ಹ್ಯಾಂಡ್ ಸರ್ಜರಿ (ಕೈ ಶಸ್ತ್ರಚಿಕಿತ್ಸೆ ವಿಭಾಗ)


ಮಣಿಪಾಲ್ ಆಸ್ಪತ್ರೆಯ ಕೈ ಶಸ್ತ್ರಚಿಕಿತ್ಸೆ ವಿಭಾಗವು ಅತ್ಯಂತ ವಿಶ್ವಾಸಾರ್ಹಾ ಕೈ ಸಮಸ್ಯೆ ಚಿಕಿತ್ಸಕರನ್ನು ಒಳಗೊಂಡಿದ್ದು ಇವರು ಮೂಳೆರೋಗಶಾಸ್ತ್ರದಲ್ಲಿ ವೈದ್ಯಕೀಯ ಮಂಡಳಿ ಪ್ರಮಾಣಪತ್ರವನ್ನು ಪಡೆದಿದ್ದು ಕೈ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಪದವಿಯನ್ನು ಪಡೆದಿದ್ದಾರೆ. ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಹಿಡಿದು ಮೊಣಕೈ, ಕೈ, ಭುಜ ಮತ್ತು ಮಣಿಕಟ್ಟುಗಳಲ್ಲಿನ ಗಾಯ ಮತ್ತು ಅಸ್ವಸ್ಥತೆಗಳ ಪುನರ್ವಸತಿಯವರೆಗೆ ಪರಿಣಿತಿಯು ಬದಲಾಗುತ್ತದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಫತ್ರೆಯಲ್ಲಿ, ನಮ್ಮ ಮೇಧಾವಿ ಕೈ ಶಸ್ತ್ರಚಿಕಿತ್ಸಕರು ಯಾವುದೇ ರೀತಿಯ ಕೈ ಸಂಬಂಧಿತ ಗಾಯಗಳನ್ನು ಗುಣಪಡಿಸುವ ಮೂಲಕ ಸುಧಾರಿತ ಆರೈಕೆಯನ್ನು ಒದಗಿಸಲು ಜೀವನಪೂರ್ತಿ ಬದ್ಧರಾಗಿದ್ದಾರೆ. ನಾವು ಪುನರ್ವಸತಿ ಚಿಕಿತ್ಸೆಗಳನ್ನು ನಮ್ಮ ಪ್ರಾಥಮಿಕ ಆರೈಕೆಯಾಗಿ ಅದರಲ್ಲೂ ವಿಶೇಷವಾಗಿ ಶಸ್ತ್ರಚಿಕಿತ್ಸೆಯ ನಂತರದಲ್ಲಿ ಬಳಸುತ್ತೇವೆ.

Treatment & Procedures

ಇನ್ವೇಸಿವ್ ವಿಧಾನವನ್ನು ಕಡಿಮೆಗೊಳಿಸುವುದು

ನಮ್ಮ ಬಹುಶಿಸ್ತಿನ ಸಿಬ್ಬಂದಿ ತಂಡವು ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ರಹಿತ ಎರಡೂ ವಿಧಾನಗಳನ್ನು ಬಳಸಿ ಟೆಂಡನ್ ಅಥವಾ ಸಂಧಿವಾತ ಸಮಸ್ಯೆಗಳನ್ನು ನೋಡುತ್ತಾರೆ. ಮಣಿಪಾಲ್ ನಲ್ಲಿ ಕೈ ಸಮಸ್ಯೆಯ ಶಸ್ತ್ರಚಿಕಿತ್ಸಕರ ತಂಡವು ಸ್ಥಳೀಯ ಚುಚ್ಚುಮದ್ದುಗಳು, ಕೈ ಚಿಕಿತ್ಸೆ ಮತ್ತು ಚಿಕಿತ್ಸೆಗಾಗಿ ಇತರ ಮಾರ್ಗಗಳನ್ನು ಅನುಸರಿಸುವ ಮೂಲಕ ದುರ್ಬಲ ಮತ್ತು ನೋವುದಾಯಕ ಕೈ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ.…

Read More

ಕೈ, ಮೊಣಕೈ ಅಥವಾ ಮಣಿಕಟ್ಟುಗಳಲ್ಲಿ ನೋವು ಹಲವಾರು ಸಮಸ್ಯೆಗಳಲ್ಲಿ ಕಂಡುಬರುತ್ತದೆ. ಮಾನವನ ಕೈಯೊಂದರಲ್ಲಿಯೇ 37 ಕ್ಕೂ ಹೆಚ್ಚಿನ ಮೂಳೆಗಳು ಮತ್ತು 30 ಕ್ಕೂ ಹೆಚ್ಚಿನ ಸ್ನಾಯುಗಳಿವೆ, ಇದಕ್ಕಾಗಿ ನಾವು ಅಸಂಖ್ಯಾತ ಶ್ರೇಣಿಯ ಚಿಕಿತ್ಸೆಗಳನ್ನು ಒದಗಿಸುತ್ತೇವೆ. ಮಾನವ ಸಂಕೀರ್ಣ ಅಂಗರಚನೆಯನ್ನು ಅರ್ಥಮಾಡಿಕೊಂಡಿರುವ ನಮ್ಮ ಪರಿಣಿತರು ಇದಕ್ಕಾಗಿ ಔಷಧೋಪಚಾರ ನಡೆಸುತ್ತಾರೆ. ನಮ್ಮ ಸಮಾಲೋಚಕ ಮತ್ತು ಶಸ್ತ್ರಚಿಕಿತ್ಸಕ ಸೇವೆಗಳಲ್ಲಿ ಈ ಕೆಳಗಿನ ಸಮಸ್ಯೆಗಳಿಗಾಗಿ ಚಿಕಿತ್ಸೆಯ ಸೌಲಭ್ಯಗಳನ್ನು ಒದಗಿಸುತ್ತೇವೆ: 

 

 • ಉಳುಕುಗಳು ಮತ್ತು ಮೂಳೆ ಮುರಿತಗಳು 

 • ಕಾರ್ಪಲ್ ಟನಲ್ ಸಿಂಡ್ರೋಮ್ 

 • ಗೆಡ್ಡೆಗಳು ಮತ್ತು ಟ್ಯೂಮರ್ ಗಳು 

 • ಗಾಂಗ್ಲಿಯಾನ್ ಸಿಸ್ಟ್ 

 • ಅಸ್ಥಿಸಂಧಿವಾತ 

 • ನ್ಯೂರೋಪತಿ 

 • ಒತ್ತಡ ಪೆಟ್ಟುಗಳು 

 • ಟೆಂಡನೈಟಿಸ್ 

 • ಟ್ರಿಗರ್ ಬೆರಳು 

 • ಟೆಂಡನ್ ಮತ್ತು ನರಗಳ ಸೀಳುವಿಕೆ

 • ಕೈ/ಭುಜ/ಮೊಣಕೈ ಪುನರ್ನಿರ್ಮಾಣ (ರುಮಟಾಯ್ಡ್ ಸಂಧಿವಾತಕ್ಕೆ)

 • ಕೈಗಳ ಸಂಧಿವಾತ ಸಮಸ್ಯೆಗಳು 

 • ಮೃದು ಅಂಗಾಂಶ ಪುನರ್ನಿರ್ಮಾಣ ಮತ್ತು ಸ್ನಾಯುರಜ್ಜು ವರ್ಗಾವಣೆ

 • ಪುನರ್ನಿರ್ಮಾಣ ಮೈಕ್ರೋಸರ್ಜರಿ

 • ಬಿಗಿತ ಮತ್ತು ಸಂಕೋಚನಗಳು

 • ಸ್ಪಾಸ್ಟಿಸಿಟಿ ಅಥವಾ ಸೆರೆಬ್ರಲ್ ಪಾಲ್ಸಿ

 • ಸಾಂಕ್ರಾಮಿಕ ಅಸ್ವಸ್ಥತೆಗಳು

 • ನಾಳೀಯ / ವಾಸೊಸ್ಪಾಸ್ಟಿಕ್ ಅಸ್ವಸ್ಥತೆಗಳು

ಮೂಳೆ ಮುರಿತದ ನಂತರ ಮೂಳೆಗಳು ತಪ್ಪಾಗಿ  ಸೇರಿಕೊಂಡಿರುವುದು ಅಥವಾ ಸೇರಿಕೊಳ್ಳದೇ ಇರುವುದು

Facilities & Services

ಮಣಿಪಾಲ್ ನಲ್ಲಿರುವ ಪರಿಣಿತರು ಕೈ ಗಾಯಗಳಿಗೆ ಸಂಬಂಧಿಸಿರುವ ಹಲವಾರು ಸಮಸ್ಯೆಗಳನ್ನು ಪತ್ತೆ ಮಾಡಲು ಮತ್ತು ಚಿಕಿತ್ಸೆ ನೀಡಲು ಮೂಳೆರೋಗ ಶಾಸ್ತ್ರದ ಅನುಭವ ಹೊಂದಿದ್ದಾರೆ. ನಮ್ಮ ಬಹುಶಿಸ್ತಿನ ಸಿಬ್ಬಂದಿ ತಂಡವು ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ರಹಿತ ಎರಡೂ ವಿಧಾನಗಳನ್ನು ಬಳಸಿ ಟೆಂಡನ್(ಸ್ನಾಯುರಜ್ಜು) ಅಥವಾ ಸಂಧಿವಾತ ಸಮಸ್ಯೆಗಳನ್ನು ನೋಡುತ್ತಾರೆ. ಮಣಿಪಾಲ್ ನಲ್ಲಿ ಕೈ ಸಮಸ್ಯೆಯ ಶಸ್ತ್ರಚಿಕಿತ್ಸಕರ ತಂಡವು ಸ್ಥಳೀಯ ಚುಚ್ಚುಮದ್ದುಗಳು, ಕೈ ಚಿಕಿತ್ಸೆ, ಪಟ್ಟಿ ಕಟ್ಟುವುದು ಮತ್ತು ಚಿಕಿತ್ಸೆಗಾಗಿ ಇತರ ಮಾರ್ಗಗಳನ್ನು ಅನುಸರಿಸುವ ಮೂಲಕ ದುರ್ಬಲ ಮತ್ತು ನೋವುದಾಯಕ ಕೈ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ. ಒಂದುವೇಳೆ ಶಸ್ತ್ರಚಿಕಿತ್ಸೆ ಮಾಡಿಸಲು ಹೇಳಿದ್ದರೆ, ಶಸ್ತ್ರಚಿಕಿತ್ಸಕರು ಮಣಿಕಟ್ಟು, ಕೈ, ಬೆರಳುಗಳು ಮತ್ತು ಮೃದು ಅಂಗಾಂಶಗಳಲ್ಲಿನ ಮೂಳೆಗಳು, ನರಗಳ ನಿಖರ ಮರುನಿರ್ಮಾಣವನ್ನು ಖಾತ್ರಿಪಡಿಸಲು ಅತ್ಯಂತ ಆಧುನಿಕ ಮೈಕ್ರೋಸ್ಕೋಪಿಕ್ ವಿಧಾನಗಳನ್ನು ಬಳಸುತ್ತಾರೆ. ಉದಾಹರಣೆಗೆ ಅತಿ ಒತ್ತಡ ಗಾಯ, ಸೀಳಿದ ಮತ್ತು ಹಾನಿಯಾದ ಲಿಗಾಮೆಂಟುಗಳು ಮತ್ತು ಮೂಳೆಮುರಿತಗಳ ಚಿಕಿತ್ಸೆ ಮತ್ತು ಮೌಲ್ಯಮಾಪನಕ್ಕಾಗಿ ಮಣಿಕಟ್ಟಿನ ಆರ್ಥ್ರೋಸ್ಕೋಪಿ ಮಾಡಲಾಗುತ್ತದೆ. ಇದನ್ನು ಸಂಧಿವಾತದಿಂದ ಉಂಟಾಗಿರುವ ಕೀಲು ಹಾನಿಯ ತಪಾಸಣೆ ಮಾಡುವುದಕ್ಕಾಗಿಯೂ ಸಹ ಬಳಸಲಾಗುತ್ತದೆ.  ರೋಗಿಯ ನೋವು ರಹಿತ ರಚನೆ ಮತ್ತು ಕಾರ್ಯಾಚರಣೆಯ ಚಿಕಿತ್ಸೆಯನ್ನು ಅನುಭವಿಸುವುದನ್ನು ಖಾತ್ರಿಪಡಿಸುವುದು ತಜ್ಞರ ಮುಖ್ಯ ಉದ್ದೇಶವಾಗಿದೆ. ಆಶ್ರಯ ಆರೈಕೆಯೂ ನಮ್ಮ ಮುಖ್ಯ ಗಮನ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಹಂತದಲ್ಲಿ, ನಾವು ಚಿಕಿತ್ಸೆ ನೀಡಬೇಕಾದ  ಪ್ರದೇಶಕ್ಕೆ ಸುರಕ್ಷೆ ನೀಡುತ್ತೇವೆ. ಸ್ಥಿರ ಚೇತರಿಕೆಯನ್ನು ಉತ್ತೇಜಿಸಲು ಇದನ್ನು ಗುಣಪಡಿಸುವಾಗ ನಿರಂತರವಾಗಿ ಮಾಡುತ್ತೇವೆ. ಇದರಲ್ಲಿ ನಾವು ಕೈ ಅಥವಾ ಮಾಣಿಕಟ್ಟನ್ನು ರಕ್ಷಿಸಲು ಪಟ್ಟಿ ಹಾಕಲಾಗುತ್ತದೆ ಅಥವಾ ಬೇರೆ ಉಪಕರಣವನ್ನು ಬಳಸಲಾಗಿರುತ್ತದೆ. ನಂತರದ ಆರೈಕೆಯಲ್ಲಿ ನಿಧಾನ ಗತಿಯಲ್ಲಿ ಬಲ, ಚಲನೆ ಮತ್ತು ಒಟ್ಟಾರೆ ಕಾರ್ಯದ ಮೇಲೆ ಗಮನಹರಿಸುವುದಾಗಿದೆ. ಚಿಕಿತ್ಸೆಯ ಭಾಗವಾಗಿ ರೋಗಿಗಳಿಗೆ ವ್ಯಾಯಾಮವನ್ನು ಹೇಳಿಕೊಡಲಾಗುತ್ತದೆ. ರೋಗಿಯ ಕಾರ್ಯ ಪರಿಸರ, ಕೆಲಸಗಳು ಮತ್ತು ಸಾಧನಗಳನ್ನು ಪರಿಗಣಿಸಿ ಸಮಾಲೋಚನೆಯನ್ನು ಮಾಡಲಾಗುತ್ತದೆ. ಒಬ್ಬ ವ್ಯಕ್ತಿಯ ಮೂಲ ಕಾರ್ಯಾಚರಣೆಯ ಮೇಲೆ ನರಮಂಡಲದ ಗಾಯಗಳು, ಅಸ್ವಸ್ಥತೆಗಳು ಮತ್ತು ಪಾರ್ಶ್ವವಾಯು ಕೆಟ್ಟ ಪ್ರಭಾವ ಬೀರುತ್ತದೆ ಮತ್ತು ಅವರ ಚಲನೆ, ಬಲ ಮತ್ತು ಕೈಗಳ ಮೇಲೆ ಅವರ ನಿಯಂತ್ರಣವನ್ನು ಕಡಿಮೆ ಮಾಡಿಬಿಡುತ್ತದೆ. ನಮ್ಮ ಮೂಳೆರೋಗ ಚಿಕಿತ್ಸಕರು ಮತ್ತು ಪುನರ್ವಸತಿ ಸಿಬ್ಬಂದಿಯು ವ್ಯಾಯಾಮ ತರಬೇತಿ ಮತ್ತು ಸಹಾಯಕ ಸಾಧನಗಳನ್ನು ಬಳಸಿಕೊಂಡು ವಿವಿಧ ರೀತಿಯ ಪುನಶ್ಚೈತನ್ಯಕಾರಿ ವಿಧಾನಗಳಿಗೆ ಸಹಾಯ ಮಾಡಲು  ಕೆಲಸ ಮಾಡುತ್ತಾರೆ. ಎರಡೂ ತೋಳಿನ ತರಬೇತಿ, ಕ್ರಿಯಾತ್ಮಕ ವಿದ್ಯುತ್ ಪ್ರಚೋದನೆ, ದುರ್ಬಲತೆ-ಆಧಾರಿತ ತರಬೇತಿ ಮತ್ತು ರೊಬೊಟಿಕ್-ನೆರವಿನ ಪುನರ್ವಸತಿ ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಅಳವಡಿಸಿಕೊಂಡ ಕೆಲವು ಇತರ ತಂತ್ರಗಳಾಗಿವೆ. .

FAQ's

An assigned specialist will first look at general information about the patient and review the current injury or disorder. Based on the findings, further treatment or diagnostic procedures will be recommended.

Stiffness, difficulty or strain while holding objects, pain in specific locations may all point to symptoms of hand-related injuries. Manipal Hospitals is the Hand surgery hospital in Bangalore, visit today for the best treatment.

ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳೊಂದಿಗೆ ದೀರ್ಘ ಸಮಯದ ಪಾಲುದಾರಿಕೆಯನ್ನು ನಿರ್ಮಿಸಲು, ಅವರಿಗೆ ಉನ್ನತ ಗುಣಮಟ್ಟದ, ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ. ನಮ ಕೈ ಸಮಸ್ಯೆ ಶಸ್ತ್ರಚಿಕಿತ್ಸಾ ವಿಭಾಗವು ಮತ್ತು ಅದರ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಕೈ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ಇಂದೇ ನಮ್ಮ ಕೈ ಸಮಸ್ಯೆ ಶಸ್ತ್ರಚಿಕಿತ್ಸಕರೊಬ್ಬರನ್ನು ಭೇಟಿ ಮಾಡಲು ನಮ್ಮನ್ನು ಸಂಪರ್ಕಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ