ್ಮ ಆಸ್ಪತ್ರೆಯಲ್ಲಿ ನೀವು ಕಾಣಬಹುದಾದ ಅಗತ್ಯ ಅತ್ಯುತ್ತಮ ಸೌಲಭ್ಯಗಳೆಂದರೆ: 

ಸಾರಿಗೆ - ತುರ್ತು ಆಂಬುಲನ್ಸ್ ಸೇವೆಗಳು ದಿನದ 24 ಗಂಟೆಗಳೂ ಪಿಕ್ ಅಪ್ ಮತ್ತು ಡ್ರಾಪ್ ಸೇವೆಯನ್ನು ನೀಡುತ್ತದೆ. 

ವಿಶೇಷ ನರ್ಸ್ - ಒಂದುವೇಳೆ ಯಾವುದೇ ಅನಾರೋಗ್ಯ ಹೊಂದಿದ ವ್ಯಕ್ತಿ ಅಥವಾ ವೃದ್ಧ ರೋಗಿಗಳಿಗೆ ವಿಶೇಷ ಆರೈಕೆಯ ಅಗತ್ಯವಿದ್ದರೆ ನಿಮ್ಮ ಸಹಾಯಕ್ಕೆ ನಾವಿದ್ದೇವೆ.  ಇದಕ್ಕಾಗಿ ನಮ್ಮ ಡೆಸ್ಕ್ ಸಂಪರ್ಕಿಸಿ ಮತ್ತು ನಾವು ನಿಮಗಾಗಿ ಒಬ್ಬ ವಿಶೇಷ ನರ್ಸ್ ಆಯೋಜಿಸುತ್ತೇವೆ. 

ದೂರವಾಣಿ ಸಹಾಯ- ನಮ್ಮ ಆವರಣದಲ್ಲಿ ನಾವು ಇಂಟರ್ನೆಟ್ ಸೌಲಭ್ಯಗಳೊಂದಿಗೆ ಕಂಪ್ಯೂಟರ್ ಗಳನ್ನು ಹೊಂದಿದ್ದೇವೆ. ರೋಗಿಯ ಬದಿಯಲ್ಲಿ ಯಾವಾಗಲೂ ಆಸ್ಪತ್ರೆಯ ದೂರವಾಣಿ ಲಭ್ಯವಿರುತ್ತದೆ. ಯಾವುದೇ ತುರ್ತು ಸಹಾಯ ಬೇಕಾದಲ್ಲಿ, ನೀವು ನಮ್ಮ ರಿಸೆಪ್ಶನಿಸ್ಟ್ ಅನ್ನು ಸಂಪರ್ಕಿಸಬಹುದು. 

ಪ್ರಯಾಣ ಸಹಾಯವಾಣಿ ಡೆಸ್ಕ್ - ಒಂದುವೇಳೆ ಯಾವುದೇ ಪ್ರಯಾಣ ಸಂಬಂಧಿತ ಪ್ರಶ್ನೆಗಳಿದ್ದಲ್ಲಿ, ನೀವು ನಮ್ಮ ಪ್ರಯಾಣ ಸಹಾಯವಾಣಿ ಡೆಸ್ಕ್ ಅನ್ನು ಸಂಪರ್ಕಿಸಿ ಅಗತ್ಯವಿರುವ ಮಾಹಿತಿಯನ್ನು ಪಡೆಯಬಹುದು. 

ನಿಲುಗಡೆ - ನಮ್ಮಲ್ಲಿ ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡುವುದಕ್ಕಾಗಿ ದೊಡ್ಡ ವಾಹನ ನಿಲುಗಡೆ ಪ್ರದೇಶ ಇದೆ. ವಾಲೆಟ್ ಪಾರ್ಕಿಂಗ್ ಸಹ ಸಂಜೆ 8 ರವರೆಗೆ ಲಭ್ಯವಿರುತ್ತದೆ. 

ಎಟಿಎಂ - ತುರ್ತು ಸಂದರ್ಭಗಳಲ್ಲಿ ಹಣವನ್ನು ಬ್ಯಾಂಕಿನಿಂದ ಹೊರತೆಗೆಯುವುದಕ್ಕಾಗಿ ನಾವು ಒಂದು ಎಟಿಎಂ ವ್ಯವಸ್ಥೆಯನ್ನು ಮಾಡಿದ್ದೇವೆ.

ಸುಸುಜ್ಜಿತ ಕ್ಯಾಂಟೀನ್ ಗಳು - ನಮ್ಮ ಕ್ಯಾಂಟೀನ್ ಗಳಲ್ಲಿ ಆಧುನಿಕ ಕ್ಯಾಂಟೀನ್ ಸೌಲಭ್ಯಗಳಿದ್ದು ನಿಮಗೆ ಹಲವಾರು ವಿಧದ ಆಹಾರ ಮತ್ತು ಪಾನೀಯಗಳು ಲಭ್ಯವಿರುತ್ತದೆ. 

FAQ's

An endoradiologist will intravenously inject a radiopharmaceutical into the bloodstream. This is also known as a contrast material. Once the material has been fully injected, the endoradiologist will be able to use external gamma cameras to produce diagnostic imaging.

Nuclear medicine has been standardized to pose as little risk to patients as possible. However, there is always a component of risk when it comes to radiation, which is why nuclear medical professionals always follow the principle of ALARP (as low as reasonably practicable). To know more about medicine effects, visit our nuclear medicine hospital in Bangalore.

In most cases, there is little to no effect on the patient as the exposure levels are maintained well within the safe limit. If any side effects are expected, your endoradiologist will be able to inform you beforehand.

They are normally recommended or prescribed only when there is a lack of alternatives. The advanced imaging techniques may sometimes be the only way to achieve an accurate diagnosis. Visit our nuclear scan hospital in Old Airport Road Bangalore.

Regular health checkups are an important part of maintaining good health. Routine checkups can help detect any medical issues in their early stages when they are easier to treat.

ಣಿಪಾಲ್ ಆಸ್ಪತ್ರೆಯು ತನ್ನ ಎಲ್ಲ ರೋಗಿಗಳಿಗೆ ಸಾಧ್ಯವಾದ ಅತ್ಯುತ್ತಮ ಆರೈಕೆಯನ್ನು ಒದಗಿಸಲು ಮತ್ತು ಒಂದು ಆರೋಗ್ಯಕರ ಹಾಗೂ ಬಲಶಾಲಿ ಸಮುದಾಯವನ್ನು ಬೆಳೆಸಲು ದೀರ್ಘಾವಧಿಯ ಸಂಬಂಧಗಳನ್ನು ನಿರ್ಮಿಸಲು ಬದ್ಧವಾಗಿದೆ. ನಮ್ಮ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗದಲ್ಲಿ ಚಿಕಿತ್ಸೆ ಪಡೆದ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ನ್ಯೂಕ್ಲಿಯರ್ ಮೆಡಿಸಿನ್ ಕುರಿತು ಮತ್ತಷ್ಟು ಮಾಹಿತಿಯನ್ನು ಪಡೆಯಲು ಮತ್ತು ಇಂದೇ ನಮ್ಮ ವಿಶೇಷ ತಜ್ಞರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ