ಜನರಲ್ ಮೆಡಿಸಿನ್


ಮಣಿಪಾಲ್ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗವು ಸುಧಾರಿತ ವೈದ್ಯಕೀಯ ವೃತ್ತಿಪರರನ್ನು ಒಳಗೊಂಡಿದ್ದು, ಇವರು ತನ್ನ ರೋಗಿಗಳ ಸಾಮಾನ್ಯ ಆರೋಗ್ಯ ಆರೈಕೆಯ ಎಲ್ಲ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಣೆ ಮಾಡಲು ಬದ್ಧವಾಗಿದೆ.ರೋಗಿಗಳು ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸಲು ಅವರಿಗೆ ಸಹಾಯ ಮಾಡಲು ರೋಗ ತಡೆಗಟ್ಟುವಿಕೆ ಕಾರ್ಯತಂತ್ರಗಳು ಮತ್ತು ತಡೆಗಟ್ಟುವ ಆರೈಕೆಯನ್ನು ಒದಗಿಸಲಾಗುತ್ತದೆ

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯು ಸಂಶೋಧನೆ ಮತ್ತು ವೈದ್ಯಕೀಯ ಪ್ರಗತಿಗಳಿಂದ ಅಭಿವೃದ್ಧಿ ಹೊಂದಿರುವ ವೈದ್ಯಕೀಯ ಪರಿಸರದಲ್ಲಿ ಆರೈಕೆಯನ್ನು ಒದಗಿಸುತ್ತದೆ. ಜನರಲ್ ಮೆಡಿಸಿನ್ ವಿಭಾಗದ ವೈದ್ಯರು ಸಮಗ್ರ ಮತ್ತು ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸುತ್ತಾರೆ. ರೋಗಿಯ ವೈದ್ಯಕೀಯ ಅಗತ್ಯಗಳ ಸಮಗ್ರ ನಿರ್ವಹಣೆ ಮತ್ತು ತಡೆಗಟ್ಟುವಿಕೆ ಔಷಧಿಯು ಮಣಿಪಾಲ್ ನ ಜನರಲ್ ಮೆಡಿಸಿನ್ ವಿಭಾಗವನ್ನು ದೇಶದಲ್ಲಿಯೇ ಅತ್ಯುತ್ತಮ ವಿಭಾಗಗಳಲ್ಲಿ ಒಂದಾಗಿಸಿದೆ. ಮಣಿಪಾಲ್ ನಲ್ಲಿರುವ ವೈದ್ಯರು ಒಟ್ಟಾರೆ ಆರೋಗ್ಯಾರೈಕೆ ಒದಗಿಸುತ್ತಾರೆ ಮತ್ತು ತೂಕ ಅಥವಾ ಆಹಾರ ನಿರ್ವಹಣೆ ರೀತಿಯ ನಿರ್ದಿಷ್ಟ  ಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಮರ್ಥರಿದ್ದಾರೆ. 

ಮಣಿಪಾಲ್ ನ ಜನರಲ್ ಮೆಡಿಸಿನ್ ವಿಭಾಗದಲ್ಲಿ ಎಲ್ಲ ತುರ್ತು ರೋಗಿಗಳನ್ನು ಕ್ಯಾಶುಯಾಲಿಟಿ ನಲ್ಲಿ ನೋಡಿಕೊಳ್ಳಲಾಗುತ್ತದೆ ಮತ್ತು ಪ್ರಮಾಣಿತ ಪ್ರೋಟೋಕಾಲ್ ಅನುಗುಣವಾಗಿ ರೋಗಿಗಳ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ನಮ್ಮ ವೈದ್ಯಕೀಯ ಪರಿಣಿತರ ತಂಡವು  ಅಧಿಕರಕ್ತದೊತ್ತಡ, ಮಲೇರಿಯಾ, ಪಾರ್ಶ್ವವಾಯು, ಹೃದ್ರೋಗ ಕಾಯಿಲೆ, ಮಧುಮೇಹ ಮತ್ತು ಇತ್ಯಾದಿ ರೀತಿಯ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ಅಲ್ಲದ ಕಾಯಿಲೆಗಳ ವಿಸ್ತಾರ ಶ್ರೇಣಿಯ ವೈದ್ಯಕೀಯ ಸಮಸ್ಯೆಗಳನ್ನು ಸೀಮಿತವಿಲ್ಲದ ನಿರ್ವಹಣೆ ಮಾಡಲು ನಮಗೆ ಸಹಕರಿಸುತ್ತಾರೆ.   

  • ಕಾರ್ಡಿಯೋಲಾಜಿ - ಅಕ್ಯೂಟ್ ಕೊರೋನರಿ ಸಿಂಡ್ರೋಮ್, ಹೃದಯಾಘಾತ, ಸಿಸಿಎಫ್ ಮತ್ತು ಅಕ್ಯೂಟ್ ಲೆಫ್ಟ್ ವೆಂಟ್ರಿಕುಲರ್ ವೈಫಲ್ಯ , ಕೊರೋನರಿ ಆಂಜಿಯೋಗ್ರಫಿ, ಎಕೋಕಾರ್ಡಿಯೋಗ್ರಫಿ , ಟ್ರೆಡ್ ಮಿಲ್ ಮತ್ತು ಮರುರಕ್ತಚಲನ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ವಿಶೇಷ ಕ್ಲಿನಿಕ್ ಗಳು ಎಲ್ಲ ಸೌಲಭ್ಯಗಳೊಂದಿಗೆ ವಾರವಿಡೀ ಲಭ್ಯವಿರುತ್ತದೆ. ಈ ಹೊಲ್ಟಾರ್ ಮಾನಿಟರಿಂಗ್, ಇಪಿಎಸ್ ಅಧ್ಯಯನಗಳು, ಪೇಸ್ ಮೇಕರ್ ಇಂಪ್ಲಾಂಟೇಷನ್ ಗಳೂ ಲಭ್ಯವಿದೆ ಜೊತೆಗೆ ಕ್ಯಾಥ್ ಲ್ಯಾಬ್ ಸೌಲಭ್ಯಗಳೂ ಸಹ ಲಭ್ಯವಿದೆ. 

  • ಎಂಡೋಕ್ರೈನೊಲಾಜಿ - ಮಣಿಪಾಲ್ ಆಸ್ಪತ್ರೆಯಲ್ಲಿ ಎಲ್ಲ ವಿಧದ ವೈದ್ಯಕೀಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳ ಎಂಡೋಕ್ರೈನೊಲಾಜಿಗಾಗಿ ಮಕ್ಕಳ ಹೊರರೋಗಿ ವಿಭಾಗವೂ ಸಹ ಲಭ್ಯವಿದೆ. 

  • ನೆಫ್ರೋಲಾಜಿ - ನೆಫ್ರೋಲಾಜಿ ಒಪಿಡಿ ವಾರವಿಡೀ ಲಭ್ಯವಿದೆ ಮತ್ತು ಮಣಿಪಾಲ್ ಹೊಂದಿರುವ ಸೌಲಭ್ಯಗಳಲ್ಲಿ ಪೆರಿಟೋನಿಯಲ್ ಹಿಮೋಡಯಾಲಿಸಿಸ್, ನಿರಂತರ ಅಂಬುಲೆಟರಿ ಪೆರಿಟೋನಿಯಲ್ ಡಯಾಲಿಸಿಸ್ ಮರ್ರು ಕಿಡ್ನಿ ಕಸಿ ಇವೆ ಮತ್ತು ಇವುಗಳನ್ನು ಯೂರೋಲಾಜಿ ವಿಭಾಗದ ಸಹಭಾಗಿತ್ವದಲ್ಲಿ ನಡೆಸಲಾಗುತ್ತದೆ. 

  •   ಆಂಕೊಲಾಜಿ ಮತ್ತು ಇಮ್ಯುನೊಲಾಜಿ - ಮಣಿಪಾಲ್ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಂಕೊಲಾಜಿ ಮತ್ತು ಇಮ್ಯುನೊಲಾಜಿ ಸೌಲಭ್ಯಗಳು ತರಬೇತಿ ಪಡೆದ, ವಿಶೇಷ ವೈದ್ಯಕೀಯ ಆಂಕೊಲಾಜಿಸ್ಟ್‌ಗಳು ಮತ್ತು ಇಮ್ಯುನೊಲೊಜಿಸ್ಟ್‌ಗಳು ಒದಗಿಸುವ ಚಿಕಿತ್ಸಾ ಪ್ರೋಟೋಕಾಲ್‌ನಲ್ಲಿ ಸಲಹೆಯೊಂದಿಗೆ ಲಭ್ಯವಿದೆ.

  • ಹೆಮಟಾಲಜಿ - ಮೂಳೆ ಮಜ್ಜೆಯ ಸಂಶೋಧನಾ ಅಧ್ಯಯನ ಸೌಲಭ್ಯಗಳು ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯವಿದೆ ಮತ್ತು ಸೈಟೊಜೆನೆಟಿಕ್ ಅಧ್ಯಯನಗಳು ಮತ್ತು ಇಮ್ಯುನೊಸೈಟೊಕೆಮಿಸ್ಟ್ರಿಯಂತಹ ಪರೀಕ್ಷೆಗಳನ್ನು ಮಣಿಪಾಲದಲ್ಲಿ ಅಪ್ಲ್ಯಾಸ್ಟಿಕ್ ಅನೀಮಿಯಾ ಮತ್ತು MDS ನಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಮಾಡಲಾಗುತ್ತದೆ.

  • ಗ್ಯಾಸ್ಟ್ರೋಎಂಟರೋಲಾಜಿ - ಜನರಲ್ ಮೆಡಿಸಿನ್ ವಿಭಾಗದಲ್ಲಿ ಯಕೃತ್ತು ಬಯಾಪ್ಸಿ ಸೌಲಭ್ಯಗಳು ಇರುತ್ತವೆ ಮತ್ತು ಕೊಲೊನೋಸ್ಕೋಪಿ ಮತ್ತು ಇಂಡಿಸ್ಕೋಪಿ ರೀತಿಯ ಶಸ್ತ್ರಚಿಕಿತ್ಸೆ ವಿಧಾನಗಳನ್ನು ಸಹ ಮಾಡಲಾಗುತ್ತದೆ. 

  • ನ್ಯೂರೋಲಾಜಿ - ಇಎಂಜಿ, ಇಇಜಿ, ಸಿಟಿ ಸ್ಕ್ಯಾನ್, ಎನ್ಸಿಎಸ್, ಡಿಎಸ್ಎ, ಎಂಆರ್ಐ ಮತ್ತು ಎಂಆರ್ಐ ಆಂಜಿಯೋಗ್ರಾಮ್ ರೀತಿಯ ಸೌಲಭ್ಯಗಳೊಂದಿಗೆ ಮಣಿಪಾಲ ಸ್ಫತ್ರೆಯಲ್ಲಿ ನ್ಯೂರೋಲಾಜಿ ಒಪಿಡಿ  ಸಹ ಲಭ್ಯವಿದೆ. 

  • ಶ್ವಾಸಕೋಶ - ಮಣಿಪಾಲ್ ಆಸ್ಪತ್ರೆಯ ಒಂದು ಪ್ರತ್ಯೇಕ ವಿಭಾಗವನ್ನು ಶ್ವಾಸಕೋಶದ ಸಮಸ್ಯೆಗಳನ್ನು ನಿರ್ವಹಿಸುವ ನುರಿತ ತಜ್ಞರಿಗಾಗಿ  ಪಲ್ಮನರಿ ಮೆಡಿಸಿನ್ ಗಾಗಿ ಮೀಸಲಿಡಲಾಗಿದೆ. 

  • ಆರ್ಥೋಪೆಡಿಕ್ಸ್(ಮೂಳೆ ಶಾಸ್ತ್ರ ವಿಭಾಗ) - ಬಹುಶಿಸ್ತಿನ ಮಸ್ಕುಲೋಸ್ಕೆಲಿಟಲ್ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ. 

  • ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ - ಮಹಿಳೆಯರಿಗೆ ವಿಶೇಷವಾದ ಆರೈಕೆಯನ್ನು ಅವರ ಜೀವನಚಕ್ರದ ವಿವಿಧ ಹಂತಗಳ ಮೂಲಕ ಪರಿಣಿತ ವೈದ್ಯರು ಒದಗಿಸುತ್ತಾರೆ.

Facilities & Services

ಮಣಿಪಾಲ್ ಆಸ್ಪತ್ರೆಯು ವೈಯಕ್ತಿಕಗೊಳಿಸಿದ, ದುಬಾರಿ ಅಲ್ಲದ ಮತ್ತು  ಅನುಕೂಲ ಕರ ತಪಾಸಣೆ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ, ಅವುಗಳೆಂದರೆ -

ಎಕ್ಸೆಕ್ಯುಟಿವ್ ಆರೋಗ್ಯ ತಪಾಸಣೆ - ಅಡ್ವಾನ್ಸ್ ಆರೋಗ್ಯ ತಪಾಸಣೆ - ಮಕ್ಕಳಾ ಅರೋಗ್ಯ ತಪಾಸಣೆ - ಮಹಿಳೆಯರ ಆರೋಗ್ಯ ತಪಾಸಣೆ - ಪಾರ್ಶ್ವವಾಯು ಮತ್ತು ಕ್ಯಾನ್ಸರ್ ತಪಾಸಣೆ - ವೃದ್ಧರ ಲಸಿಕೆ ಕಾರ್ಯಕ್ರಮಗಳು. 

 

ಸಾಮಾನ್ಯವಾಗಿ ಚಿಕಿತ್ಸೆ ನೀಡಲಾದ ಸಮಸ್ಯೆಗಳು

ಆಸ್ಪತ್ರೆಯ ಗಾನರಲ್ ಮೆಡಿಸಿನ್ ವಿಭಾಗವು ಗಂಟಲು ನೋವು, ಸಿಸ್ಟೈಟಿಸ್, ತ್ರಸ್ಟ್, ನೆಗಡಿ, ಬ್ಯಾಕ್ಟೀರಿಯಾ ಸೋಂಕುಗಳು, ಎದೆ ಸೋಂಕುಗಳು ಇತ್ಯಾದಿ ರೀತಿಯ ಸಮಸ್ಯೆಗಳನು ದೈನಂದಿನವಾಗಿ ನಿರ್ವಹಿಸುತ್ತದೆ. 

ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಅಥವಾ ಆಸ್ತಮಾದಂತಹ ಕಾಯಿಲೆಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕೆರಳಿಸುವ ಕರುಳಿನ ಸಹಲಕ್ಷಣಗಳು, ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ಜೀರ್ಣಕಾರಿ ಅಸ್ವಸ್ಥತೆಗಳನ್ನು ಸಹ ಆವರ್ತಕ ಆಧಾರದ ಮೇಲೆ ನಿರ್ವಹಿಸಲಾಗುತ್ತದೆ. ಎರಡನೆಯ ವಿಧದ ಮಧುಮೇಹ, ಎಂಡೋಕ್ರೈನ್ ಡಿಸಾರ್ಡರ್‌ಗಳಾದ ಕಡಿಮೆ ನಿರ್ವಹಿಸುವ ಥೈರಾಯ್ಡ್ ಗ್ರಂಥಿ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಮೈಗ್ರೇನ್‌ನಂತಹ ದೀರ್ಘಕಾಲದ ತಲೆನೋವು ಸಮಸ್ಯೆಗಳನ್ನು ಮಣಿಪಾಲ್ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸಾಮಾನ್ಯವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮಣಿಪಾಲ್ ಆಸ್ಪತ್ರೆಗಳಲ್ಲಿ, ನಾವು ಜೀವನಶೈಲಿ ಸಮಾಲೋಚನೆಯೊಂದಿಗೆ ತಡೆಗಟ್ಟುವ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ, ಏಕೆಂದರೆ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಎಂದು ನಾವು  ನಂಬಿದ್ದೇವೆ. ಪ್ರತಿ ವ್ಯಕ್ತಿ ಅಥವಾ ಕುಟುಂಬಕ್ಕಾಗಿ  ವೈಯಕ್ತೀಕರಿಸಿದ ಆರೋಗ್ಯ ತಪಾಸಣೆ ಯೋಜನೆಯೊಂದಿಗೆ ವಾರದಲ್ಲಿ ಏಳು ದಿನಗಳು ಆರೋಗ್ಯ ತಪಾಸಣೆಗಳು ಲಭ್ಯವಿರುತ್ತವೆ.

FAQ's

Based on your condition, the general practitioner will perform a thorough diagnosis and then recommend further treatment and tests or refer you to a specialist in another division so that they may coordinate on treating your condition. Each patient undergoes a thorough analysis before any further treatments or procedures are to be administered.

Major and minor surgeries involving different pain levels are almost always performed under anesthetics at extremely safe levels. In the case of advanced procedures, the patient is sedated to completely eradicate pain. anesthetics used at Manipal are administered carefully by experts and have been proven safe for surgeries. Consult with our experts at General Medicine hospital in Old Airport Road, Bangalore.

Seasonal changes, poor air quality, genetic predispositions & age pose as factors for a different range of general health conditions. To avoid these risk factors, visit our best general medicine hospital in Bangalore.

A number of things can be going wrong with the body even without any outward symptoms. It is best to have periodic health check-ups no matter your age, occupation or lifestyle.

Most health conditions are preventable as long as they are not genetic. Avoiding and preventing health problems requires knowledge and care. Manipal Hospital hosts a range of preventive health programs to aid patients and guests in improving their knowledge of preventive measures.

ಇನ್ನಷ್ಟು ಮಾಹಿತಿಯನ್ನು ಪಡೆಯಲು ಮತ್ತು ಇಂದೇ ನಿಮ್ಮ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Blogs

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ