ಕ್ಲಿನಿಕಲ್ ಸೈಕೊಲಾಜಿ


ಮಾನಸಿಕ ಆರೋಗ್ಯ ವೃತ್ತಿಪರರಿಗಾಗಿ ತರಬೇತಿ ಕೇಂದ್ರವನ್ನು ಒಳಗೊಂಡಿರುವ ದೇಶದಲ್ಲಿಯೇ ಅತಿ ದೊಡ್ಡ ಮಾನಸಿಕ ಆರೋಗ್ಯ ಆರೈಕೆ ಸೌಲಭ್ಯ ಕೇಂದ್ರಗಳಲ್ಲಿ ಮಣಿಪಾಲ್ ಆಸ್ಪತ್ರೆ ಸಹ ಒಂದಾಗಿದೆ. ನಮ್ಮ ಅತ್ಯಂತ ಪರಿಣಿತ ಕ್ಲಿನಿಕಲ್ ಸೈಕೊಲಾಜಿ ಸಿಬ್ಬಂದಿಯು ರೋಗಿಗಳೊಂದಿಗೆ ಇದ್ದು ಅವರ ಮಾನಸಿಕ ಸಮಸ್ಯೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಅವರಿಗೆ ಸಹಾಯಮಾಡುವ ಮೂಲಕ ಅವರಿಗೆ ಉತ್ತಮ ಮಾನಸಿಕ ಆರೋಗ್ಯವನ್ನು ಒದಗಿಸುತ್ತಾರೆ.

OUR STORY

Know About Us

Why Manipal?

ಆಸ್ಪತ್ರೆಗಳು ನುರಿತ ಮಾನಸಿಕತಜ್ಞರು, ಕ್ಲಿನಿಕಲ್ ಮನಃಶಾಸ್ತ್ರಜ್ಞರು, ಔದ್ಯೋಗಿಕ ಚಿಕಿತ್ಸಕರು ಮತ್ತು ಮಾನಸಿಕ ಶುಶ್ರೂಷಕಿಗಳನ್ನು ಹೊನಿದ್ದು, ಇವರೆಲ್ಲರೂ ತಮ್ಮ ಕ್ಷೇತ್ರಗಳಲ್ಲಿ ತರಬೇತಿ ಪಡೆದ ಮತ್ತು ಅನುಭವವುಳ್ಳ ವೃತ್ತಿಪರರಾಗಿದ್ದಾರೆ. ಮಣಿಪಾಲ್ ನಲ್ಲಿ ಉತ್ತಮ ಮಾನಸಿಕ ಆರೋಗ್ಯವನ್ನು ಪಡೆಯಲು ಒತ್ತಡಕಾರಕಗಳನ್ನು ಗುರುತಿಸಿ  ಪರಿಹರಿಸಬೇಕು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಒಬ್ಬರ ಜೀವನದಲ್ಲಿ ಒಳಗೊಂಡಿರುವ ಹಲವಾರು ಚಟುವಟಿಕೆಗಳ ನಡುವೆ ಸಮತೋಲನವನ್ನು ಸಹ ರಚಿಸುವುದು ಮುಖ್ಯ ಎಂದು ಸಹ ನಾವು ನಂಬಿದ್ದೇವೆ. ನಾವು ರೋಗಿಗಳಿಗೆ ಒಂದು ಆರೋಗ್ಯದ ಅನುಭವವನ್ನು ಸಾಧಿಸಲು ಸಹಾಯ ಮಾಡುವ ಜೊತೆಯಲ್ಲಿ ಭಾವನೆಗಳು, ಆಲೋಚನೆಗಳು ಮತ್ತು ನಡವಳಿಕೆಯ ಮಾದರಿಗಳ ನಡುವಿರುವ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸಹ ಸಹಾಯ ಮಾಡುತ್ತೇವೆ. ರೋಗಿಗಳು ಪರಿಣಾಮಕಾರಿಯಾದ ವಿಧಾನಗಳಲ್ಲಿ ಪ್ರತಿದಿನದ ಒತ್ತಡಕಾರಕಗಳನ್ನು ನಿರ್ವಹಿಸಲು ಸಹ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ. 

Treatment & Procedures

ಪೀಡಿಯಾಟ್ರಿಕ್ ನ್ಯೂರೋಲಾಜಿ

ವೈದ್ಯಕೀಯ ವಿಭಾಗದ ಈ ವಿಶೇಷ ಶಾಖೆಯು ನವಜಾತ ಶಿಶುಗಳಲ್ಲಿ, ಚಿಕ್ಕ ಮತ್ತು ದೊಡ್ಡ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಉಂಟಾಗುವ ತೀವ್ರ ಸ್ವರೂಪದ ಅಪಸ್ಮಾರ, ಜ್ವರದ ಮೂರ್ಛೆರೋಗ, ಮೆದುಳು ಜ್ವರ, ಮೆನಿಂಜೈಟಿಸ್, ಜೊತೆಗೆ ಪೀಡಿಯಾಟ್ರಿಕ್ ಸ್ಟ್ರೋಕ್ ನ ದೀರ್ಘ ಕಾಯಿಲೆಗಳಾದ ಹೈಡ್ರೊಸೆಫಾಲಸ್, ಗೆಡ್ಡೆಗಳು ಮತ್ತು ಇತ್ಯಾದಿಗಳಂತಹ ನರಮಂಡಲದ ಸಮಸ್ಯೆಗಳ ರೋಗನಿರ್ಣಯ ಮತ್ತು ಚಿಕಿತ್ಸೆಯೊಂದಿಗೆ ನಿರ್ವಹಿಸುತ್ತದೆ. ಮಣಿಪಾಲ್ ಆಸ್ಪತ್ರೆಗಳ ಆಯ್ಕೆ…

Read More

ಮಣಿಪಾಲ್ ಆಸ್ಪತ್ರೆಗಳು ಕ್ಲಿನಿಕಲ್ ಸೈಕೊಲಾಜಿ ಸೇವೆಗಳನ್ನು ರೋಗಿಯ ಅದು ವಯಸ್ಕರಾಗಿರಬಹುದು ಅಥವಾ ಜೀವನದ ಯಾವುದೇ ಹಂತದಲ್ಲಿರುವ ವ್ಯಕ್ತಿಯ ಆರೋಗ್ಯಕ್ಷೇಮವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ನಾವು ರೋಗಿಗಳೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುವ ಮೂಲಕ ಸಾಧಿಸಬಲ್ಲ ಗುರಿಗಳನ್ನು ಇಟ್ಟುಕೊಂಡು ನಿರ್ದಿಷ್ಟ ಅಡಚಣೆಗಳನ್ನು ತೆಗೆಯುವುದಕ್ಕಾಗಿ ಕೆಲವು ಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಮೇಲ್ವಿಚಾರಣೆ ಮಾಡುತ್ತೇವೆ. ರೋಗಿಗಳು ಸಹ ತಮ್ಮ ಗುರಿಗಳನ್ನು ತಲುಪಲು ಹಾಗೂ ಬಯಸಿದ ಫಲಿತಾಂಶಗಳನ್ನು ಸಾಧಿಸಲು ಪ್ರಾಯೋಗಿಕ ಮತ್ತು ಅನ್ವಯವಾಗಬಲ್ಲ ಕೌಶಲ್ಯಗಳನ್ನು ಕಲಿಯುತ್ತಾರೆ.

ಮಣಿಪಾಲ್ ಆಸ್ಪತ್ರೆಯು ಈ ಕೆಳಗಿನ ಒಳರೋಗಿ ಸೌಲಭ್ಯಗಳನ್ನು ಒದಗಿಸುತ್ತದೆ: 

 • ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್ ಗಳು 

 • ಪುನರ್ವಸತಿ ಮತ್ತು ಡಿ-ಅಡಿಕ್ಷನ್ ವಾರ್ಡ್‌ಗಳು

 • ಮಾನಸಿಕ ಅಸ್ವಸ್ಥ ಕೈದಿಗಳಿಗೆ ವಾರ್ಡ್‌ಗಳು

 • ಇಂಡಸ್ಟ್ರಿಯಲ್ ಥೆರಪಿ ಸೆಂಟರ್

 • ಆಕ್ಯುಪೇಷನಲ್ ಥೆರಪಿ ಸೆಂಟರ್

 • ಅಪಸ್ಮಾರದ ರೋಗಿಗಳಿಗೆ ವಾರ್ಡ್‌ಗಳು

 • ಪ್ರಯೋಗಾಲಯ ಸೌಲಭ್ಯಗಳು

 • ಮಾನಸಿಕ ಪರೀಕ್ಷಾ ಸೌಲಭ್ಯಗಳು

 • ಔಟ್ರೀಚ್ ಸೇವೆಗಳು

 • ತುರ್ತು ಸೇವೆಗಳು

 

Facilities & Services

ಮಣಿಪಾಲ್ ಆಸ್ಪತ್ರೆಗಳಲ್ಲಿನ ನಮ್ಮ ಕ್ಲಿನಿಕಲ್ ಸೈಕೊಲಾಜಿಯ ವಿಭಾಗವು ಎಲ್ಲ ವಯಸ್ಸಿನವರಿಗಾಗಿ ಸೇವೆಗಳನ್ನು ಒದಗಿಸುತ್ತದೆ ಮತ್ತು ನಮ್ಮ ಸೇವೆಗಳು ಈ ಕೆಳಗಿನ ರೀತಿಯಾಗಿವೆ: 

ಮೌಲ್ಯಮಾಪನಗಳು, ಸೈಕೊಥೆರಪಿಗಳು ಮಾತು ರೋಗನಿರ್ಣಯ ಸೇವೆಗಳು, ಮೌಲ್ಯಮಾಪನ ಮತ್ತು ಡಯಾಗ್ನೋಸ್ಟಿಕ್ ಸೇವೆಗಳು, ಬುದ್ಧಿವಂತಿಕೆಯ ಮೌಲ್ಯಮಾಪನ - ವ್ಯಕ್ತಿಯ ಬುದ್ಧಿವಂತಿಕೆಯ ಯಾವ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಯಲು ನಡೆಸುವ ವಿಧಾನ. ವ್ಯಕ್ತಿತ್ವ ಮೌಲ್ಯಮಾಪನ - ವ್ಯಕ್ತಿತ್ವ ಗುಣಧರ್ಮಗಳ ಮೇಲೆ ಪರಿಣಾಮ ಬೀರುವ ಮಾನಸಿಕ ಸಮಸ್ಯೆಗಳು ಮತ್ತು ಅಸ್ವಸ್ಥತೆಗಳ ಪತ್ತೆಹಚ್ಚುವಿಕೆಯಾಗಿದೆ. 

ಮಾನಸಿಕ ಅಸ್ವಸ್ಥತೆ ರೋಗನಿರ್ಣಯ ಮತ್ತು ಸ್ಪಷ್ಟೀಕರಣ - ನಾವು ವಿಷಯಾಧಾರಿತ ಗ್ರಹಿಕೆ ಪರೀಕ್ಷೆ, ರೋರ್ಶಾಚ್ ಇಂಕ್‌ಬ್ಲಾಟ್, ರೇಟಿಂಗ್ ಮಾಪಕಗಳು ಮತ್ತು ಮಿನ್ನೇಸೋಟ ಮಲ್ಟಿಫಾಸಿಕ್ ಪರ್ಸನಾಲಿಟಿ ಇನ್ವೆಂಟರಿ ರೀತಿಯ ಪ್ರಮಾಣೀಕೃತ ವಿಧಾನಗಳೊಂದಿಗೆ ಮಾನಸಿಕ ಅಸ್ವಸ್ಥತೆಗಳ ತೀವ್ರತೆಯನ್ನು ಪತ್ತೆಮಾಡಲು ಸಹಾಯಮಾಡುತ್ತೇವೆ. 

ನ್ಯೂರೋಸೈಕೊಲಾಜಿಕಲ್ ಸೇವೆಗಳು - ಈ ಸೇವೆಯು ಮುಖ್ಯವಾಗಿ ಕೆಲವು ನ್ಯೂರೋಸೈಕೊಲಾಲಾಜಿಕಲ್ ಪರೀಕ್ಷೆಗಳ ಬಳಕೆಯೊಂದಿಗೆ ವಿವರವಾದ ಮೌಲ್ಯಮಾಪನಗಳ ಮೂಲಕ ಮೆದುಳಿನ ಕಾರ್ಯಾಚರಣೆಗಳನ್ನು ಅರ್ಥಮಾಡಿಕೊಳ್ಳಲು ಉದ್ದೇಶಿಸಿದೆ. ಇದು ಪುನರ್ವಸತಿ ಕಾರ್ಯತಂತ್ರಗಳಲ್ಲಿ, ಮಧ್ಯಸ್ಥಿಕೆಯ ಯೋಜನೆ ರೂಪಿಸುವುದರಲ್ಲಿ ಮತ್ತು ಸುಧಾರಣೆಗಳನ್ನು ಗಮನವಿಡಲು ಸಹಾಯ ಮಾಡುತ್ತದೆ. 

ಸಮಾಲೋಚನೆ ಮತ್ತು ಸೈಕೊಥೆರಪಿ -ನಮ್ಮ ಚಿಕಿತ್ಸಕ ಸೇವೆಗಳು ಔಷಧಿಗಳಿಗೆ ಪೂರಕವಾಗಿರಬಹುದಾದ ಆದರೆ ಬಳಸದಿರುವ ಮಧ್ಯಸ್ಥಿಕೆಗಳ ಮೂಲಕ ರೋಗಿಗಳ ಮಾನಸಿಕ ಆರೋಗ್ಯವನ್ನು ಪರಿಹರಿಸುತ್ತದೆ ಮತ್ತು ಸುಧಾರಿಸುತ್ತದೆ. 

 

ಶಾಂತಗೊಳಿಸುವ ವಿಧಾನಗಳು - ಇದು ಅಧಿಕರಕ್ತದೊತ್ತಡ, ಹೃದಯ ಮತ್ತು ಉಸಿರಾಟದ ದರಗಳನ್ನು ನಿಧಾನಿಸಲು, ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುವ ಜೊತೆಯಲ್ಲಿ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುತ್ತದೆ.  

 

ನಡವಳಿಕೆ ಚಿಕಿತ್ಸೆ - ಈ ರೀತಿಯ ಚಿಕಿತ್ಸೆಯು ಅಸಮರ್ಪಕ ನಡವಳಿಕೆಗಳನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ. ಈ ವಿಧಾನದಲ್ಲಿ ಅಸಮರ್ಪಕ ನಡವಳಿಕೆಗಳನ್ನು ಹೇಗೆ ಕಲಿತರು ಎಂಬುದನ್ನು ಅರ್ಥಮಾಡಿಕೊಳ್ಳಲಾಗುತ್ತದೆ ಮತ್ತು ಅಸಮರ್ಪಕ ನಡವಳಿಕೆಯನ್ನು ಬಿಟ್ಟು ರೋಗಿಗಳು ಹೊಸ ನಡವಳಿಕೆಗಳನ್ನು ಕಲಿಯಲು ಸಹಾಯ ಮಾಡಲು ಸರಿಯಾದ ಚಿಕಿತ್ಸೆಯನ್ನು ನೀಡುತ್ತದೆ. 

 

ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ - ಈ ಚಿಕಿತ್ಸೆಯು ನಿಖರವಾದ ಗ್ರಹಿಕೆಗಳನ್ನು ಒದಗಿಸಲು ಕೇಂದ್ರೀಕರಿಸುತ್ತದೆ ಏಕೆಂದರೆ ಇದರಲ್ಲಿ ಜನರು ತಮ್ಮ ಬಗ್ಗೆ ಅಥವಾ ಇತರರ ಬಗ್ಗೆ ಹೊಂದಿರುವ ತಪ್ಪು ತಿಳಿವಳಿಕೆಗಳನ್ನು ಹೊಂದಿರುತ್ತಾರೆ.  

 

ಕೌಟುಂಬಿಕ ಮತ್ತು ಸಂಸಾರಿಕ ಸೈಕೊಥೆರಪಿ - ಈ ಚಿಕಿತ್ಸೆಯು ಒಂದು ಕುಟುಂಬ ಅಥವಾ ಒಂದು ದಂಪತಿಗಳಿಗಾಗಿ ಇದೆ, ಇಲ್ಲಿ ಸಮಸ್ಯೆಯನ್ನು ಒಬ್ಬರಲ್ಲಿ ಕಂಡು ಬಂದರೂ ಸಹ ಇಡೀ ಕುಟುಂಬ ಅಥವಾ ದಂಪತಿಗಳಿಬ್ಬರನ್ನೂ ಸಹ ಚಿಕಿತ್ಸೆ ನೀಡಲಾಗುತ್ತದೆ. 

 

ಮಗು ಮತ್ತು ಹದಿಹರೆಯದ ಸೈಕೊಥೆರಪಿ - ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಸೈಕೋಡೈನಾಮಿಕ್ ವಿಧಾನಗಳು, ನಡವಳಿಕೆ ಮತ್ತು ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯನ್ನು ಬಳಸಿ ಮಾನಸಿಕ ಸಮಸ್ಯೆಗಳಾದಂತಹ ಒತ್ತಡ, ಉದ್ವೇಗ ಅಥವಾ ಖಿನ್ನತೆ ಹಾಗೂ ಆಟಿಸಂ, ನಡವಳಿಕೆ ಅಸ್ವಸ್ಥತೆಗಳು, ರಚ್ಚೆ ಹಿಡಿಯುವುದು ರೀತಿಯ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು.  

 

ಗುಂಪು ಚಿಕಿತ್ಸೆ - ಒಬ್ಬ ಚಿಕಿತ್ಸಕರು ಒಂದು ಗುಂಪಿನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ಹಲವಾರು ವಿಷಯಗಳ ನಿರ್ಮಾಣ ಮತ್ತು ತಾಂತ್ರಿಕ ವಿಧಾನಗಳ ಮೂಲಕ ಸಹಾಯ ಮಾಡುತ್ತಾರೆ. 

 

ಮಣಿಪಾಲ್ ಆಸ್ಪತ್ರೆಯು ಒಂದು ಸುರಕ್ಷಿತ ಸ್ಥಳವಾಗಿದ್ದು ಇಲ್ಲಿ ಈ ಕೆಳಗಿನ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ: 

ಸಣ್ಣ ಮಕ್ಕಳ ಚಿಕಿತ್ಸೆಗಳು 

 • ಮಕ್ಕಳ ಕುಂಠಿತ ಬೆಳವಣಿಗೆ ದೋಷಗಳು 

 • ಹೆಬ್ಬೆಟ್ಟು ಚೀಪುವುದು

 • ಉಗುರು ತಿನ್ನುವುದು

 • ದುಸ್ವಪ್ನಗಳು

 • ತಿನ್ನುವ ಮತ್ತು ನಿದ್ದೆಯ ಸಮಸ್ಯೆಗಳು 

 • ರಚ್ಚೆ ಹಿಡಿಯುವುದು 

 •  ಕದಿಯುವುದು, ಹಿಂಸೆ ಮಾಡುವುದು 

 • ಒಡಹುಟ್ಟಿದವರಲ್ಲಿ ಪೈಪೋಟಿ

 • ಪರೀಕ್ಷೆ ಹೆದರಿಕೆ

 •  ಹೊಂದಾಣಿಕೆ ಪ್ರತಿಕ್ರಿಯೆಗಳು ಮತ್ತು ಒತ್ತಡ

 • ಕಲಿಕಾ ಸಮಸ್ಯೆಗಳು

 •  ಏಕಾಗ್ರತೆ ತೊಂದರೆಗಳು 

 • ಶಾಲೆಯಲ್ಲಿ ಕಳಪೆ ಪ್ರದರ್ಶನ 

 

ಹದಿಹರೆಯದವರು ಇವುಗಳನ್ನು ಪ್ರದರ್ಶಿಸುತ್ತಾರೆ :  

 • ಬಂಡಾಯ ಅಥವಾ ಆಕ್ರಮಣಶೀಲತೆ 

 •  ಕಲಿಕೆಯ ತೊಂದರೆಗಳು

 •  ಅನುಚಿತ ಲೈಂಗಿಕ ನಡವಳಿಕೆ 

 • ಕೋಪ, ಅಸೂಯೆ ಮತ್ತು ಭಯ

 • ಹೊಂದಾಣಿಕೆ ಸಮಸ್ಯೆಗಳು 

 • ಕೀಳರಿಮೆ ಸಮಸ್ಯೆಗಳು 

 

ವಯಸ್ಕರಲ್ಲಿ ಈ ರೀತಿಯ ಸಮಸ್ಯೆಗಳಿರುತ್ತವೆ: 

 • ಆತಂಕ, ಯಾತನೆ, ನೋವು ಅಥವಾ ಖಿನ್ನತೆ

 • ಹೆದರಿಕೆಗಳು 

 • ದೀರ್ಘ ಮನೋವ್ಯಾಧಿಗಳು 

 • ಇರಿಟೇಬಲ್ ಬೋವೆಲ್ ಸಿಂಡ್ರೋಮ್ 

 • ಸಂಸಾರಿಕ ಮತ್ತು  ಲೈಂಗಿಕ ಸಮಸ್ಯೆಗಳು

 • ಆತ್ಮವಿಶ್ವಾಸದ ಕೊರತೆ ಮತ್ತು ಅಭದ್ರತೆಗಳು

 • ಅಪಕ್ವತೆ ಅಥವಾ ಕಿರಿಕಿರಿ

 • ಸ್ವಯಂ-ಖಂಡನೆ 

 

ಹಿರಿಯ ನಾಗರಿಕರಲ್ಲಿ 

FAQ's

After gathering general information about the patient’s medical history, a clinical psychologist will do a thorough examination of the patient to conclude their diagnosis.

Developmental stress Substance Abuse Depleted Brain Function Development of phobias Depression & Suicide. If you want to avoid these risk factors, visit our best clinical psychology hospital in Old Airport Bangalore.

Confused thinking and reduced ability to concentrate Excessive worrying Feelings of guilt Frequent mood changes Withdrawal from family, friends & society Tiredness and problems sleeping Changes in eating habits Trouble understanding situations Trouble understanding people Delusions and detachment from reality Sex drive changes Hostility & violence Suicidal tendencies. To know more, visit the clinical psychology hospital in Bangalore for the treatment.

With the right diagnosis and therapy, most patients see a significant improvement in their mental health. Timely intervention is important as mental health issues are easier to address during the early stages of their development, especially among young adolescents and children. Clinical psychology treatment in Bangalore is available at Manipal Hospitals, visit today.

It is important to visit a therapist at least once a year to receive a general diagnosis, especially if your work or family life is stressful. Discussing physical medical conditions may also uncover some underlying mental health conditions.

ಮಾನಸಿಕ ಆರೋಗ್ಯದ ಸೂಕ್ಷ್ಮತೆಯನ್ನು ಮತ್ತು ಚಿಕಿತ್ಸೆಯಲ್ಲಿ ಅಗತ್ಯವಿರುವ ಆರೈಕೆಯನ್ನು ಮಣಿಪಾಲ್ ಆಸ್ಪತ್ರೆಯು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ. ಆಸ್ಪತ್ರೆಯು ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸಲು ಮತ್ತು ರೋಗಿಗಳು ದೀರ್ಘಸಮಯದ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಇಂದೇ ನಮ್ಮ ಕ್ಲಿನಿಕಲ್ ಸೈಕೊಲಾಜಿಸ್ಟ್ ಒಬ್ಬರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ