ಜನರಲ್ ಸರ್ಜರಿ


ಮಣಿಪಾಲ್ ಆಸ್ಪತ್ರೆಯ ಜನರಲ್ ಸರ್ಜರಿಯ ವಿಭಾಗವು ಭಾರತದ ಅತ್ಯಂತ ಸಮಗ್ರ ಜನರಲ್ ಸರ್ಜರಿ ಅಭ್ಯಾಸಗಳಲ್ಲಿ ಒಂದಾಗಿ ಅಸಮಾನ್ಯ ಸೌಲಭ್ಯಗಳೊಂದಿಗೆ ಅತ್ಯಂತ ಪರಿಣತ ಶಸ್ತ್ರಚಿಕಿತ್ಸಕರನ್ನು ಒಳಗೊಂಡಿದ್ದು ಅತ್ಯಧಿಕ ಯಶಸ್ಸಿನ ದರವನ್ನು ಖಾತ್ರಪಡಿಸುತ್ತದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯಲ್ಲಿನ ಶಸ್ತ್ರಚಿಕಿತ್ಸೆಯ ತಂಡಗಳು ಪ್ರತಿವರ್ಷ ಸಾವಿರಾರು ರೋಗಿಗಳಿಗೆ ಬಹುಕೋನೀಯ ವಿಧಾನದಿಂದ ಚಿಕಿತ್ಸೆ ನೀಡುತ್ತದೆ. ತಂಡದ ಪರಿಣತಿ ಮತ್ತು ತಂತ್ರಜ್ಞಾನವು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಗಳ ಆಯ್ಕೆಗಳನ್ನು ನೀಡುತ್ತದೆ. ಜನರಲ್ ಸರ್ಜರಿಯ ವಿಭಾಗವು ಅರಿವಳಿಕೆ ತಜ್ಞರು, ವಿಕಿರಣಶಾಸ್ತ್ರಜ್ಞರು, ಹೃದ್ರೋಗ ತಜ್ಞರು ಇತ್ಯಾದಿ ತಜ್ಞರೊಂದಿಗೆ ಕಾರ್ಯನಿರ್ವಹಿಸುವ ಮೂಲಕ ರೋಗಿಗಳಿಗೆ ಬಹುಕ್ಷೇತ್ರಿಯ ವಿಧಾನದೊಂದಿಗೆ ಸಮಗ್ರ ಶಸ್ತ್ರಚಿಕಿತ್ಸೆಯ ಆರೈಕೆಯನ್ನು ಒದಗಿಸುತ್ತದೆ. 

Treatment & Procedures

ಲೈಪೋಮಾ ಎಕ್ಸಿಷನ್

ಅವಲೋಕನ ಲೈಪೋಮಾ ಒಂದು ಸಣ್ಣ ಕೊಬ್ಬಿನ ಗಂಟಾಗಿದ್ದು ಯಾವುದೇ ರೋಗಲಕ್ಷಣಗಳಾಗಲೀ ಅಥವಾ ಸಮಸ್ಯೆಯನ್ನಾಗಲೀ ತೋರಿಸುವುದಿಲ್ಲ. ಇದು ಕ್ಯಾನ್ಸರ್ ಗೆಡ್ಡೆಯಲ್ಲ. ಇದು ಸಾಮಾನ್ಯವಾಗಿ ಚರ್ಮದ ಕೆಳಗೆ ಇರುತ್ತದೆ ಮತ್ತು ಇದರ ಮೇಲೆ ಒತ್ತಡ ಹಾಕಿದಾಗ ಸರಳವಾಗಿ ಜರುಗುತ್ತದೆ. ಇದನ್ನು ನಾವು ಕುತ್ತಿಗೆ, ಭುಜಗಳು, ಬೆನ್ನು, ಕಿಬ್ಬೊಟ್ಟೆ, ತೋಳುಗಳು ಮತ್ತು ತೊಡೆಗಳ ಹತ್ತಿರ ಕಾಣಬಹುದು. ಒಂದುವೇಳೆ ಇದರಿಂದ ನೋವಾಗುತ್ತಿದ್ದರೆ, ಬೆಳೆಯುತ್ತಿದ್ದರೆ ಅಥವಾ…

Read More

ಚರ್ಮದ ಕುರು

ಅವಲೋಕನ : ಚರ್ಮದ ಕೆಳಗಿನ ಪದರದಲ್ಲಿ ಕೀವು ತುಂಬಿದ ಚೀಲವನ್ನು ಕುರು ಎನ್ನುತ್ತಾರೆ. ಈ ಗುಳ್ಳೆಯಲ್ಲಿ ಅತಿಯಾಗಿ ಕೀವು ಅಥವಾ ಅರೆಪಾರದರ್ಶಕ ದ್ರವ ತುಂಬಿಕೊಂಡಿರುತ್ತದೆ. ಇದು ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಸೋಂಕಾಗಿರುತ್ತದೆ ಮತ್ತು ದೇಹದ ಯಾವುದೇ ಭಾಗದಲ್ಲಿಯೂ ಬರಬಹುದು. ಶಸ್ತ್ರಚಿಕಿತ್ಸೆಯ ಮೊದಲು: ಶಸ್ತ್ರಚಿಕಿತ್ಸೆಯನ್ನು ಮಾಡುವ ಮೊದಲು ಅನುಸರಿಸಬೇಕಾದ ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಶಸ್ತ್ರಚಿಕಿತ್ಸೆಯಲ್ಲಿ : ಇದೊಂದು…

Read More

ಉಗುರು ಸುತ್ತು (ಇಂಗ್ರೌನ್ ಟೋ ನೇಲ್)

ಅವಲೋಕನ: ಕಾಲ್ಬೆರೆಳುಗಳ ಸುತ್ತಲಿನ ಚರ್ಮದೊಳಗೆ ಉಗುರುಗಳ ಅಂಚುಗಳು ಬೆಳೆದುಕೊಂಡಾಗ ಅದನ್ನು ಉಗುರುಸುತ್ತು ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಉಗುರುಸುತ್ತು ಕಾಲುಗಳ ಹೆಬ್ಬೆರೆಳುಗಳ ಸುತ್ತ ಆಗುತ್ತದೆ. ಶಸ್ತ್ರಚಿಕಿತ್ಸೆಯ ಮುನ್ನ: ಶಸ್ತ್ರಚಿಕಿತ್ಸೆಯನ್ನು ಮಾಡುವ ಮೊದಲು ಅನುಸರಿಸಬೇಕಾದ ಯಾವುದೇ ನಿರ್ದಿಷ್ಟ ಸೂಚನೆಗಳು ಇಲ್ಲ. ಶಸ್ತ್ರಚಿಕಿತ್ಸೆಯಲ್ಲಿ: ಇದೊಂದು ಇನ್ವೇಸಿವ್ ಪ್ರಕ್ರಿಯೆಯಾಗಿದ್ದು ಇದರ ಶಸ್ತ್ರಚಿಕಿತ್ಸಾವಿಧಾನವು ಸಾಮಾನ್ಯವಾಗಿ…

Read More

ಪರೋನೈಕಿಯಾ ಉಗುರು ಸೋಂಕು

ಅವಲೋಕನ: ಪರೋನೈಕಿಯಾ ಉಗುರು ಸೋಂಕು ಒಂದು ಸೂಕ್ಷ್ಮ ಬ್ಯಾಕ್ಟೀರಿಯಾ ಅಥವಾ ಶಿಲಿಂಧ್ರಗಳ ಉಗುರಿನ ಸೋಂಕಾಗಿದ್ದು ಇದು ಕೈ ಅಥವಾ ಪಾದಗಳಲ್ಲಿ ಉಂಟಾಗುತ್ತದೆ. ಕೈ ಬೆರೆಳು ಅಥವಾ ಕಾಲುಬೆರೆಳುಗಳ ಉಗುರಿನ ಅಡಿಯಲ್ಲಿ ಅಥವಾ ಪಕ್ಕದಲ್ಲಿ ಉಗುರು ಮತ್ತು ಚರ್ಮ ಸೇರಿಕೊಳ್ಳುವ ಜಾಗದಲ್ಲಿ ಇದು ಉಂಟಾಗುತ್ತದೆ. ಶಸ್ತ್ರಚಿಕಿತ್ಸೆಯ ಮೊದಲು: ಶಸ್ತ್ರಚಿಕಿತ್ಸೆಯನ್ನು ಮಾಡುವ ಮೊದಲು ಅನುಸರಿಸಬೇಕಾದ ಯಾವುದೇ ಮಾರ್ಗಸೂಚಿಗಳು ಇಲ್ಲ. ಶಸ್ತ್ರಚಿಕಿತ್ಸೆಯ…

Read More

ಸೆಬೇಶಿಯಸ್ ಸಿಸ್ಟ್ ಗಳು

ಅವಲೋಕನ: ಸೆಬೇಶಿಯಸ್ ಸಿಸ್ಟ್ ಎಂದರೆ ಚರ್ಮದ ಕೆಳಗಿನ ಸಣ್ಣ, ನೋವುರಹಿತ, ನಿಧಾನವಾಗಿ ಬೆಳೆಯುವ, ಕ್ಯಾನ್ಸರ್ ಅಲ್ಲದ ಗಂಟುಗಳಾಗಿವೆ. ಅವುಗಳು ದ್ರವ ಅಥವಾ ಅರೆದ್ರವ ರೀತಿಯ ಅಂಶವನ್ನು ಒಳಗೊಂಡಿದ್ದು ಹೆಚ್ಚು ಮುಖ, ಕುತ್ತಿಗೆ ಅಥವಾ ದೇಹದ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಶಸ್ತ್ರಚಿಕಿತ್ಸೆಯ ಮೊದಲು: ಶಸ್ತ್ರಚಿಕಿತ್ಸೆಯನ್ನು ಮಾಡುವ ಮೊದಲು ಅನುಸರಿಸಬೇಕಾದ ಯಾವುದೇ ಮಾರ್ಗಸೂಚಿಗಳು ಇಲ್ಲ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ: ಇದೊಂದು…

Read More

ಎಫ್ ಎನ್ ಎ ಸಿ ವಿಧಾನ

ಅವಲೋಕನ: ಎಫ್ ಎನ್ ಎ ಸಿ ಅಥವಾ ಫೈನ್ ನೀಡಲ್ ಆಸ್ಪಿರೇಷನ್ ಸೈಟಾಲಾಜಿ ಕಾರ್ಯವಿಧಾನದಲ್ಲಿ ಒಂದು ತೆಳು, ಪೊಳ್ಳಾದ ಸೂಜಿಯು ಯಾವುದೇ ಅಂಗಾಂಗ ಅಥವಾ ಗೆಡ್ಡೆಯಿಂದ ದ್ರವ ಅಥವಾ ಅಂಗಾಂಶದಿಂದ ಜೀವಕೋಶಗಳ ಮಾದರಿಯನ್ನು ತೆಗೆಯುತ್ತದೆ. ಇದನ್ನು ಸಾಮಾನ್ಯವಾಗಿ ಸ್ತನಗಳಲ್ಲಿನ ಗೆಡ್ಡೆ ಅಥವಾ ಥೈರಾಯಿಡ್ ಗ್ರಂಥಿ ರೀತಿಯ ಕುತ್ತಿಗೆಯಲ್ಲಿರುವ ಗ್ರಂಥಿಗಳಲ್ಲಿರುವ ಗೆಡ್ಡೆಯೊಳಗಿನ ಕೋಶಗಳ ವಿಧವನ್ನು ಗುರುತಿಸಲು ಮಾಡಲಾಗುತ್ತದೆ. ಇದು ಕ್ಯಾನ್ಸರ್ ರೋಗವನ್ನು…

Read More

ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟಮಿ

ದೇಹದಿಂದ ಅಪ್ಪೆಂಡಿಕ್ಸ್ ಅನ್ನು ತೆಗೆಯಲು ಮಾಡುವ ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸೆ ಇದಾಗಿದೆ. ಅಪ್ಪೆಂಡಿಕ್ಸ್ ದೊಡ್ಡ ಕರುಳಿನಲ್ಲಿರುವ ಒಂದು ಸಣ್ಣ ಚೀಲವಾಗಿದ್ದು ಇದು ದೇಹದಲ್ಲಿ ಯಾವುದೇ ಪ್ರಯೋಜನದ ಉದ್ದೇಶವನ್ನು ಹೊಂದಿಲ್ಲ ಎಂದು ಇದುವರೆಗಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಅದಾಗಿಯೂ, ಇದರಿಂದ ನೋವು ಉಂಟಾದಾಗ ಅಥವಾ ಇತರ ಸಮಸ್ಯೆಗಳಿಗೆ ಕಾರಣವಾದಾಗ ಮಾತ್ರ ಇದನ್ನು ತೆಗೆಯಲಾಗುತ್ತದೆ. ಅಪೆಂಡಿಕ್ಸ್ ಅನ್ನು ಒಂದು ಚಿಕ್ಕ ಇನ್ಸಿಶನ್…

Read More

.

Facilities & Services

ನಿಖರ ಸ್ಕ್ಯಾನ್ ಮತ್ತು ಇಮೇಜಿಂಗ್ ಸಹಾಯದಿಂದ ಮಣಿಪಾಲ್ ಆಸ್ಪತ್ರೆಯಲ್ಲಿರುವ ನಮ್ಮ ಶಸ್ತ್ರಚಿಕಿತ್ಸಕರು ಯಾವುದೇ ತುರ್ತು ಪ್ರಕ್ರಿಯೆಗಳು, ಅಪಘಾತ ಆರೈಕೆ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಮಾಡಲು ಸಿದ್ಧರಿರುತ್ತಾರೆ. ನಾವು ಒದಗಿಸುವ ಕೆಲವು ಶಸ್ತ್ರಚಿಕಿತ್ಸೆಯ ಸೇವೆಗಳೆಂದರೆ : 

 • ಅಪೆಂಡೆಕ್ಟಮಿ (ಅಪೆಂಡಿಕ್ಸ್ ಅನ್ನು ತೆಗೆಯುವುದು) 

 •  ಟ್ರಾಮಾ(ಅಪಘಾತ ಶಸ್ತ್ರಚಿಕಿತ್ಸೆ 

 • ಪರಿಧಮನಿಯ ನಾಟಿ ಬೈಪಾಸ್ ಶಸ್ತ್ರಚಿಕಿತ್ಸೆ 

 • ಬಯಾಪ್ಸಿಗಳು 

 • ಸಿಸೇರಿಯನ್ ಸೆಕ್ಷನ್ 

 • ಟಾನ್ಸಿಲೆಕ್ಟಮಿ (ಟಾನ್ಸಿಲ್ ತೆಗೆಯುವುದು) 

 • ಹಿಸ್ಟರೆಕ್ಟಮಿ (ಗರ್ಭಾಶಯ ತೆಗೆಯುವುದು)

 • ಚರ್ಮದ ಗ್ರಾಫ್ಟಿಂಗ್ 

 • ಕೆರೋಟಿಡ್ ಎಂಡಾರ್ಟೆರೆಕ್ಟಮಿ (ಅಪಧಮನಿಗಳಲ್ಲಿನ ಬ್ಲಾಕೇಜ್ ಗಳನ್ನು ತೆಗೆಯುವುದು) 

 • ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ 

 •  ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸೆ ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸೆ 

 • ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ 

 • ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟಮಿ

 • ಲ್ಯಾಪರೊಸ್ಕೋಪಿಕ್ ಹರ್ನಿಯಾ ದುರಸ್ತಿ 

 • ಲ್ಯಾಪರೊಸ್ಕೋಪಿಕ್ ಕೊಲೆಕ್ಟಮಿ ಮತ್ತು ಸ್ಪ್ಲೇನೆಕ್ಟಮಿ ಚಿಕಿತ್ಸೆ ಮತ್ತು ಕಾರ್ಯವಿಧಾನಗಳು

 

ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟಮಿ -ದೇಹದಿಂದ ಅಪ್ಪೆಂಡಿಕ್ಸ್ ಅನ್ನು ತೆಗೆಯಲು ಮಾಡುವ  ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸೆ ಇದಾಗಿದೆ. ಅಪ್ಪೆಂಡಿಕ್ಸ್ ದೊಡ್ಡ ಕರುಳಿನಲ್ಲಿರುವ ಒಂದು ಸಣ್ಣ ಚೀಲವಾಗಿದ್ದು ಇದು ದೇಹದಲ್ಲಿ ಯಾವುದೇ ಪ್ರಯೋಜನದ ಉದ್ದೇಶವನ್ನು ಹೊಂದಿಲ್ಲ ಎಂದು ಇದುವರೆಗಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಅದಾಗಿಯೂ, ಇದರಿಂದ ನೋವು ಉಂಟಾದಾಗ ಅಥವಾ ಇತರ ಸಮಸ್ಯೆಗಳಿಗೆ ಕಾರಣವಾದಾಗ ಮಾತ್ರ ಇದನ್ನು ತೆಗೆಯಲಾಗುತ್ತದೆ. ಅಪ್ಪೆಂಡಿಕ್ಸ್ ಅನ್ನು ಒಂದು ಚಿಕ್ಕ ಇನ್ಸಿಶನ್ ಮಾಡುವ ಮೂಲಕ ಲ್ಯಾಪರಾಸ್ಕೋಪ್ ನಿಂದ ಹೊರತೆಗೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯು ಬಹಳ ಸರಳ ಮತ್ತು ಸಾಮಾನ್ಯದ್ದಾಗಿದೆ ಮತ್ತು ಸಾಮಾನ್ಯವಾಗಿ ರೋಗಿಗಳು ಶಸ್ತ್ರಚಿಕಿತ್ಸೆಯಾದ ಒಂದು ದಿನದ ನಂತರ ಮನೆಗೆ ತೆರಳುತ್ತಾರೆ.   

ಇದನ್ನು ಏಕೆ ಮಾಡುತ್ತಾರೆ?  ಒಂದುವೇಳೆ ಅಪೆಂಡಿಕ್ಸ್ ಉರಿಯೂತವಾದರೆ, ಈ ಸ್ಥಿತಿಯನ್ನು ಅಪೆಂಡಿಸೈಟಿಸ್ ಎನ್ನುತ್ತಾರೆ. ಇದುತೀವ್ರ ನೋವನ್ನು ಉಂಟುಮಾಡುತ್ತಾದೆ ಮತ್ತು ಹೀಗೆ ಬಿಟ್ಟರೆ ಅಪೆಂಡಿಕ್ಸ್ ಒಡೆದು ಸೋಂಕನ್ನು ದೇಹದೊಳಗೆ ಬಿಡುಗಡೆಮಾಡುತ್ತದೆ. ಇದರ ಪರಿಣಾಮ ಗಂಭೀರ ಅಡ್ಡಪರಿಣಾಮಗಳು ಉಂಟಾಗುತ್ತದೆ. ಅಪೆಂಡಿಕ್ಸ್ ಯಾವುದೇ ಕಾರ್ಯವನ್ನು ಮಾಡದಿರುವುದರಿಂದ ಇದಕ್ಕೆ ಚಿಕಿತ್ಸೆ ನೀಡುವ ಬದಲಾಗಿ ಇದನ್ನು ತೆಗೆಯುವುದು ಬಹಳ ಸರಳ ಮತ್ತು ಪರಿಣಾಮಕಾರಿಯಾಗಿದೆ. 

FAQ's

Typically, you would approach a general surgeon with a diagnosis in hand. The surgeon examines the details of the case and makes a surgical plan based on scans and imaging. Then a date is set for surgery and any preparation or pre-surgical conditions that need to be met, are explained to the patient.

All surgical procedures carry an inherent amount of risk with them. Some surgical procedures are safer than others, and modern operating rooms are well equipped to deal with even extreme complications. The surgical risk, however, is amplified by certain medical conditions. Visit the general surgery hospital in Old Airport Road, Bangalore to avoid these risk factors.

Depending on the type of surgery, and the nature of the underlying condition that made the surgery necessary, a surgeon will prescribe a period of time where the patient must be under observation. Minimally invasive surgeries heal quite quickly and do not cause much discomfort, larger incisions, however, can take much longer to heal. Consult with our experts and get general surgery treatment in Old Airport Bangalore.

Surgical procedures are generally not recommended by doctors when there is a safer alternative available. However, sometimes surgery is necessary because it is the most effective treatment available.

ಮಣಿಪಾಲ್ ಆಸ್ಪತ್ರೆಗಳು ತನ್ನ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ವೈಯಕ್ತಿಕಗೊಳಿಸಿದ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡುತ್ತದೆ. ನಮ್ಮ ರೋಗಿಗಳೊಂದಿಗೆ ನಾವು ಹೊಂದಿರುವ ದೀರ್ಘ ಸಮಯದ ಸಂಬಂಧಗಳು ಮತ್ತು ಜನರಲ್ ಸರ್ಜರಿ ವಿಭಾಗವು ಉತ್ತಮಗೊಳಿಸಿದ ಜೀವನವು ಇದಕ್ಕೆ ಸಾಕ್ಷಿಯಾಗಿದೆ.

ಜನರಲ್ ಸರ್ಜರಿ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಮತ್ತು ಇಂದೇ ನಮ್ಮ ತಜ್ಞರಲ್ಲಿ ಒಬ್ಬರೊಂದಿಗೆ ನಿಮ್ಮ ಭೇಟಿ ಸಮಯವನ್ನು ಬುಕ್ ಮಾಡಲು ನಮ್ಮನ್ನು ಸಂಪರ್ಕಿಸಿ:

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ