ಫೀಟಲ್ ಮೆಡಿಸಿನ್


ಮಣಿಪಾಲ್ ಆಸ್ಪತ್ರೆಯಲ್ಲಿರುವ ಫೀಟಲ್ ಮೆಡಿಸಿನ್ ವಿಭಾಗವು ದೇಶದಲ್ಲಿಯೇ ಅತಿದೊಡ್ಡ ಮತ್ತು ಅತ್ಯಂತ ಪರಿಣಾಮಕಾರಿ ಪ್ರಸವ ಪೂರ್ವದ ಆರೈಕೆಯನ್ನು ಒದಗಿಸುತ್ತದೆ ಮತ್ತು ಇದು ಗರ್ಭಿಣಿ ಮಹಿಳೆಯರ ಗರ್ಭವಾಸ್ಥೆಯ ಎಲ್ಲ ಹಂತಗಳಲ್ಲಿ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ಮೆಟರ್ನಲ್-ಫೀಟಲ್ ಮೆಡಿಸಿನ್ ತಜ್ಞರ ತಂಡದಲ್ಲಿ ಸ್ತ್ರೀರೋಗ ತಜ್ಞರು, ಪ್ರಸೂತಿ ತಜ್ಞರು, ನವಜಾತಶಿಶು ತಜ್ಞರು, ಪೆರಿನೆಟೊಲಾಜಿಸ್ಟ್, ಮಕ್ಕಳ ತಜ್ಞರು ಮತ್ತು ಅಲ್ಟ್ರಾಸೊನೋಲಾಜಿಸ್ಟ್ ಗಳು ಒಳಗೊಂಡಿದ್ದು, ಇವರು ತಮ್ಮ ಕ್ಷೇತ್ರಗಳಲ್ಲಿ ಅಪಾರ ಪರಿಣಿತಿಯನ್ನು ಹೊಂದಿದ್ದಾರೆ. ತಂಡವು ಅತ್ಯಾಧುನಿಕ ಉಪಕರಣಗಳು ಮತ್ತು ಪ್ರಯೋಗಾಲಯಗಳನ್ನು ಹೊಂದಿದ್ದು ಗರ್ಭಿಣಿ ಮಹಿಳೆಯರ ಎಲ್ಲ ಹಂತಗಳಲ್ಲಿ ನಿಗಾವಣೆ, ರೋಗನಿರ್ಣಯ ಮತ್ತು ಚಿಕಿತ್ಸೆ ನೀಡಲು ಸುಸಜ್ಜಿತವಾಗಿದೆ.

Treatment & Procedures

ಚುಚ್ಚು ರಹಿತ ಪರೀಕ್ಷೆ

ಒಂದು ಪರಿಣಾಮಕಾರಿಯಾದ ಪ್ರಸವಪೂರ್ವ ಆರೈಕೆ ಯೋಜನೆಗಾಗಿ ಸ್ಕ್ಯಾನ್ ಮತ್ತು ರೋಗನಿರ್ಣಯ ಪರೀಕ್ಷೆಗಳು ಬಹಳ ಮುಖ್ಯವಾಗಿದೆ. ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿಧಾನಗಳೆಂದರೆ ಇನ್ವೇಸಿವ್ ರಹಿತ ಪರೀಕ್ಷೆಗಳಾದ ಅಲ್ಟ್ರಾಸೌಂಡ್ ಸ್ಕ್ಯಾನ್ ಗಳು. ಒಂದು ನಿಯಮಿತ ಪ್ರಸವ ಪೂರ್ವ ಆರೈಕೆ ಯೋಜನೆಯಲ್ಲಿ ಸಾಮಾನ್ಯವಾಗಿ ಭ್ರೂಣದ ಬದುಕುಳಿಯುವ ಸಾಧ್ಯತೆ ಸ್ಕ್ಯಾನ್(ವಯಬಿಲಿಟಿ ಸ್ಕ್ಯಾನ್) ಅನ್ನು ಗರ್ಭವಾಸ್ಥೆಯ ಮೊದಲ 6-10 ವಾರಗಳ ನಡುವೆ ಮಾಡಲಾಗುತ್ತದೆ…

Read More

ಫಾಲಿಕುಲರ್ ಇಮೇಜಿಂಗ್ ಇನ್ ಅಸಿಸ್ಟೆಡ್…

ಮಗುವಿಗಾಗಿ ಹಂಬಲಿಸುತ್ತಿರುವ ಲಕ್ಷಾಂತರ ದಂಪತಿಗಳಲ್ಲಿ ಭರವಸೆಯ ಆಶಾಕಿರಣವನ್ನು ನೀಡುವ ಸಹಾಯಕ ಸಂತಾನೋತ್ಪತ್ತಿಯ ಅಗ್ರಗಣ್ಯ ಪರೀಕ್ಷೆಗಳಲ್ಲಿ ಇದು ಒಂದಾಗಿದೆ. ಮೊಟ್ಟೆಯ ಅಂಡೋತ್ಪತ್ತಿಯನ್ನು ಗುರುತಿಸಲು ಬಳಸುವ ಅಂಡಾಶಯದ ಕೋಶಕಗಳನ್ನು ಅಧ್ಯಯನ ಮಾಡಲು ಫಾಲಿಕ್ಯುಲರ್ ಅಧ್ಯಯನ ಮತ್ತು ಮೇಲ್ವಿಚಾರಣೆಯನ್ನು ಮಾಡಲಾಗುತ್ತದೆ. ಇದೊಂದು ಅಲ್ಟ್ರಾಸೌಂಡ್ ಸ್ಕ್ಯಾನ್ ಆಗಿದ್ದು ಇದರಲ್ಲಿ ಯೋನಿಯ ಮೂಲಕ ಅಂಡಾಶಯಗಳು, ಗರ್ಭಾಶಯ ಮತ್ತು ಗರ್ಭಾಶಯದ ಒಳಪದರವನ್ನು…

Read More

ಪ್ರಸೂತಿ ಸ್ಕ್ಯಾನ್ ಗಳು

ಪ್ರಸೂತಿ ಸ್ಕ್ಯಾನ್ ಗಳು - ಭ್ರೂಣದ ಬದುಕುವ ಸಾಧ್ಯತೆ, ಅಸಹಜತೆ, ಮತ್ತು ಬೆಳವಣಿಗೆ ಸ್ಕ್ಯಾನ್ ಗಳು ಮಣಿಪಾಲ್ ಆಸ್ಪತ್ರೆಯು ಯಾವುದೇ ರೀತಿಯ ದೋಷವುಂಟಾಗದಂತೆ ಕಾರ್ಯನಿರ್ವಹಿಸುವ ಅದ್ಭುತ ತಂತ್ರಜ್ಞಾನ ತಂಡವನ್ನು ಒಳಗೊಂಡಿದ್ದು ಇವರಿಗಾಗಿ ಅತ್ಯಾಧುನಿಕ ಸ್ಕ್ರೀನಿಂಗ್ ಸಾಧನಗಳನ್ನು ಒದಗಿಸಲಾಗಿದೆ. ಅವರ ರೋಗನಿರ್ಣಯದ ನಿಖರತೆಯು ನಿಜವಾಗಿಯೂ ಶ್ಲಾಘನೀಯವಾಗಿದ್ದು ಇದು ನಮ್ಮ ಸ್ತ್ರೀರೋಗ ತಜ್ಞರಿಗೆ ತಮ್ಮ ಚಿಕಿತ್ಸೆಯ ಯೋಜನೆಯನ್ನು ರೂಪಿಸುವಲ್ಲಿ…

Read More

ಡಾಪ್ಲರ್ ಅಧ್ಯಯನಗಳು

ಡಾಪ್ಲರ್ ಅಧ್ಯಯನಗಳು ನಿಖರ ಫಲಿತಾಂಶಗಳನ್ನು ಪಡೆಯಲು ಮಣಿಪಾಲ್ ಆಸ್ಪತ್ರೆಯ ಪ್ರಯೋಗಾಲಯವು ಅತ್ಯಾಧುನಿಕ ಸ್ಕ್ಯಾನಿಂಗ್ ಉಪಕರಣಗಳನ್ನು ಒಳಗೊಂಡಿದೆ. ಅತ್ಯಂತ ನಿಖರ ಡಾಪ್ಲರ್ ಅಲ್ಟ್ರಾಸೌಂಡ್ ರಕ್ತನಾಳಗಳಲ್ಲಿನ ರಕ್ತದ ಸಂಚಾರವನ್ನು ಪತ್ತೆಮಾಡಲು ಶಬ್ದ ತರಂಗಗಳನ್ನು ಬಳಸುತ್ತದೆ. ಹೀಗೆ ಇದು ಗರ್ಭಿಣಿಯರ ಮಗು, ಗರ್ಭಶಾಯ ಮತ್ತು ಜರಾಯುವಿನಲ್ಲಿರುವ ರಕ್ತ ಪರಿಚಲನೆಯನ್ನು ಅಧ್ಯಯನ ಮಾಡಲು ಬಳಸಲಾಗುತ್ತದೆ. ಮಗುವಿಗೆ ಹೆಚ್ಚಿನ ಅಪಾಯವಿರುವ ಪರಿಸ್ಥಿತಿಗಳಲ್ಲಿ…

Read More

ಫೀಟಲ್ ಎಕೋ ಅಧ್ಯಯನಗಳು

ಫೀಟಲ್ ಎಕೋಕಾರ್ಡಿಯೋಲಾಜಿ ಅಲ್ಟ್ರಾಸೌಂಡ್ ರೀತಿಯದ್ದೇ ಆಗಿದೆ. ಕೇವಲ ಈ ಮಷೀನ್ ಮಾತ್ರ ಭ್ರೂಣದ ಹೃದಯದ ಶಬ್ದವನ್ನು ಪ್ರತಿಧ್ವನಿ ಮಾಡಲು ಶಬ್ದ ತರಂಗಗಳನ್ನು ಬಳಸುತ್ತದೆ. ಈ ಪರೀಕ್ಷೆಯಿಂದ ನಿಮ್ಮ ಜನಿಸದ ಮಗುವಿನ ಹೃದಯದ ರಚನೆ ಮತ್ತು ಕಾರ್ಯಾಚರಣೆಯನ್ನು ಸ್ಪಷ್ಟವಾಗಿ ನೋಡುವ ಮೂಲಕ ಯಾವುದೇ ಸಮಸ್ಯೆಗಳಿದ್ದಲ್ಲಿ ವೈದ್ಯರು ತಿಳಿದುಕೊಳ್ಳಲು ಸಹಾಯಮಾಡುತ್ತದೆ. ಇದನ್ನು ಸಾಮಾನ್ಯವಾಗಿ 2 ನೆಯ ತ್ರೈಮಾಸಿಕದಲ್ಲಿ 18-24 ವಾರಗಳ ನಡುವೆ ಮಾಡಲಾಗುತ್ತದೆ.…

Read More

ಸ್ತ್ರೀರೋಗಗಳ ಸ್ಕ್ಯಾನ್ ಗಳು

ವಿಸ್ತಾರ ಶ್ರೇಣಿಯ ಸ್ತ್ರೀರೋಗ ಸ್ಕ್ಯಾನ್ ಗಳಲ್ಲಿ ಪೆಲ್ವಿಕ್ ಅಲ್ಟ್ರಾಸೌಂಡ್ ಒಂದು ಚುಚ್ಚುರಹಿತ ರೋಗನಿರ್ಣಯಕ ಪರೀಕ್ಷೆಯಾಗಿದ್ದು ಇದು ಮಹಿಳೆಯರ ಸೊಂಟದಲ್ಲಿರುವ ಎಲ್ಲಾ ಅಂಗಾಂಗಗಳು ಮತ್ತು ರಚನೆಗಳ ಮೌಲ್ಯಮಾಪನ ಮಾಡುವುದಕ್ಕಾಗಿ ಚಿತ್ರಗಳನ್ನು ಪಡೆದುಕೊಳ್ಳುತ್ತದೆ. ಪೆಲ್ವಿಕ್ ಅಲ್ಟ್ರಾಸೌಂಡ್ ಗರ್ಭಶಾಯ, ಗರ್ಭಕಂಠ, ಯೋನಿ, ಫಾಲೋಪಿಯನ್ ಟ್ಯೂಬುಗಳು ಮತ್ತು ಅಂಡಾಶಯಗಳೂ ಸೇರಿದಂತೆ ಮಹಿಳೆಯ ಸೊಂಟದ ಅಂಗಾಂಗಗಳು ಮತ್ತು ರಚನೆಗಳ ಶೀಘ್ರ ಗೋಚರತೆಗೆ…

Read More

ಸಿಸ್ಟ್ ಆಸ್ಪಿರೇಷನ್

ಸಿಸ್ಟ್ ಆಸ್ಪಿರೇಷನ್ ಒಂದು ರೀತಿಯ ಪ್ರಕ್ರಿಯೆಯಾಗಿದ್ದು ಇದರಲ್ಲಿ ಸ್ತನದ ಸಿಸ್ಟ್ ನೊಳಗಿನ ದ್ರವವನ್ನು ಹೊರತೆಗೆಯಲಾಗುತ್ತದೆ. ಹೆಚ್ಚಿನ ಸಿಸ್ಟ್ ಗಳು ಬಿನೈನ್ ಅಂದರೆ ಕ್ಯಾನ್ಸರ್ ಕಾರಕವಾಗಿರುವುದಿಲ್ಲ, ಆದರೂ ಕೆಲವು ತೀವ್ರ ನೋವನ್ನುಂಟುಮಾಡಬಹುದು. ಸಿಸ್ಟ್ ನಲ್ಲಿರುವ ದ್ರವವನ್ನು ಎಳೆದುಕೊಳ್ಳುತ್ತಿದ್ದಂತೆ ಎಲ್ಲ ನೋವು ಅಥವಾ ಸಮಸ್ಯೆ ಇಲ್ಲದಂತಾಗುತ್ತದೆ. ಕೆಲವು ಪ್ರಕರಣಗಳಲ್ಲಿ ನಿಮ್ಮ ಸ್ತ್ರೀರೋಗರಿಗೆ ಇದು ಕ್ಯಾನ್ಸರ್ ಅಥವಾ ರೀತಿಯ…

Read More

ಆಮ್ನಿಯೋಸೆಂಟೆಸಿಸ್

ಆಮ್ನಿಯೋಸೆಂಟೆಸಿಸ್ ಒಂದು ಪ್ರಸವ ಪೂರ್ವ ಪರೀಕ್ಷೆಯಾಗಿದ್ದು ಇದರಲ್ಲಿ ಭ್ರೂಣದ ಸುತ್ತಲಿನ ಚೀಲದದಲ್ಲಿನ ಆಮ್ನಿಯೋಟಿಕ್ ದ್ರವದ ಸಣ್ಣ ಪ್ರಮಾಣವನ್ನು ಪರಿಕ್ಷೆಗಾಗಿಯೆಂದು ಹೊರಗೆ ತೆಗೆದುಕೊಳ್ಳಲಾಗುತ್ತದೆ. ಈ ಆಮ್ನಿಯೋಟಿಕ್ ದ್ರವ ಮಾದರಿಯನ್ನು(ಒಂದು ಔನ್ಸ್ ಕ್ಕಿಂತಲೂ ಕಡಿಮೆ) ತೆಗೆದುಕೊಳ್ಳಲು ಅಲ್ಟ್ರಾಸೌಂಡ್ ಸಹಾಯದಿಂದ ಕಿಬ್ಬೊಟ್ಟೆಯ ಮೂಲಕ ಗರ್ಭಾಶಯದೊಳಗೆ ಒಂದು ಸಣ್ಣ ಸೂಜಿಯನ್ನು ಚುಚ್ಚಿ ತೆಗೆದುಕೊಳಲಾಗುತ್ತದೆ. ಮಣಿಪಾಲ್ ಆಸ್ಪತ್ರೆಗಳ…

Read More

ಫೀಟಲ್ ಬ್ಲಡ್ ಸ್ಯಾಂಪ್ಲಿಂಗ್

ಭ್ರೂಣದ ರಕ್ತಕ್ಕೆ ಪ್ರವೇಶ ಸಿಗಲು ಬಳಸಲಾಗುವ ೩ ವಿಧಾನಗಳನ್ನು ಫೀಟಲ್ ಬ್ಲಡ್ ಸ್ಯಾಂಪ್ಲಿಂಗ್ (FBS) ಎನ್ನಲಾಗುತ್ತದೆ, ಆ ಮೂರು ವಿಧಾನಗಳೆಂದರೆ:- 1. ಕಾರ್ಡೊಸೆಂಟೆಸಿಸ್ - ಇದನ್ನು ಪರ್ಕ್ಯೂಟನಿಯಸ್ ಅಂಬಿಲಿಕಲ್ ಬ್ಲಡ್ ಸ್ಯಾಂಪ್ಲಿಂಗ್ ಎನ್ನುತ್ತಾರೆ. 2. ಇಂಟ್ರಾಹೆಪಾಟಿಕ್ ಬ್ಲಡ್ ಸ್ಯಾಂಪ್ಲಿಂಗ್ 3. ಕಾರ್ಡಿಯೋಸೆಂಟೆಸಿಸ್. ಎಫ್‌ಬಿಎಸ್‌ನ ತಂತ್ರಗಳನ್ನು ಡಿಗೋಕ್ಸಿನ್ ಅಥವಾ ಪ್ಲೇಟ್‌ಲೆಟ್‌ಗಳು ಮತ್ತು ಭ್ರೂಣಕ್ಕೆ ಕೆಂಪು ರಕ್ತ ಕಣಗಳನ್ನು…

Read More

ಫೀಟಲ್ ರಕ್ತ ವರ್ಗಾವಣೆ

ಫೀಟಲ್ ಬ್ಲಡ್ ವರ್ಗಾವಣೆಯು ಒಂದು ಪ್ರಕ್ರಿಯೆಯಾಗಿದ್ದು ಇದರಲ್ಲಿ ಭ್ರೂಣದ ರಕ್ತಹೀನತೆಗಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಗರ್ಭದೊಳಗಿನ ಮಗುವಿನ ರಕ್ತ ಕಣಗಳು ಬಹಳ ಕಡಿಮೆಯಿದ್ದಾಗ ಫೀಟಲ್ ರಕ್ತಹೀನತೆ ಸಮಸ್ಯೆಯುಂಟಾಗುತ್ತದೆ. ಈ ಪರಿಸ್ಥಿತಿಯು ಜೀವಮಾರಕವಾಗಿದೆ ಆದ್ದರಿಂದಲೇ ಫೀಟಲ್ ರಕ್ತಹೀನತೆಯ ಸಮಸ್ಯೆಯನ್ನು ಪತ್ತೆಮಾಡಿದ ನಂತರ ಸಾಧ್ಯವಾದಷ್ಟು ಬೇಗ ಭ್ರೂಣದ ರಕ್ತ ವರ್ಗಾವಣೆಯನ್ನು ಮಾಡಲಾಗುತ್ತದೆ. ಮಣಿಪಾಲ್ ಆಸ್ಪತ್ರೆಗಳ ಏಕೆ ಆಯ್ಕೆ?…

Read More

ಡಯಾಗ್ನೋಸ್ಟಿಕ್ಸ್ ಮತ್ತು ಥೆರಪ್ಯುಟಿಕ್…

ಫೀಟೊಸ್ಕೋಪಿ ಒಂದು ಎಂಡೊಸ್ಕೋಪಿಕ್ ಪ್ರಕ್ರಿಯೆಯಾಗಿದ್ದು ಇದನ್ನು ಭ್ರೂಣ, ಆಮ್ನಿಯೋಟಿಕ್ ಕ್ಯಾವಿಟಿ, ಹೊಕ್ಕಳ ಬಳ್ಳಿ ಮತ್ತು ಭ್ರೂಣದ ಬದಿಯ ಜರಾಯುವಿನ ಮೌಲ್ಯಮಾಪನ ಮಾಡುವುದಕ್ಕಾಗಿ ಗರ್ಭವಾಸ್ಥೆಯಲ್ಲಿ ಮಾಡಲಾಗುತ್ತದೆ. ಹೊಟ್ಟೆಯಲ್ಲಿ ಒಂದು ಸಣ್ಣ ಇನ್ಸಿಶನ್ ಹಾಕಲಾಗುತ್ತದೆ ಮತ್ತು ನಂತರ ಎಂಡೊಸ್ಕೋಪ್ ಅನ್ನು ಕಿಬ್ಬೊಟ್ಟೆಯ ಗೋಡೆ ಮತ್ತು ಗರ್ಭಾಶಯದ ಮೂಲಕ ಆಮ್ನಿಯೋಟಿಕ್ ಕ್ಯಾವಿಟಿ ಒಳಗೆ ಸೇರಿಸಲಾಗುತ್ತದೆ. ಒಂದು ಸಣ್ಣ ಇನ್ಸಿಶನ್ ಹಾಕಿ…

Read More

ಅವಳಿ ಟ್ರಾನ್ಸ್ ಫ್ಯೂಶನ್ ಸಿಂಡ್ರೋಮ್…

ಅವಳಿ ಟ್ರಾನ್ಸ್ ಫ್ಯೂಶನ್ ಸಿಂಡ್ರೋಮ್ ನಲ್ಲಿ ಲೇಸರ್ ಅಬ್ಲೇಶನ್ ಮತ್ತು ಬಳ್ಳಿಗಳ ಕೋಗುಲೇಷನ್ TTTS ಗುಣಪಡಿಸಲು ಅತ್ಯಂತ ಸಾಮಾನ್ಯ ಕಾರ್ಯವಿಧಾನವೆಂದರೆ ರಿಡಕ್ಷನ್ ಆಮ್ನಿಯೋಸೆಂಟೆಸಿಸ್. ಈ ಪ್ರಕ್ರಿಯೆಯಲ್ಲಿ ರೆಸಿಪಿಯೆಂಟ್ ಅವಳಿಯ ಸುತ್ತಲಿನ ಆಮ್ನಿಯೋಟಿಕ್ ದ್ರವವನ್ನು ಹೊರಗೆ ತೆಗೆಯಲಾಗುತ್ತದೆ. ಇದರಿಂದ ಡೋನರ್ ಅವಳಿಯಲ್ಲಿನ ರಕ್ತಪರಿಚಲನೆಯು ಸುಧಾರಿಸುತ್ತದೆ, ಅದರಲ್ಲೂ ವಿಶೇಷವಾಗಿ ಅನಸ್ಟೋಮೊಸಿಸ್ ಅಥವಾ ಅಡ್ಡ ಸಂಪರ್ಕವು ಜರಾಯುವಿನಲ್ಲಿ…

Read More

ಗರ್ಭವಸ್ಥೆ ಮತ್ತು ಗರ್ಭಾವಸ್ಥೆಯಲ್ಲದ…

ಗರ್ಭವಸ್ಥೆ ಮತ್ತು ಗರ್ಭಾವಸ್ಥೆಯಲ್ಲದ ಸಂಬಂಧಿತ ಪರಿಸ್ಥಿತಿಗಳಿಗೆ ಸಾಕ್ಷಿ ಆಧಾರಿತ ಸಮಾಲೋಚನೆ ದಂಪತಿಗಳು ಮಗುವಿನ ಬಗ್ಗೆ ಯೋಚಿಸುವ ಮೊದಲು ಮಹಿಳೆ, ಭ್ರೂಣ, ಮತ್ತು ನವಜಾತ ಶಿಶುವಿನ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳನ್ನು ಕಡಿಮೆ ಮಾಡುವ ಉದ್ದೇಶವನ್ನು ಗರ್ಭಾವಸ್ಥೆಯ ಮುನ್ನದ ಆರೈಕೆ ಹೊಂದಿದೆ. ಇದರಿಂದ ಆರೋಗ್ಯವನ್ನು ಸುಧಾರಿಸಬಹುದು, ಅಪಾಯದ ಕಾರಣಗಳನ್ನು ತಡೆಗಟ್ಟಬಹುದು ಮತ್ತು ಆರೋಗ್ಯಕರ ಗರ್ಭವಾಸ್ಥೆಯ ಬಗ್ಗೆ ಶಿಕ್ಷಣವನ್ನು…

Read More

ಮಣಿಪಾಲ್ ಆಸ್ಪತ್ರೆಯ ಮೆಟರ್ನಲ್ ಫೀಟಲ್ ಮೆಡಿಸಿನ್ ತಜ್ಞರ ತಂಡವು ಗರ್ಭಿಣಿಯರ ಯಾವುದೇ ಅಪಾಯಗಳು ಮತ್ತು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ ಅದನ್ನು ಸರಿಯಾದ ಸಮಯಕ್ಕೆ ಡಯಾಗ್ನೋಸ್ಟಿಕ್ ಅಲ್ಟ್ರಾಸೌಂಡ್, ವಯಬಿಲಿಟಿ ಸ್ಕ್ಯಾನ್, NT ಸ್ಕ್ಯಾನ್ ಮತ್ತು ಅನುಪಲಾಯ್ಡ್ ಅಪಾಯದ ಲೆಕ್ಕಾಚಾರ, ಬಹು ಗರ್ಭಧಾರಣೆಯ ನಿರ್ವಹಣೆ/Rh ರೋಗನಿರೋಧಕ ಗರ್ಭಧಾರಣೆಯ ಕುರಿತು  ರೋಗನಿರ್ಣಯ, ಸಮಾಲೋಚನೆ ಮತ್ತು ನಿರ್ವಹಣೆ ರೀತಿಯ ಸೌಲಭ್ಯಗಳೊಂದಿಗೆ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಗರ್ಭಾವಸ್ಥೆ ಸಮಯದ ಉದ್ದಕ್ಕೂ ನಿಗಾವಣೆ ಮಾಡುತ್ತಾರೆ.  

ಕೆಲವು ದೈನಂದಿನ ಸೇವೆಗಳೆಂದರೆ: 

 • ಸ್ಕ್ಯಾನಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ 

 • ಅಲ್ಟ್ರಾಸೌಂಡ್ 

 • NT ಸ್ಕ್ಯಾನ್ ಮತ್ತು ಅಪಾಯದ ಲೆಕ್ಕಾಚಾರ 

 • (ಅಸಹಜತೆಗಾಗಿ ಸ್ಕ್ಯಾನ್)ಅನಾಮಲಿ ಸ್ಕ್ಯಾನಿಂಗ್

 • ಅನುವಂಶಿಕತೆ/ವರ್ಣತಂತುಗಳ ದೋಷಗಳಿಗಾಗಿ ಸ್ಕ್ರೀನಿಂಗ್ ಪರೀಕ್ಷೆ  

 • ಭ್ರೂಣದ 2 D ಎಕೋ/ಫೀಟಲ್ ಎಕೋಕಾರ್ಡಿಯೋಗ್ರಫಿ 

 • ಫೀಟಲ್ ಮತ್ತು ಮೆಟರ್ನಲ್ ಡಾಪ್ಲರ್ ಸ್ಟಡಿ 

 • ಬಹು ಗರ್ಭಧಾರಣೆಯ ನಿರ್ವಹಣೆ/Rh ರೋಗನಿರೋಧಕ ಗರ್ಭಧಾರಣೆಯ ಕುರಿತು  ಲೆಕ್ಕಾಚಾರ, ರೋಗನಿರ್ಣಯ, ಸಮಾಲೋಚನೆ ಮತ್ತು ನಿರ್ವಹಣೆ 

 • 3D/4D ಇಮೇಜಿಂಗ್

 • ಹೈ-ರಿಸ್ಕ್ ಪ್ರೆಗ್ನೆನ್ಸಿ ಸಮಾಲೋಚನೆ

 • ಅಪಾಯ ಮರುಮೌಲ್ಯಮಾಪನ ಸ್ಕ್ಯಾನ್

 • ಗರ್ಭಾವಸ್ಥೆಯ ಪೂರ್ವದ ಸಮಾಲೋಚನೆ 

 

Facilities & Services

ಒಂದು ಪರಿಣಾಮಕಾರಿಯಾದ ಪ್ರಸವಪೂರ್ವ ಆರೈಕೆ ಯೋಜನೆಗಾಗಿ ಸ್ಕ್ಯಾನ್ ಮತ್ತು ರೋಗನಿರ್ಣಯ ಪರೀಕ್ಷೆಗಳು ಬಹಳ ಮುಖ್ಯವಾಗಿದೆ. ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿಧಾನಗಳೆಂದರೆ ಇನ್ವೇಸಿವ್ ರಹಿತ ಪರೀಕ್ಷೆಗಳಾದ ಅಲ್ಟ್ರಾಸೌಂಡ್ ಸ್ಕ್ಯಾನ್ ಗಳು. ಒಂದು ನಿಯಮಿತ ಪ್ರಸವ ಪೂರ್ವ ಆರೈಕೆ ಯೋಜನೆಯಲ್ಲಿ ಸಾಮಾನ್ಯವಾಗಿ ಭ್ರೂಣದ ಬದುಕುಳಿಯುವ ಸಾಧ್ಯತೆ ಸ್ಕ್ಯಾನ್(ವಯಬಿಲಿಟಿ ಸ್ಕ್ಯಾನ್) ಅನ್ನು ಗರ್ಭವಾಸ್ಥೆಯ ಮೊದಲ 6-10 ವಾರಗಳ ನಡುವೆ ಮಾಡಲಾಗುತತದೆ ಮತ್ತು ಇದರ ನಂತರ ಮೊದಲ ತ್ರೈಮಾಸಿಕ ಸ್ಕ್ರೀನಿಂಗ್ ಮತ್ತು NT ಸ್ಕ್ಯಾನ್ ಸಹ ಮಾಡಲಾಗುತ್ತದೆ. ಇನ್ನು 18-23 ವಾರಗಳ ನಡುವೆ ಒಂದು ಅನಾಮಲಿ ಸ್ಕ್ಯಾನ್ ಸಹ ಮಾಡಿಸಲಾಗುತ್ತದೆ ಮತ್ತು ಇದರಲ್ಲಿ ಭ್ರೂಣದ ಯಾವುದೇ ಅಸಹಜತೆಗಳನ್ನು ಪತ್ತೆ ಹಚ್ಚಲು ಮಾಡಲಾಗುತ್ತದೆ. ಈ ಸಮಯದಲ್ಲಿ ಫೀಟಲ್ ಎಕೋಕಾರ್ಡಿಯೋಗ್ರಫಿಯನ್ನು ಮಾಡಿ ಮಗುವಿನ ಹೃದಯದ ಆರೋಗ್ಯವನ್ನು ಪರಿಶೀಲಿಸಲಾಗುತ್ತದೆ. 2ನೆಯ ತ್ರೈಮಾಸಿಕದ ಅಂತ್ಯದಲ್ಲಿ, ಭ್ರೂಣದ ಕ್ಷೇಮಕ್ಕಾಗಿ ಸ್ಕ್ಯಾನ್ ಮಾಡಿಸಲಾಗುತ್ತದೆ ಮತ್ತು ಭ್ರೂಣದ ಬೆಳವಣಿಗೆಯನ್ನು ನೋಡಲಾಗುತ್ತದೆ. ಮುಂದೆ ತಾಯಿಯಾಗುವ ಆಸೆ ಹೊಂದಿರುವ ಮಹಿಳೆ ಮತ್ತು ಅವರ ಶಿಶುವಿಗಾಗಿ ಅಪಾಯವನ್ನು ಕಡಿಮೆ ಮಾಡಲು ಇರುವ ಅತ್ಯುತ್ತಮ ವಿಧಾನವೆಂದರೆ ನಿಯಮಿತ ಮಧ್ಯಂತರಗಳಲ್ಲಿ ಅಡ್ಡಪರಿಣಾಮಗಳನ್ನು ಪತ್ತೆ ಮಾಡುವುದು ಏಕೆಂದರೆ ಆರಂಭಿಕ ಹಂತಗಳಲ್ಲಿ ಚಿಕಿತ್ಸೆಯನ್ನು ಮಾಡುವುದು ಬಹಳ ಸುಲಭ. ಚುಚ್ಚುರಹಿತ ಪರೀಕ್ಷೆಗಳು ತಾಯಿ ಮತ್ತು ಮಗುವಿಗೆ ಕಡಿಮೆ ಅಪಾಯವಿರುತ್ತದೆ ಎಂದು ಖಚಿತಪಡಿಸುತ್ತದೆ. ಸುಧಾರಿತ ಸೇವೆಗಳೆಂದರೆ: - ಫೀಟಲ್ ಇಂಟರ್ವೆನ್ಶನಲ್ ಚಿಕಿತ್ಸೆಗಳು - ಫೀಟಲ್ ಕಾರ್ಡ್ ಬ್ಲಡ್ ಸ್ಯಾಂಪ್ಲಿಂಗ್-ಇಂಟ್ರಾಯುಟರೈನ್ ರಕ್ತ ವರ್ಗಾವಣೆ - ಆಮ್ನಿಯೋಸೆಂಟೆಸಿಸ್ - ಕೊರಿಯೋನಿಕ್ ವಿಲ್ಲಾಸ್ ಸ್ಯಾಂಪ್ಲಿಂಗ್ -ಫೀಟಲ್ ಪ್ಲುರೋಸೆಂಟೆಸಿಸ್/ಟ್ಯಾಪಿಂಗ್ -ಭ್ರೂಣದ ಶಂಟಿಂಗ್ - ಭ್ರೂಣದ ರಿಡಕ್ಷನ್

FAQ's

Ideally, your first visit should be before becoming pregnant. This allows a doctor to provide counseling to help you prepare for pregnancy and also to identify any risk factors that can be reduced and address them before pregnancy. If your first visit is after pregnancy, the first step is confirmation of pregnancy and then counseling.

High blood pressure Diabetes Carrying multiple fetuses Age - Teens and women above 35 years of age are at higher risk Existing health complications in the mother. To know more, visit our fetal medicine hospital in Old Airport Road, Bangalore.

If any abnormalities or complications arise in the developing fetus, interventional procedures may be required to help the fetus survive or grow. Interventional treatments are only carried out if recommended by a multidisciplinary team of maternal-fetal medicine experts. All risks and options will be presented with advice to make the right decision. Visit our best fetal medicine hospital in Bangalore to know more about treatment.

In pregnancies, medical supervision comes highly recommended due to the risks of complications in pregnancy going unnoticed until it is too late. Regular scans and timely interventions are life-saving procedures that form a crucial part of prenatal care.

ಮಣಿಪಾಲ್ ಆಸ್ಪತ್ರೆಗಳು ಅತ್ಯಧಿಕ ಗುಣಮಟ್ಟದ ಅತ್ಯಾಧುನಿಕ ವೈಯಕ್ತಿಕಗೊಳಿಸಿದ ಆರೈಕೆಯನ್ನು ಒಬ್ಬ ಗರ್ಭಿಣಿ ಮಹಿಳೆಗೆ ನೀಡಲು ಬದ್ಧವಾಗಿದೆ ಮತ್ತು ಇದರಿಂದ ಮಹಿಳೆಯರು ತನ್ನ ಇಡೀ ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿರಬಹುದು ಮತ್ತು ಆರೋಗ್ಯಕರ ಹಾಗೂ ಸಂತೋಷಕರ ತಾಯಂದಿರೂ ಆಗಬಹುದು. ನಮ್ಮ ಬದ್ಧತೆಯ ಮೆಟರ್ನಲ್ ಫೀಟಲ್ ಮೆಡಿಸಿನ್ ಪರಿಣಿತರ ತಂಡವು ಇದಕೆ ಸಾಕ್ಷಿಯಾಗಿದೆ. ಪ್ರಸವಪೂರ್ವ ಆರೈಕೆಯ ಕುರಿತು ಹೆಚ್ಚು ಮಾಹಿತಿಯನ್ನು ಪಡೆಯಲು ಮತ್ತು ಇಂದೇ ನಮ್ಮ ತಜ್ಞರನ್ನು ಭೇಟಿ ಮಾಡಲು ನಮ್ಮನ್ನು ಸಂಪರ್ಕಿಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ