SELECT `treatments`.`page_banner`, `treatments`.`title_text`, `treatments`.`h1_tag`, `treatments_lang`.`title`, `treatments_lang`.`content` FROM `treatments_lang` INNER JOIN `treatments` ON `treatments`.`treatment_id` = `treatments_lang`.`treatmentid` WHERE `treatments`.`slug` = 'fnac-procedure' AND `treatments`.`status_ind` = 1 AND `treatments_lang`.`language_id` = '6' AND `treatments_lang`.`status_ind` = 1 ManipalHospitals  
banner-img

ಎಫ್ ಎನ್ ಎ ಸಿ ವಿಧಾನ

ಅವಲೋಕನ:  

  • ಎಫ್ ಎನ್ ಎ ಸಿ ಅಥವಾ ಫೈನ್ ನೀಡಲ್ ಆಸ್ಪಿರೇಷನ್ ಸೈಟಾಲಾಜಿ ಕಾರ್ಯವಿಧಾನದಲ್ಲಿ ಒಂದು ತೆಳು, ಪೊಳ್ಳಾದ ಸೂಜಿಯು ಯಾವುದೇ ಅಂಗಾಂಗ ಅಥವಾ ಗೆಡ್ಡೆಯಿಂದ ದ್ರವ ಅಥವಾ ಅಂಗಾಂಶದಿಂದ ಜೀವಕೋಶಗಳ ಮಾದರಿಯನ್ನು ತೆಗೆಯುತ್ತದೆ. ಇದನ್ನು ಸಾಮಾನ್ಯವಾಗಿ ಸ್ತನಗಳಲ್ಲಿನ ಗೆಡ್ಡೆ ಅಥವಾ ಥೈರಾಯಿಡ್ ಗ್ರಂಥಿ ರೀತಿಯ ಕುತ್ತಿಗೆಯಲ್ಲಿರುವ ಗ್ರಂಥಿಗಳಲ್ಲಿರುವ ಗೆಡ್ಡೆಯೊಳಗಿನ ಕೋಶಗಳ ವಿಧವನ್ನು ಗುರುತಿಸಲು ಮಾಡಲಾಗುತ್ತದೆ. ಇದು ಕ್ಯಾನ್ಸರ್ ರೋಗವನ್ನು ತಿಳಿದುಕೊಳ್ಳಲು ಬಹಳ ಉಪಯುಕ್ತ ವಿಧಾನವಾಗಿದೆ. 

ವಿಧಾನದ ಮೊದಲು: 

  • ಒಂದುವೇಳೆ ನೀವು ರಕ್ತ ತೆಳುಮಾಡುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ವೈದ್ಯರಿಗೆ ದಯವಿಟ್ಟು ಮೊದಲೇ ತಿಳಿಸಿ. 

ವಿಧಾನದ ಸಮಯದಲ್ಲಿ: 

  • ನಿಮ್ಮನ್ನು ಒಂದು ಆರಾಮಾದ ಸ್ಥಳದಲ್ಲಿ ಮಲಗಿಸಲಾಗುತ್ತದೆ ಮತ್ತು ವಿಧಾನದ ಉದ್ದಕ್ಕೂ ನಿಮ್ಮ ಖಾಸಗಿತನವನ್ನು ಗೌರವಿಸಲಾಗುತ್ತದೆ. ನಿಮಗೆ ನಿಮ್ಮ ಬಟ್ಟೆಯನ್ನು ಬದಲಾಯಿಸಿ ಗೌನ್ ಧರಿಸಲು ಹೇಳಲಾಗುತ್ತದೆ. 
  • ವೈದ್ಯರು ಚುಚ್ಚುಮದ್ದು ನೀಡಬೇಕಾದ ಸ್ಥಳವನ್ನು ಸ್ವಚ್ಛಮಾಡಿಕೊಳ್ಳುತ್ತಾರೆ. ಕೆಲವು ರೋಗಿಗಳಲ್ಲಿ, ಆ ಪ್ರದೇಶವನ್ನು ಸುಂದು ಮಾಡಲು ಸ್ಥಳೀಯ ಅರಿವಳಿಕೆಯನ್ನು ಸಹ ನೀಡಲಾಗುತ್ತದೆ. 
  • ಒಂದು ಬಹಳ ತೆಳು, ಪೊಳ್ಳಾದ ಸೂಜಿಯೊಂದಿಗೆ ಸಿರಿಂಜ್ ಅನ್ನು ನಿಧಾನವಾಗಿ ಚರ್ಮದ ಮೂಲಕ ಅಂಗಾಂಗದೊಳಗೆ ಅಥವಾ ಗೆಡ್ಡೆಯೊಳಗೆ ಚುಚ್ಚಲಾಗುತ್ತದೆ. ವೈದ್ಯರು ನಿಧಾನವಾಗಿ ಪ್ಲನ್ಗರ್ ಎಳೆದುಕೊಳ್ಳುವ ಮೂಲಕ ಸೂಜಿಯೊಳಗೆ ಕೆಲವು ಕೋಶಗಳನ್ನು ಹೀರಿಕೊಳ್ಳಲು ಸಿರಿಂಜ್ ಬಳಸುತ್ತಾರೆ. 
  • ಕೆಲವೊಮ್ಮೆ ಗೆಡ್ಡೆಯು ಬಹಳ ಚಿಕ್ಕದಾಗಿದ್ದಾಗ, ಸ್ಕ್ಯಾನಿಂಗ್ ಮಷೀನನ್ನು ಬಳಸಿ ಸೂಜಿಯನ್ನು ಸರಿಯಾದ ಸ್ಥಳಕ್ಕೆ ಚುಚ್ಚಲಾಗುತ್ತದೆ. 
  • ಈ ವಿಧಾನವು ಕೆಲವು ಸೆಕೆಂಡುಗಳಿಂದ ಹಿಡಿದು ಕೆಲವು ನಿಮಿಷಗಳವರೆಗೆ ಆಗುತ್ತದೆ. ನಂತರ ವೈದ್ಯರು ಸೂಜಿಯನ್ನು ಹೊರತೆಗೆದು ರಕ್ತಸ್ರಾವವನ್ನು ನಿಲ್ಲಿಸುವುದಕ್ಕಾಗಿ ಸ್ವಲ್ಪ ಒತ್ತಡವನ್ನು ಹಾಕಬಹುದು. 

ವಿಧಾನದ ನಂತರ : 

  • ಸೂಜಿಯ ಜಾಗದಲ್ಲಿ ಗಾಯ ವಾಸಿಯಾಗುವವರೆಗೆ ನೀವು ಸಡಿಲವಾದ ಬಟ್ಟೆಗಳನ್ನು ಧರಿಸಬೇಕು. 
  • ಬಹುತೇಕ ಫೈನ್ ನೀಡಲ್ ಆಸ್ಪಿರೇಷನ್ ವಿಧಾನಗಳು ಯಾವುದೇ ಸಮಸ್ಯೆಯಿಲ್ಲದೆ ನೆರವೇರುತ್ತವೆ. 
  • ಅಡ್ಡಪರಿಣಾಮಗಳು ಬಹಳ ಅಪರೂಪವಾಗಿದ್ದರೂ ಸಹ ಸೂಜಿ ಚುಚ್ಚಿದ ಜಾಗದಲ್ಲಿ ಕೆಲವು ದಿನಗಳವರೆಗೆ ನೋವು, ರಕ್ತಸ್ರಾವ ಮತ್ತು ರಕ್ತ ಹೆಪ್ಪುಗಟ್ಟುವುದು ಆಗಬಹುದು. ಆದರೂ ಇದು ಬೇಗನೆ ನಿಂತು ವಾಸಿಯಾಗುತ್ತದೆ. 
  • ವಿಧಾನವನ್ನು ಮಾಡಿದ ನಂತರ ಅನುಸರಿಸಬೇಕಾದ ಯಾವುದೇ ಆಹಾರ ಕ್ರಮ ಇರುವುದಿಲ್ಲ. 
  • ಈ ವಿಧಾನದ ವರದಿಗಳು ಸಾಮಾನ್ಯವಾಗಿ ಒಂದು ವಾರ ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆರಂಭಿಕ ವರದಿಗಳು ಸ್ವಲ್ಪ ಬೇಗ ಬರಬಹುದು. 
ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ