ರಾಜ್ಯದಲ್ಲಿಯೇ ಅತ್ಯುತ್ತಮ ಸೌಲಭ್ಯಗಳನ್ನು ಮತ್ತು ಪರಿಣಿತ ದಂತ ವೈದ್ಯರನ್ನು ಒಳಗೊಂಡಿರುವ ಮಣಿಪಾಲ್ ಆಸ್ಪತ್ರೆಗಳ ದಂತವೈದ್ಯಕೀಯ ವಿಭಾಗವು ಎಲ್ಲ ತಡೆಗಟ್ಟುವ ಮತ್ತು ಪುನರ್ರಚನಾ ದಂತವೈದ್ಯಕೀಯ ಸೇವೆಗಳನ್ನು ಒಳಗೊಂಡಂತೆ ದೈನಂದಿನದ ಹಲ್ಲಿನ ಸ್ವಚ್ಛತೆಯಿಂದ ಹಿಡಿದು ಆಧುನಿಕ ಆರ್ಥೋಡಾಂಟಿಕ್ಸ್ ವರೆಗೆ ಸಂಪೂರ್ಣ ದಂತ ಆರೈಕೆಯ ಸೇವೆಗಳನ್ನು ಒದಗಿಸುತ್ತದೆ.
ಮಣಿಪಾಲ್ ಆಸ್ಪತ್ರೆಯಲ್ಲಿರುವ ತಂಡವು ಬಹು ದಂತಕೀಯ ವಿಭಾಗಗಳಲ್ಲಿ ಅತ್ಯುತ್ತಮರಾಗಿರುವ ಅತ್ಯಧಿಕ ಪರಿಣಿತಿ ಮತ್ತು ತರಬೇತಿ ಹೊಂದಿದ ದಂತ ವೈದ್ಯರುಗಳನ್ನು ಒಳಗೊಂಡಿದೆ. ಮಣಿಪಾಲ್ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯ ಮತ್ತು ಸೌಲಭ್ಯಗಳು ನವೀನ ದಂತವೈದ್ಯಕೀಯ ತಂತ್ರಜ್ಞಾನದಲ್ಲಿನ ಆಧುನಿಕ ಸಾಧನಗಳನ್ನು ಒಳಗೊಂಡಿದೆ. ಪ್ರತಿವರ್ಷ ಸಾವಿರಾರು ರೋಗಿಗಳು ಮಣಿಪಾಲ್ ಆಸ್ಪತ್ರೆಯಿಂದ ಒಂದು ಮಾಸದ ಮುಗುಳ್ನಗೆಯೊಂದಿಗೆ ಹೊರನಡೆಯುತ್ತಾರೆ, ಅದಕ್ಕಾಗಿ ನಮ್ಮ ನುರಿತ ಆರ್ಥೊಡಾಂಟಿಸ್ಟ್ಗಳು, ಎಂಡೋಡಾಂಟಿಸ್ಟ್ಗಳು, ಪೀಡಿಯಾಟ್ರಿಕ್, ಪೆರಿಯೊಡಾಂಟಿಸ್ಟ್ ಮತ್ತು ಪ್ರೊಸ್ಟೊಡಾಂಟಿಸ್ಟ್ಗಳು, ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕರಿಗೆ ಧನ್ಯವಾದಗಳು.
ಹೆಚ್ಚು ಸುಂದರವಾದ ನಗು ಮತ್ತು ಉತ್ತಮವಾದ ಬಾಯಿ ಆರೋಗ್ಯವನ್ನು ಹೊಂದಲು ಹಲ್ಲಿನ ಜೋಡಣೆಯನ್ನು ಸರಿಪಡಿಸಲು ಬ್ರೇಸ್ ಗಳನ್ನು ಬಳಸುತ್ತಾರೆ. ಕೆಲವೊಮ್ಮೆ ಅಂಕುಡೊಂಕಾದ ಹಲ್ಲುಗಳ ಕಾರಣದಿಂದಾಗಿ ಹಲ್ಲುಜ್ಜುವ ಸಮಯದಲ್ಲಿ ಹಲ್ಲಿನ ಬ್ರಷ್ ಅಲ್ಲಿಗೆ ತಲುಪಲು ಸಾಧ್ಯವಾಗದೆ ಆರೋಗ್ಯಕರ ಮತ್ತು ಸ್ವಚ್ಛ ಹಲ್ಲುಗಳನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಉತ್ತಮ ಸ್ವಚ್ಛ ಹಲ್ಲುಗಳು, ಹುಳುಕಾಗದಂತೆ ಮತ್ತು ವಸುಡು ಸಮಸ್ಯೆಗಳಾಗದಂತೆ ನೋಡಿಕೊಳ್ಳುತ್ತದೆ…
ಒಂದುವೇಳೆ ನೀವು ನಿಮ್ಮ ಹಲ್ಲುಗಳನ್ನು ಕಳೆದುಕೊಂಡರೂ ಸಹ, ನೀವು ನಿಮ್ಮ ನಗುವನ್ನು ಕಳೆದುಕೊಳ್ಳುವುದಿಲ್ಲ. ಡೆಂಟಲ್ ಇಂಪ್ಲಾಂಟ್ ಗಳೊಂದಿಗೆ ನೀವು ಹುಳುಕಾಗಿರುವ ಮತ್ತು ಸತ್ತ ಹಲ್ಲುಗಳನ್ನು ನಿಖರ ಆಕಾರದ ಬದಲಿಗಳೊಂದಿಗೆ ಬದಲಿಸಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಹಲ್ಲುಗಳನ್ನು ತೆಗೆದಾಗ ಡೆಂಟಲ್ ಇಂಪ್ಲಾಂಟ್ ಗಳ ಬಗ್ಗೆ ಸಲಹೆ ನೀಡಲಾಗುತ್ತದೆ.
ಒಮ್ಮೆ ಹಲ್ಲು ಹುಳುಕಾದಾಗ, ಸೀಳಿದಾಗ ಅಥವಾ ಸೋಂಕು ತಗುಲಿದಾಗ, ಅದರ ಹೆಚ್ಚಿನ ಹಾನಿಯನ್ನು ತಡೆಗಟ್ಟಲು ರೂಟ್ ಕೆನಾಲ್ ಮಾಡಲಾಗುತ್ತದೆ. ಈ ಚಿಕಿತ್ಸಾ ವಿಧಾನದಲ್ಲಿ ಹಲ್ಲುಗಳ ಒಳಭಾಗವನ್ನು(ನರ ಭಾಗವನ್ನು) ತೆರೆದು, ಅಲ್ಲಿನ ಯಾವುದೇ ಸೋಂಕು ಇರುವ ಅಂಗಾಂಶವನ್ನು ಸ್ವಚ್ಛಗೊಳಿಸಲಾಗುತ್ತದೆ. ಸ್ವಚ್ಛಗೊಳಿಸಿದ ನಂತರ, ಆ ತೆರೆದ ನರವನ್ನು ಫಿಲ್ಲಿಂಗ್ ಮಾಡಿ ಮುಚ್ಚಲಾಗುತ್ತದೆ. ಸೋಂಕಿರುವ ಹಲ್ಲನ್ನು ರಕ್ಷಿಸುವುದರಿಂದ ನೀವು ಕೃತಕ ಹಲ್ಲು ಹಾಕಿಸುವುದನ್ನು…
ಮಣಿಪಾಲ್ ಆಸ್ಪತ್ರೆಗಳಲ್ಲಿನ ದಂತ ವಿಭಾಗವು ತಂತ್ರಜ್ಞಾನವನ್ನು ಪರಿಣಾಮಕಾರಿ ರೋಗನಿರ್ಣಯ ಮತ್ತು ಚಿಕಿತ್ಸೆಯ ಪ್ರಮುಖ ಭಾಗ ಎಂದು ನಂಬಿದೆ. ಆದ್ದರಿಂದಲೇ ಅವರು ಎಲ್ಲ ಚಿಕಿತ್ಸೆಗಳಲ್ಲಿಯೂ ಗರಿಷ್ಟ ನಿಖರತೆಯನ್ನು ಸಾಧಿಸಲು ರಾಜ್ಯದಲ್ಲಿಯೇ ಅತ್ಯುತ್ತಮ ಪ್ರಯೋಗಾಲಯಗಳೊಂದಿಗೆ ಮತ್ತು ಪರಿಣಿತರೊಂದಿಗೆ ಕಾರ್ಯನಿರ್ವಹಿಸುತ್ತಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಸಿಗುವ ನಿಯಮಿತ ಸೇವೆಗಳು
ಬ್ರೇಸಸ್
ಇನ್ವಿಸಲೈನ್
ರೂಟ್ ಕೆನಾಲ್
ಸ್ಕೇಲಿಂಗ್ ಮತ್ತು ಕ್ಲೀನಿಂಗ್
ಹಲ್ಲು ಬಿಳುಪಾಗಿಸುವುದು
ಸುಧಾರಿತ ಚಿಕಿತ್ಸಾ ವಿಧಾನಗಳು:
ಎಂಡೋಡಾಂಟಿಕ್ ಶಸ್ತ್ರಚಿಕಿತ್ಸೆ
ಪೆರಿಯೋಡಾಂಟಲ್ ಕಾಯಿಲೆಯ ಚಿಕಿತ್ಸೆ
ಪೂರ್ಣ ಬಾಯಿ ಪುನರ್ನಿರ್ಮಾಣ
ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ
ಹಲ್ಲಿನ ಹೊರತೆಗೆಯುವಿಕೆ
ಪೋರ್ಸಲಿನ್ ವೆನೀರ್ಸ್
ದಂತ ಕಸಿ
ಸರಿಪಡಿಸುವ ದವಡೆಯ ಶಸ್ತ್ರಚಿಕಿತ್ಸೆ
ಮಣಿಪಾಲ್ ಆಸ್ಪತ್ರೆಗಳಲ್ಲಿನ ದಂತ ಸೌಲಭ್ಯಗಳೆಂದರೆ-
ಡೆಂಟಲ್ ಕ್ಪ ಕಿರಣ - ವೈಯಕ್ತಿಕ ಕ್ರೌನ್ ವಿನ್ಯಾಸ- ಪ್ರೊಸ್ಥೆಟಿಕ್ ಫಿಟ್ಟಿಂಗ್ -ಅನೇಸ್ಥೆಟಿಕ್ಸ್ -ಬಾಯಿ ಕ್ಯಾನ್ಸರ್ ಪತ್ತೆಹಚ್ಚುವಿಕೆ
A full oral examination is conducted to evaluate your oral health. After this, your dentist will inform you of any issues that need to be addressed and the relevant treatments available.
Poor oral hygiene
High sugar diets
Tobacco consumption
High alcohol consumption.
To avoid these risk factors, visit our dental medicine hospital in Old Airport Bangalore.
Yellowing of the teeth
Inflamed gums that bleed easily
High sensitivity Cracked or loose teeth Bad breath.
To know more about dental treatment in Bangalore, visit Manipal Hospitals.
For the most part, tooth decay is preventable by maintaining good oral hygiene. In some cases, alignment and/or correction may be required, but brushing twice a day with good technique, flossing once a week and getting a dental check-up twice a year is known to prevent tooth decay very effectively.
ಮಣಿಪಾಲ್ ಆಸ್ಪತ್ರೆಗಳು ವೈಯಕ್ತಿಕ ದಂತ ಆರೈಕೆಯ ಅತ್ಯುತ್ತಮ ಗುಣಮಟ್ಟವನ್ನು ಒದಗಿಸಲು, ನಮ್ಮ ರೋಗಿಗಳೊಂದಿಗೆ ದೀರ್ಘ ಸಮಯದ ಸಂಬಂಧವನ್ನು ಉಳಿಸಿಕೊಳ್ಳಲು ಹಾಗೂ ದೀರ್ಘಸಮಯದವರೆಗೆ ಅವರ ಹಲ್ಲಿನ ಆರೋಗ್ಯವನ್ನು ರಕ್ಷಿಸಲು ಬದ್ಧವಾಗಿದೆ. ನೀವು ನಿಮ್ಮ ಹಲ್ಲನ್ನು ಹೇಗೆ ಆರೋಗ್ಯಕರವಾಗಿ ಇಡಬಹುದು ಎಂಬುದರ ಕುರಿತು ಹೆಚ್ಚು ಮಾಹಿತಿಯನ್ನು ಪಡೆಯಲು ನಮ್ಮನ್ನು ಸಂಪರ್ಕಿಸಿ. ನೀವು ಸದಾ ಆತ್ಮವಿಶ್ವಾಸದ ಸುಂದರ ನಗುವನ್ನು ಬೀರಲು ನಮ್ಮ ದಂತ ವೈದ್ಯರೊಂದಿಗೆ ಒಮ್ಮೆ ಭೇಟಿ ಸಮಯವನ್ನು ನಿಗದಿಪಡಿಸಿ.