ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ


ಮಣಿಪಾಲ್ ಆಸ್ಪತ್ರೆಯಲ್ಲಿರುವ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ವಿಭಾಗವು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಅಗತ್ಯವಿರುವ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗಾಗಿ ಎಲ್ಲ ರೀತಿಯ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಗಳಲ್ಲಿರುವ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸಕರ ತಂಡವು ರೋಗಿಗಳಿಗೆ ಸಮಗ್ರ ಆರೈಕೆಯನ್ನು ಒದಗಿಸಲು ಹಲವು ವಿಭಾಗಗಳ ವಿಶೇಷಜ್ಞರೊಂದಿಗೆ ಕಾರ್ಯನಿರ್ವಹಿಸುತ್ತದೆ. ಶಸ್ತ್ರಚಿಕಿತ್ಸೆ ತಂಡವು ಆಧುನಿಕ ರಿಯಲ್ ಟೈಮ್ ಇಮೇಜಿಂಗ್ ತಂತ್ರಜ್ಞಾನವಿರುವ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಒಳಗೊಂಡಿವೆ, ಇದರ ಕಾರಣ ಎಲ್ಲ ಬೇರಿಯಾಟ್ರಿಕ್ ಚಿಕಿತ್ಸಾ ವಿಧಾನಗಳನ್ನು ಬಹಳ ಪರಿಣಾಮಕಾರಿಯಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯಲ್ಲಿ ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸೆ ಬಹಳ ಸಾಮಾನ್ಯವಾಗಿದೆ.

ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಎಂದರೆ ತೂಕವನ್ನು ಇಳಿಸುವ  ಅಥವಾ ತೂಕ ಹೆಚ್ಚಾಗುವುದನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಜೀರ್ಣಾಂಗ ವ್ಯವಸ್ಥೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಬದಲಾವಣೆ ಮಾಡುವ ಒಂದು ಪ್ರಯತ್ನವಾಗಿದೆ. ಅತ್ಯಧಿಕ ತೂಕವಿರುವ ಅಪಾಯವಿದ್ದಾಗ ಅಥವಾ ದೇಹದ ತೂಕವು ರೋಗಿಯ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟು ಮಾಡುತ್ತಿದ್ದ ಸಂದರ್ಭದಲ್ಲಿ ಮಾತ್ರ ಈ ಶಸ್ತ್ರಚಿಕಿತ್ಸೆಯ ಸಲಹೆಯನ್ನು ನೀಡಲಾಗುತ್ತದೆ.

ಕೆಲವು ಮಧ್ಯಂತರ ಚಿಕಿತ್ಸೆಗಳೆಂದರೆ : 

  • ಗ್ಯಾಸ್ಟ್ರಿಕ್ ಬೈಪಾಸ್ 

  • ಡ್ಯುಯೋಡೆನಲ್ ಬದಲಿಯೊಂದಿಗೆ ಬಿಲಿಯೊಪ್ಯಾಂಕ್ರಿಯಾಟಿಕ್ ಡೈವರ್ಷನ್

  • ಸ್ಲೀವ್ ಗ್ಯಾಸ್ಟ್ರೆಕ್ಟಮಿ

  • ಹೊಂದಾಣಿಕೆ ಗ್ಯಾಸ್ಟ್ರಿಕ್ ಬ್ಯಾಂಡ್

 

Facilities & Services

ಬೇರಿಯಾಟ್ರಿಕ್ಸ್ ನಲ್ಲಿ ಲಭ್ಯವಿರುವ ಕೆಲವು ಚಿಕಿತ್ಸೆಗಳೆಂದರೆ: 

ಗ್ಯಾಸ್ಟ್ರಿಕ್ ಬೈಪಾಸ್ - ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯ ಚೀಲವನ್ನು ಎರಡಾಗಿ ಭಾಗ ಮಾಡುವುದರೊಂದಿಗೆ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡುವ ಪ್ರಕ್ರಿಯೆ ಇದಾಗಿದೆ. ಸಣ್ಣ ಕರುಳನ್ನು ನಂತರ ಭಾಗಿಸಲಾಗುತ್ತದೆ ಮತ್ತು ಭಾಗಿಸಿದ ಸಣ್ಣ ಕರುಳಿನ ಕೆಳ ತುದಿಯನ್ನು ಹೊಟ್ಟೆಯ ಚೀಲದ ಮೊದಲ ಭಾಗಕ್ಕೆ ಸಂಪರ್ಕಿಸಲಾಗುತ್ತದೆ. ಹೊಟ್ಟೆಯ ಎರಡನೆಯ ಭಾಗವು ಮತ್ತು ಸಣ್ಣ ಕರುಳಿನ ಮೇಲ್ಭಾಗದ ಸಂಪರ್ಕ ಹಾಗೆಯೇ ಇರುತ್ತದೆ, ಆದ್ದರಿಂದ ಸಣ್ಣ ಕರುಳಿನ ಕೆಳಭಾಗದಲ್ಲಿ, ಹೊಟ್ಟೆ ಚೀಲದ ಎರಡನೆಯ ಭಾಗದಲ್ಲಿ ಉತ್ಪತ್ತಿಯಾದ ಜೀರ್ಣಕಾರಿ ರಸಗಳು ಕ್ರಮೇಣವಾಗಿ ಆಹಾರದೊಂದಿಗೆ ಮಿಶ್ರಣವಾಗುತ್ತದೆ. ಈಗ ಸಣ್ಣ ಹೊಟ್ಟೆಯ ಚೀಲವೆಂದರೆ ರೋಗಿಯ ಹಸಿವು ಮತ್ತು ಅವರು ತಿನ್ನುವ ಸಾಮರ್ಥ್ಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಈ ಬೈಪಾಸ್ ಮಾಡುವುದರಿಂದ ತೂಕ ಬಹಳ ಕಡಿಮೆಯಾಗುತ್ತದೆ. ದೀರ್ಘ ಸಮಯದಿಂದ ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದ ಜನರಿಗೆ ತೂಕ ಕಡಿಮೆ ಮಾಡಲು ಮತ್ತು ಹೆಚ್ಚು ತೂಕದಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಈ ಗ್ಯಾಸ್ಟ್ರಿಕ್ ಬೈಪಾಸ್ ಸಹಾಯ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳ ಕಾರಣ ಕಾರ್ಯಾಚರಣೆಯು ಬದಲಾಗುತ್ತದೆ ಆದ್ದರಿಂದ ರೋಗಿಯು ಕೆಲವು ಆಹಾರ ಪಥ್ಯೆಯನ್ನು ಪಾಲಿಸಬೇಕಾಗುತ್ತದೆ.

FAQ's

Obese individuals are at far greater risk of dying from obesity-related diseases, including coronary artery disease, hypertension (high blood pressure), type 2 diabetes and certain cancers. A healthy weight for most people is defined as a body mass index (BMI) between 18.5 and 24.9. Hurry and visit a bariatric surgery hospital in Bangalore for the surgery.

ಇಂದೇ ನಮ್ಮ ವಿಶೇಷ ತಜ್ಞರೊಂದಿಗೆ ನಿಮ್ಮ ಭೇಟಿ ಸಮಯವನ್ನು ನಿಗದಿಪಡಿಸಿ ಮತ್ತು ಒಂದು ಆರೋಗ್ಯಕರ ಹಾಗೂ ನೋವು ರಹಿತ ಜೀವನವನ್ನು ನಡೆಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ