ನವಜಾತ ಶಿಶು ಚಿಕಿತ್ಸಾ ವಿಭಾಗ ಮತ್ತು ಶಿಶು ತೀವ್ರ ನಿಗಾ ಘಟಕ


ಭಾರತದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರ ಆರೋಗ್ಯ ಆರೈಕೆ ವೃತ್ತಿಪರರಾಗಿ, ಮಣಿಪಾಲ್ ಆಸ್ಪತ್ರೆಯ ನವಜಾತ ಶಿಶು ಚಿಕಿತ್ಸಾ ವಿಭಾಗವು ಅವಧಿಗೆ ಮುನ್ನ ಜನಿಸಿದ ಶಿಶುಗಳಿಗಾಗಿ ಅಥವಾ ಅನಾರೋಗ್ಯಕ್ಕೆ ತುತ್ತಾದ ಶಿಶುಗಳ ಆರೈಕೆಗಾಗಿ ಅತ್ಯಂತ ಆಧುನಿಕ ನವಜಾತ ಶಿಶು ತೀವ್ರ ನಿಗಾ ಘಟಕಗಳನ್ನು ಹೊಂದಿದೆ(NICU).

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯಲ್ಲಿ ನುರಿತ ಶಿಶು ಚಿಕಿತ್ಸಾ ತಜ್ಞರು ಪ್ರತಿ NICU ಅನ್ನು ಶ್ವಾಸಕೋಶದ ತಜ್ಞರು, ಶಿಶು ಪಾಲನಾ ನರ್ಸಿಂಗ್ ಪರಿಣಿತರು ಮತ್ತು ರೆಸಿಡೆಂಟ್ ಫಿಸಿಷಿಯನ್ ಗಳೊಂದಿಗೆ ಸೇರಿಕೊಂಡು ಕಾರ್ಯನಿರ್ವಹಿಸುತ್ತಾರೆ. ತಂಡದ ಸಂಯೋಜಿತ ಪರಿಣಿತಿ ಮತ್ತು NICU ನಲ್ಲಿರುವ ಆರೋಗ್ಯ ಆರೈಕೆ ಉಪಕರಣಗಳು ಗಂಭೀರ ಕಾಯಿಲೆಗಳಿಂದ ಶಿಶುಗಳನ್ನು ಗುಣಮುಖವಾಗಿಸಲು ಬಹಳ ಮುಖ್ಯವಾಗುತ್ತದೆ.

Treatment & Procedures

ನಿಯೋನೇಟಲ್ ಬ್ಲಡ್ ಟ್ರಾನ್ಸ್ ಫ್ಯೂಷನ್…

NICU ನಲ್ಲಿರುವ ಶಿಶುಗಳಿಗೆ ರಕ್ತವನ್ನು ನೀಡುವುದು ಮಾಡುವುದು ಬಹಳ ಸಾಮಾನ್ಯವಾಗಿದೆ. ಶಿಶುಗಳು ಈಗಾಗಲೇ ಬಹಳ ದುರ್ಬಲರಾಗಿರುವ ಕಾರಣ ರಕ್ತದ ವರ್ಗಾವಣೆ ಮಾಡುವುದರಿಂದ ಅವರಲ್ಲಿ ಉತ್ತಮ ರಕ್ತ ಪರಿಚಲನೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಶಿಶುಗಳಿಗೆ ಇಂಟ್ರಾವೀನಸ್ ಲೈನ್ ಮೂಲಕ ರಕ್ತವನ್ನು ಹಾಕಲಾಗುತ್ತದೆ.

Read More

24 ವಾರಗಳ ಗರ್ಭವಾಸ್ಥೆಯನ್ನು ಪೂರ್ಣಗೊಳಿಸಿ ಜನಿಸಿದ ಮಗುವನ್ನು ಉಳಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುವ ಆಧುನಿಕ NICU ನಲ್ಲಿ ಲಭ್ಯವಿರುವ ನವಜಾತ ಶಿಶು ಆರೈಕೆ ಮತ್ತು ಸೌಲಭ್ಯಗಳ ಸುಧಾರಣೆಗೆ ಧನ್ಯವಾದಗಳು. ಡಿಸೆಂಬರ್ 2018 ರಲ್ಲಿ, 23 ವಾರಗಳು ಮತ್ತು 3 ದಿನಗಳ ಗರ್ಭಾವಸ್ಥೆಯೊಂದಿಗೆ ಕೇವಲ 245 ಗ್ರಾಂನಲ್ಲಿ ಜನಿಸಿದ ಮಗು ಬದುಕಲು ಸಾಧ್ಯವಾಯಿತು ಮತ್ತು ಆ ಮಗುವನ್ನು 5 ತಿಂಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಆರೋಗ್ಯಕರ ಜೀವನ ನಡೆಸುತ್ತದೆ ಎಂದು ನಿರೀಕ್ಷಿಸಲಾಗಿದೆ.

 

ಕೆಲವೊಮ್ಮೆ ಶಿಶುಗಳು ಪೂರ್ಣ ಬೆಳವಣಿಗೆ ಇಲ್ಲದ ದೇಹದ ವ್ಯವಸ್ಥೆಗಳೊಂದಿಗೆ ಜನಿಸುತ್ತವೆ, ಇದರಿಂದ ಬದಕುಳಿಯುವುದು ಕಷ್ಟವಾಗುತ್ತದೆ. ಪುಪ್ಪಸಗಳು ಉಸಿರಾಡುವುದಿಲ್ಲ, ಹೃದಯ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಇತ್ಯಾದಿ. 

NICU ಅತ್ಯಾಧುನಿಕ ಸಾಧನಗಳೊಂದಿಗೆ ಸುಸಜ್ಜಿತವಾಗಿದ್ದು ಇದು ನವಜಾತ ಶಿಶುವಿನ ಬದುಕಿಗೆ ಅಪಾಯವನ್ನು ತಂದೊಡ್ಡುವ ಪತ್ತೆಮಾಡಲಾಗದ ಜನ್ಮಜಾತ ಸಮಸ್ಯೆಗಳಲ್ಲಿ ಅಥವಾ ಕಾಲಾವಧಿಯ ಪೂರ್ವ ಜನಿಸಿದ ಶಿಶುಗಳಲ್ಲಿ ಕಡಿಮೆ ಬೆಳವಣಿಗೆಯಾದ ದೇಹದ ವ್ಯವಸ್ಥೆಗಳಿಗೆ ಪೂರಕವಾಗಿ ಬಳಸಲು ವೈದ್ಯರುಗಳಿಗೆ ಅನುವುಮಾಡಿಕೊಡುತ್ತದೆ.

ಸಾಮಾನ್ಯವಾಗಿ NICU ನಲ್ಲಿ ರೋಗನಿರ್ಣಯಿಸುವ ಮತ್ತು ಚಿಕಿತ್ಸೆ ನೀಡುವ ಸಮಸ್ಯೆಗಳೆಂದರೆ: 

 • ಆಪ್ನಿಯಾ (ಉಸಿರುಕಟ್ಟುವಿಕೆ)

 • ರಕ್ತಹೀನತೆ

 • ಬ್ರಾಂಕೋಪುಲ್ಮನರಿ ಡಿಸ್ಪ್ಲಾಸಿಯಾ  (BPD)

 • ಬ್ರಾಡಿಕಾರ್ಡಿಯಾ

 • ಜಲಮಸ್ತಿಷ್ಕ ರೋಗ

 • ನವಜಾತ ಶಿಶುವಿನ ಸೆಪ್ಸಿಸ್

 • ಕಾಮಾಲೆ

 • ಇಂಟ್ರಾವೆಂಟ್ರಿಕ್ಯುಲರ್ ಹೆಮರೇಜ್ (IVH)

 • ಪೇಟೆಂಟ್ ಡಕ್ಟಸ್ ಆರ್ಟೆರಿಯೊಸಸ್ (ಪಿಡಿಎ)

 • ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್ (NEC)

 • ಇನ್ಫ್ಯಾಂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ (RDS)

 • ಪೆರಿವೆಂಟ್ರಿಕ್ಯುಲರ್ ಲ್ಯುಕೋಮಲೇಸಿಯಾ (PVL)

 • ನವಜಾತ ಶಿಶುವಿನ ಟ್ರಾನ್ಸಿಯೆಂಟ್ ಟ್ಯಾಕಿಪ್ನಿಯಾ (TTN)

 • ರೆಟಿನೋಪತಿ ಆಫ್ ಪ್ರಿಮೆಚುರಿಟಿ (ROP)

 

Facilities & Services

NICU ನಲ್ಲಿನ ಉಪಕರಣಗಳು ಮತ್ತು ಸೇವೆಗಳು - 

ಇನ್ಕ್ಯುಬೇಟರ್ ಹಾಸಿಗೆಗಳು (ನವಜಾತ ಶಿಶುಗಳಿಗೆ ಸೂಕ್ತವಾದ ಪರಿಸ್ಥಿತಿಗಳನ್ನು ಪುನರಾವರ್ತಿಸಲು ಬಳಸಲಾಗುತ್ತದೆ) - ಆಕ್ಸಿಜನ್ ಹುಡ್ - ನವಜಾತ ವೆಂಟಿಲೇಟರ್ - ರೇಸಸ್ಕಿಟೆಷನ್ - ಐವಿ ಇನ್ಫ್ಯೂಷನ್ - ರಕ್ತ ವರ್ಗಾವಣೆ - ಪ್ಲಾಸ್ಮಾ ವರ್ಗಾವಣೆ - ನವಜಾತ ಆರೋಗ್ಯ ಮಾನಿಟರ್ಗಳು (ಬಿಪಿ, ಹೃದಯ ಬಡಿತ, ತಾಪಮಾನ, ಉಸಿರಾಟ) - ಹಾಸಿಗೆಯಲ್ಲಿನ ಅಲ್ಟ್ರಾಸೌಂಡ್, ಎಕೋಕಾರ್ಡಿಯೋಗ್ರಾಮ್ - ಹಾಲುಣಿಸುವ ವ್ಯವಸ್ಥೆ - ಕನಿಷ್ಠ ಇನ್ವೇಸಿವ್ ನಿಯೋನೇಟಲ್ ಡಯಾಗ್ನೋಸ್ಟಿಕ್ ಕಿಟ್‌ಗಳು - ಸಾರಿಗೆ ಇನ್‌ಕ್ಯುಬೇಟರ್‌ಗಳು - ಆಂಟಿಬಯೋಟಿಕ್ ಚಿಕಿತ್ಸೆ NICU ಆರೈಕೆ ಮಟ್ಟಗಳು - 

 • ಹಂತ 1 ಆರೈಕೆ- 34 ಅಥವಾ ಅದಕ್ಕಿಂತ ಹೆಚ್ಚು ವಾರಗಳ ಗರ್ಭಾವಸ್ಥೆ ಅವಧಿಯಲ್ಲಿ ಜನಿಸಿದ 1800 ಗ್ರಾಂ ತೂಕದ ನವಜಾತ ಶಿಶುಗಳಿಗೆ 

 •  ಹಂತ 2 ಆರೈಕೆ- 30 ಮತ್ತು 34 ವಾರಗಳ ನಡುವಿನ ಗರ್ಭಾವಸ್ಥೆ ಅವಧಿಯಲ್ಲಿ ಜನಿಸಿದ 1200 ಗ್ರಾಂಗಳಿಗಿಂತ ಹೆಚ್ಚು ಆದರೆ 1800 ಗ್ರಾಂಗಿಂತ ಕಡಿಮೆ ತೂಕವಿರುವ ನವಜಾತ ಶಿಶುಗಳಿಗೆ.  

 • ಹಂತ 3 ಆರೈಕೆ - 30 ವಾರಗಳಿಗಿಂತ ಕಡಿಮೆ ಗರ್ಭಾವಸ್ಥೆ ಅವಧಿಯನ್ನು ಪೂರ್ಣಗೊಳಿಸಿರುವ 1200 ಗ್ರಾಂಗಿಂತ ಕಡಿಮೆ ತೂಕವಿರುವ ನವಜಾತ ಶಿಶುಗಳಿಗೆ .

FAQ's

The first challenge for the doctors is to incubate the neonate and maintain stability. After this is achieved, the neonate must be examined, diagnosed and treated for any complications that can threaten survivability. Neonatal nurses, respiratory therapists and lactation experts ensure that the neonate is given the right care and nutrition until it is possible to discharge the patient. Visit our neonatology hospital in Bangalore to know more.

If the newborn's body systems are unable to support it sufficiently, NICU admittance becomes necessary. However, sometimes the neonate is admitted to the NICU to be kept under observation because of complications during birth.

 • Early contractions

 • Increased pelvic/abdominal pressure

 • Continuous back pain

 • Premature membrane rupture (water breaks early)

Visit the best neonatology hospital in Bangalore if you are experiencing such symptoms.

There are many factors that can contribute to preterm birth, and even those women with no known risk factors can go into labor prematurely. The best thing to do is to be in regular contact with your healthcare provider and to detect possibilities of preterm birth early on.

Due to the potential for pregnancy complications, it is important to be regular with your doctor and to investigate any unusual symptoms at the earliest.

ಮಣಿಪಾಲ್ ಆಸ್ಪತ್ರೆಯು ತನ್ನ ಎಲ್ಲ ರೋಗಿಗಳಿಗೆ ಸಾಧ್ಯವಾದಷ್ಟು ಅತ್ಯುತ್ತಮ ಆರೈಕೆಯನ್ನು ನೀಡಲು ಬದ್ಧವಾಗಿದೆ. NICU ನಲ್ಲಿರುವ ನಮ್ಮ ರೋಗಿಗಳಿಗೆ ಉತ್ತಮ ಗುಣಮಟ್ಟ, ಜೀವನ ಬದುಕುಳಿಸುವ ಆರೈಕೆಯನ್ನು ಒದಗಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ನಮ NICU ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ಇಂದೇ ನಮ್ಮ ನವಜಾತ ಶಿಶು ಚಿಕಿತ್ಸಾ ತಜ್ಞರೊಬ್ಬರನ್ನು ಭೇಟಿಯಾಗಲು ನಮ್ಮನ್ನು ಸಂಪರ್ಕಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ