ಅರಿವಳಿಕೆ ಶಾಸ್ತ್ರ


ಮಣಿಪಾಲ್ ಆಸ್ಪತ್ರೆಯಲ್ಲಿರುವ ಅರಿವಳಿಕೆ ಶಾಸ್ತ್ರದ ವಿಭಾಗವು ರೋಗಿಗಳಿಗೆ ಸಂಕೀರ್ಣ ತೆರೆದ ಶಸ್ತ್ರಚಿಕಿತ್ಸೆಗಳು ಮತ್ತು ಕನಿಷ್ಠ ಇನ್ವೇಸಿವ್ ಚಿಕಿತ್ಸಾ ವಿಧಾನಗಳೆರೆಡರ ಸಮಯದಲ್ಲಿಯೂ ಸಹ ನೋವನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆಯ ಪೂರ್ವ ಆರೈಕೆಯನ್ನು ಒದಗಿಸುತ್ತದೆ. ಇದು ಇತರ ವಿಭಾಗಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಸಾಮಾನ್ಯ ಅರಿವಳಿಕೆ, ಸ್ಥಳೀಯ ಅರಿವಳಿಕೆ, ನೋವು ನಿವಾರಕ ವಿಭಾಗ, ತುರ್ತು ನಿಗಾ ಘಟಕದ ವಿಭಾಗ ಮತ್ತು ತುರ್ತು ಚಿಕಿತ್ಸಾ ವಿಭಾಗದಲ್ಲಿ ತಮ್ಮ ಸೇವೆಯನ್ನು ಒದಗಿಸುತ್ತದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಗಳಲ್ಲಿರುವ ಅರಿವಳಿಕೆ ತಜ್ಞರು ಆಸ್ಪತ್ರೆಯಲ್ಲಿನ ಅತ್ಯಂತ ಗೌರವಾನ್ವಿತ ವೈದ್ಯರುಗಳಾಗಿದ್ದಾರೆ. ಅವರು ಒಂದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಒಬ್ಬ ರೋಗಿಯ ಜೀವನದ ಜವಾಬ್ದಾರಿಯನ್ನು ಹೊಂದಿರುತ್ತಾರೆ ಅಂದರೆ ಅವರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎಲ್ಲ ಪ್ರಮುಖ ಕಾರ್ಯಾಚರಣೆಗಳು(ವೈಟಲ್ ಸೈನ್ಸ್), ಔಷಧ ಮತ್ತು ದ್ರವ್ಯಗಳ ಸಮತೋಲನ, ಉಸಿರಾಟ ಮತ್ತು ಶ್ವಾಸಕೋಶ ಎಲ್ಲವನ್ನೂ ನಿಗಾವಣೆ ಮಾಡುತ್ತಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ಅಪಾರವಾದ ಅನುಭವವು ರೋಗಿಗೆ ಮತ್ತು ಶಸ್ತ್ರಚಿಕಿತ್ಸಕರಿಗೆ ಯಾವುದೇ ರೀತಿಯ ಅನಾನುಕೂಲತೆ ಅಥವಾ ಅಪಾಯದಿಂದ ದೂರವಿರಿಸುತ್ತದೆ.

Treatment & Procedures

ಸ್ಥಳೀಯ ಅರಿವಳಿಕೆ

ಈ ರೀತಿಯ ಅರಿವಳಿಕೆಯನ್ನು ಸಾಮಾನ್ಯವಾಗಿ ಒಂದು ಸ್ಪ್ರೇ, ಚುಚ್ಚುಮದ್ದು ಅಥವಾ ಮುಲಾಮನ್ನು ಹಚ್ಚುವ ಮೂಲಕ ಕೊಡಲಾಗುತ್ತದೆ. ಇದರಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಜಾಗ ಮಾತ್ರ ಮರಗಟ್ಟಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಕೈ ಅಥವಾ ಪಾದಗಳ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ಹೊರರೋಗಿ ವಿಭಾಗದಲ್ಲಿ ಬಳಸಲಾಗುತ್ತದೆ.

Read More

ಪ್ರಾದೇಶಿಕ ಅರಿವಳಿಕೆ

ಈ ರೀತಿಯ ಅರಿವಳಿಕೆಯನ್ನು ದೇಹದ ಒಂದು ಭಾಗವನ್ನು ಅಥವಾ ಪ್ರದೇಶವನ್ನು ಮರಗಟ್ಟಿಸಲು ಬಳಸಲಾಗುತ್ತದೆ ಉದಾಹರಣೆಗೆ ಎಪಿಡ್ಯೂರಲ್ ಅಥವಾ ಸ್ಪೈನಲ್ ಅಥವಾ ನರ್ವ್ ಬ್ಲಾಕ್ ಅರಿವಳಿಕೆ.

Read More

ಸಾಮಾನ್ಯ ಅರಿವಳಿಕೆ

ಈ ರೀತಿಯ ಅರಿವಳಿಕೆಯು ರೋಗಿಯು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರಜ್ಞಾಹೀನರಾಗಲು ಅವಕಾಶ ಮಾಡಿಕೊಡುತ್ತದೆ. ಈ ಸಮಯದಲ್ಲಿ ದೇಹದ ಪ್ರಮುಖ ಕಾರ್ಯಾಚರಣೆಗಳು(ವೈಟಲ್ ಸೈನ್ಸ್) ಮತ್ತು ಅಂಗಗಳ ಕಾರ್ಯಾಚರಣೆಗಳ ಮೇಲೆ ನಿಗಾ ಇಡಲಾಗುತ್ತದೆ. ಶಸ್ತ್ರಚಿಕಿತ್ಸೆಗಾಗಿ ದೇಹದ ಒತ್ತಡ ಪ್ರಕ್ರಿಯೆಗಳನ್ನು ಕಡಿಮೆ ಮಾಡುವುದಕ್ಕಾಗಿ ನೋವು ನಿವಾರಕ ಔಷಧಗಳನ್ನು ನೀಡಲಾಗುತ್ತದೆ. ಇದು ಶಸ್ತ್ರಚಿಕಿತ್ಸೆಯ ನಂತರ ಶೀಘ್ರ ಚೇತರಿಕೆಗೆ ಸಹಾಯ ಮಾಡುತ್ತದೆ. ಒಮ್ಮೆ…

Read More

ವಿಭಿನ್ನ ವಿಧಗಳ ಅರಿವಳಿಕೆ ಎಂದರೆ: 

  • ಸಾಮಾನ್ಯ ಅರಿವಳಿಕೆ : ನಿರಂತರವಾಗಿ  ಅರಿವಳಿಕೆ ಔಷಧಿಗಳನ್ನು ಕೊಡುವ ಮೂಲಕ  ಶಸ್ತ್ರಚಿಕಿತ್ಸೆಯ ಉದ್ದಕ್ಕೂ ರೋಗಿಯನ್ನು ನೋವು ರಹಿತ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಇಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ಕೊನೆಯಲ್ಲಿ, ಅರಿವಳಿಕೆಯ ಪರಿಣಾಮ ಕಡಿಮೆಯಾಗಿ ರೋಗಿಯ ಪ್ರಜ್ಞೆಯು ಮರಳುತ್ತದೆ. 

  • ಪ್ರಾದೇಶಿಕ ಅರಿವಳಿಕೆ: ಇದರಲ್ಲಿ ರೋಗಿಗೆ ಪ್ರಜ್ಞೆ ಇರುತ್ತದೆ ಆದರೆ ಸ್ಥಳೀಯ ಅರಿವಳಿಕೆಯ ಚುಚ್ಚುಮದ್ದನ್ನು ನೀಡುವ ಮೂಲಕ ಶಸ್ತ್ರಚಿಕಿತ್ಸೆ ಮಾಡಬೇಕಾದ ಭಾಗವನ್ನು ತಾತ್ಕಾಲಿಕವಾಗಿ ಮರಗಟ್ಟಿಸಲಾಗಿರುತ್ತದೆ. ಒಂದುವೇಳೆ ಇದೇ ಚುಚ್ಚುಮದ್ದನ್ನು ಬೆನ್ನು ಹುರಿಯ ಸುತ್ತಲಿರುವ ದ್ರವದ ಒಳಗೆ ನೀಡಿದಾಗ ಇದು ಸ್ಪೈನಲ್ ಅರಿವಳಿಕೆ ಎನ್ನುತ್ತಾರೆ. ಮತ್ತು ಒಂದುವೇಳೆ ಈ ಸ್ಥಳೀಯ ಅರಿವಳಿಕೆಗಳನ್ನು ಬೆನ್ನುಹುರಿಯ ಸುತ್ತಲೂ ಮುಚ್ಚಿರುವ ಒಂದು ಪದರದಲ್ಲಿ ನೀಡಿದರೆ ಆಗ ಅದನ್ನು ಎಪಿಡ್ಯೂರಲ್ ಅರಿವಳಿಕೆ ಎನ್ನುತ್ತಾರೆ. ಒಂದುವೇಳೆ ಈ ಚುಚ್ಚುಮದ್ದನ್ನು ಒಂದು ನಿರ್ದಿಷ್ಟ ನರಸಮೂಹಗಳ ಸುತ್ತ ನೀಡಿದರೆ ಆಗ ಇದನ್ನು ಪ್ಲೆಕ್ಸಸ್ ಬ್ಲಾಕ್ ಎನ್ನುತ್ತಾರೆ. 

  • ನಿಗಾವಣೆಯ ಅರಿವಳಿಕೆ ಆರೈಕೆ: ಸ್ಥಳೀಯ ಅರಿವಳಿಕೆಯನ್ನು ಶಸ್ತ್ರಚಿಕಿತ್ಸೆ ಮಾಡಬೇಕಾದ ಜಾಗದ ಸುತ್ತಲೂ ನೀಡಿದ ನಂತರ ತಕ್ಷಣವೇ ಕೆಲವು ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು. ಇದನ್ನು ಸಾಮಾನ್ಯವಾಗಿ ಸಣ್ಣ ಶಸ್ತ್ರಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಅದಾಗಿಯೂ, ಕೆಲವೊಮ್ಮೆ ರೋಗಿಯು ಹೆಚ್ಚು ಉದ್ವೇಗವನ್ನು ಹೊಂದಿದ್ದರೆ ಅಥವಾ ಶಸ್ತ್ರಚಿಕಿತ್ಸೆಯ ಸಮಯ ನಿರೀಕ್ಷೆಗಿಂತಲೂ ಹೆಚ್ಚಿನದ್ದಾಗಿದ್ದರೆ ಆಗ ಅರಿವಳಿಕೆ ತಜ್ಞರನ್ನು ಅರಿವಳಿಕೆ ಔಷಧಿ ಅಥವಾ ನೋವು ನಿವಾರಕ ಔಷಧಿಯನ್ನು ಅಗತ್ಯದಂತೆ ನೀಡಲು ಕೇಳಿಕೊಳ್ಳಲಾಗುತ್ತದೆ. 

 

ಅರಿವಳಿಕೆ ವಿಭಾಗವು ದೈನಂದಿನವಾಗಿ 25ಕ್ಕೂ ವಿಭಿನ್ನ ವಿಭಾಗಗಳಿಗೆ ಸೇವೆ ಸಲ್ಲಿಸುವ ಬಹಳ ಕಾರ್ಯನಿರತವಾಗಿರುವ ವಿಭಾಗವಾಗಿದೆ. 

ಒಬ್ಬ ಅರಿವಳಿಕೆ ತಜ್ಞನು ನೀವು ಸುರಕ್ಷಿತವಾಗಿ ಮತ್ತು ಅನುಕೂಲಕರವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು, ನೋವು ನಿರ್ವಹಣೆಯಲ್ಲಿ ಸಹಾಯ ಮಾಡುತ್ತಾರೆ ಮತ್ತು ಈ ಸರಿಯಾದ ನೋವು ನಿರ್ವಹಣೆಯು ಉತ್ತಮ ಶಸ್ತ್ರಚಿಕಿತ್ಸಾ ಯಶಸ್ಸನ್ನು ನೀಡುವ ಜೊತೆಯಲ್ಲಿ ಇವರು ಶಸ್ತ್ರಚಿಕಿತ್ಸೆಯ ನಂತರ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಚೇತರಿಕೆಯಲ್ಲಿ ಸಹಾಯ ಮಾಡುತ್ತಾರೆ.  

 

Facilities & Services

ಅರಿವಳಿಕೆ ವಿಭಾಗವು ಈ ಕೆಳಗಿನವುಗಳಲ್ಲಿ ತಮ್ಮ ಪರಿಣಿತಿ ಮತ್ತು ಆರೈಕೆಯ ಸೇವೆಗಳನ್ನು ಒದಗಿಸುತ್ತಾರೆ: 

  1. ನೋವು ನಿರ್ವಹಣೆ 

  2. ಕಾರ್ಡಿಯಾಕ್ ಅರಿವಳಿಕೆ 

  3. ಮಕ್ಕಳ ಅರಿವಳಿಕೆ 

  4. ನರ ಅರಿವಳಿಕೆ 

  5. ಸ್ತ್ರೀರೋಗ ಅರಿವಳಿಕೆ 

  6. ತುರ್ತು ನಿಗಾ ಮೆಡಿಸಿನ್ ವಿಭಾಗದಲ್ಲಿ ಅರಿವಳಿಕೆ 

  7. ವಿಶ್ರಾಂತಿ ಮತ್ತು ಉಪಶಾಮಕ ಔಷಧ

FAQ's

There are three types of anesthesia; local, regional, and general. Local anesthesia is specific; a small area of the body is numbed while one is conscious or awake. Regional anesthesia is administered to numb a specific region of nerves on the body. The patient may be awake/ conscious or receive a sedative for a light sleep during the operation. The patient may remember parts of the procedure but should be free of pain. General anesthesia is a state of regulated unconsciousness that results in a loss of body sensation through anesthetic drugs, such as gases or vapors inhaled through a mask or breathing tube or drugs given through an IV. It is rare for patients to have any memory during general anesthesia. Visit our anesthesiology hospital in Old Airport Road for treatment.

ಒಂದುವೇಳೆ ನೀವು ನಿಮ್ಮ ಯಾವುದೇ ಸಮಸ್ಯೆಗಳಿಗಾಗಿ ಶಸ್ತ್ರಚಿಕಿತ್ಸೆಯ ಕುರಿತಾಗಿ ಆಲೋಚಿಸುತ್ತಿದ್ದರೆ ಉತ್ತಮ ಶಸ್ತ್ರಚಿಕಿತ್ಸೆಯ ಪರಿಹಾರಗಳು ಮತ್ತು ನಿರ್ವಹಣೆಗಾಗಿ ನಮ್ಮನ್ನು ಇಂದೇ ಭೇಟಿ ನೀಡಿ. ನಾವು ನಿಮಗೆ ದೇಶದಲ್ಲಿಯೇ ಅತ್ಯಂತ ಕಡಿಮೆ ಚಿಕಿತ್ಸಾ ಆಯ್ಕೆಗಳು ಮತ್ತು ಅತ್ಯಂತ ಕನಿಷ್ಠ ಇನ್ವೇಸಿವ್ ವಿಧಾನವನ್ನು ನೀಡಬಲ್ಲೆವು. ಇಂದೇ ನಮ್ಮ ವಿಶೇಷಜ್ಞರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಿಕೊಳ್ಳಿ ಮತ್ತು ಆರೋಗ್ಯಕರ ಜೀವನವನ್ನು ನಡೆಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ